ದಾನಿಗಳ ಸಹಾಯ-ಸಹಕಾರದಿಂದ ಅಗ್ನಿವೀರರ ನೇಮಕಾತಿ Rally ಯಶಸ್ವಿ

By Kannadaprabha News  |  First Published Sep 22, 2022, 11:12 AM IST

ಮೂಲಭೂತ ಸೌಕರ್ಯಗಳ ಕೊರತೆ ಇರುವ ಹಾವೇರಿ ಜಿಲ್ಲೆಯಲ್ಲಿ ಭಾರತೀಯ ಸೇನೆಗೆ ಯುವಕರ ಸೇರ್ಪಡೆಗಾಗಿ ಅಗ್ನಿಪಥ್‌ ಯೋಜನೆಯಡಿ ಹದಿನೆಂಟುದಿನಗಳ ಕಾಲ ಜರುಗಿದ ಅಗ್ನಿವೀರರ ನೇಮಕಾತಿ ಯಶಸ್ವಿಯಾಗಿದೆ. ಮೂಲ ಸೌಕರ್ಯ ಕಲ್ಪಿಸಲು ಹಾವೇರಿ ಪಟ್ಟಣದ ಸಂಘ-ಸಂಸ್ಥೆಗಳು, ನಾಗರಿಕರು ಕೈಹಿಡಿದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.


 ಹಾವೇರಿ (ಸೆ.22) : ಮೂಲಭೂತ ಸೌಕರ್ಯಗಳ ಕೊರತೆ ಇರುವ ಹಾವೇರಿ ಜಿಲ್ಲೆಯಲ್ಲಿ ಭಾರತೀಯ ಸೇನೆಗೆ ಯುವಕರ ಸೇರ್ಪಡೆಗಾಗಿ ಅಗ್ನಿಪಥ್‌ ಯೋಜನೆಯಡಿ ಹದಿನೆಂಟುದಿನಗಳ ಕಾಲ ಜರುಗಿದ ಅಗ್ನಿವೀರರ ನೇಮಕಾತಿ ಯಶಸ್ವಿಯಾಗಿದೆ. ಮೂಲ ಸೌಕರ್ಯ ಕಲ್ಪಿಸಲು ಹಾವೇರಿ ಪಟ್ಟಣದ ಸಂಘ-ಸಂಸ್ಥೆಗಳು, ನಾಗರಿಕರು ಕೈಹಿಡಿದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ನೀವು ವೀರ್‌ ಆಗಿರಬಹುದು, ಅಗ್ನಿವೀರ್‌ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್‌!

Latest Videos

undefined

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಗ್ನಿವೀರರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅಭ್ಯರ್ಥಿಗಳಿಗೆ ಊಟ, ಉಪಹಾರ, ವಸತಿ ಸೌಲಭ್ಯ ಕಲ್ಪಿಸಲು ನೆರವಾದ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ 20 ದಿನಗಳ ಕಾಲ ಆಯ್ಕೆ ಪ್ರಕ್ರಿಯೆಗೆ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸಿದ ಅಧಿಕಾರಿಗಳು ಒಳಗೊಂಡಂತೆ ಪೌರಕಾರ್ಮಿಕರು ಹಾಗೂ ವಿವಿಧ ನೌಕರರ ಬಳಗಕ್ಕೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಿ ಪ್ರಶಂಶಾ ಪತ್ರ ನೀಡಿ ಗೌರವಿಸಲಾಯಿತು.

ಅಗ್ನಿಪಥ್‌ ರಾರ‍ಯಲಿಗೆ .24 ಲಕ್ಷ ವೆಚ್ಚವಾಗಿದೆ. ಅಗ್ನಿವೀರರ ನೇಮಕಾತಿಗೆ ಸರ್ಕಾರದ ಯಾವುದೇ ನೆರವು ಇರಲಿಲ್ಲ. ಪ್ರತಿದಿನ ಮೂರಿಂದ ನಾಲ್ಕುಸಾವಿರ ಅಭ್ಯರ್ಥಿಗಳಿಗೆ ಉಪಹಾರ-ಊಟ, ತಾತ್ಕಾಲಿಕ ವಸತಿ ಸೌಕರ್ಯಗಳನ್ನು ಕಲ್ಪಿಸಬೇಕಾಗಿತ್ತು. ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಅಧಿಕಾರಿ, ಸಿಬ್ಬಂದಿಗೆ 20 ದಿನಗಳ ಕಾಲ ವಸತಿ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿತ್ತು. ಸತತ ಮಳೆಯಿಂದ ನಿತ್ಯವೂ ಕ್ರೀಡಾಂಗಣದಲ್ಲಿ ನೀರು ತುಂಬಿ ತೊಂದರೆಗೊಳಗಾಗುತ್ತಿತ್ತು. ವಿವಿಧ ಇಲಾಖಾ ಅಧಿಕಾರಿಗಳ ಸಂಘಟನಾತ್ಮಕ ಅವಿರತ ಶ್ರಮ, ಸಂಘ-ಸಂಸ್ಥೆ, ಹೋಟೆಲ್‌, ಕಲ್ಯಾಣ ಮಂಟಪ, ಸಮುದಾಯ ಭವನಗಳ ಮಾಲೀಕರ ಸೇವಾ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಉದಾರವಾದ ನೆರವು ಒದಗಿಸಿ ಉಚಿತ ಊಟ, ವಸತಿ ನೀಡಿದ್ದಾರೆ. ಸರಾಗವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಕಾರಣರಾಗಿದ್ದಾರೆ. ಕೆಲ ಅಭ್ಯರ್ಥಿಗಳು ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳಲ್ಲಿ ಕೆಲ ವಸ್ತುಗಳಿಗೆ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ. ಜಿಲ್ಲಾಡಳಿತ ವತಿಯಿಂದ ಎಲ್ಲವನ್ನೂ ದುರಸ್ತಿಪಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಹದಿನೆಂಟು ದಿನಗಳ ಅವಧಿಯಲ್ಲಿ 43 ಸಾವಿರ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು ಯಶಸ್ವಿಯಾಗಿದ್ದು ಮಾತ್ರ 4,200 ಅಭ್ಯರ್ಥಿಗಳು ಮಾತ್ರ. ಇದು ನಿರಾಶೆ ತಂದಿದೆ. ಕನಿಷ್ಠ ಹತ್ತು ಸಾವಿರಕ್ಕೂ ಹೆಚ್ಚು ಜನ ಈ ಭಾಗದಿಂದ ಭಾರತೀಯ ಸೇನೆಗೆ ಆಯ್ಕೆಯಾಗುವ ವಿಶ್ವಾಸವಿತ್ತು. ಅದು ಸಾಧ್ಯವಾಗಿಲ್ಲ, ಯುವ ಸಮೂಹ ನಿರಂತರ ಶ್ರಮ, ಅಭ್ಯಾಸಗಳಲ್ಲಿ ತೊಡಗಿದರೆ ಹೆಚ್ಚು ಆಯ್ಕೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

ಸೇವಾ ಭಾರತಿ ಸಂಸ್ಥೆಯ ಕಾರ್ಯದರ್ಶಿ ರಘು ಮುಗಜ್ಜಿ ಮಾತನಾಡಿ, ಅಗ್ನಿಪಥ್‌ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಭಾರತೀಯ ಸೇನೆಗೆ ನಮ್ಮ ಮಕ್ಕಳು ಸೇರ್ಪಡೆಯಾಗುವುದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ವಿಶೇಷ ಸಂದರ್ಭದಲ್ಲಿ ನಮಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುವೆ. ಸೇವಾ ಭಾರತಿ ನಿಮಿತ್ತ ಮಾತ್ರ ಜಿಲ್ಲೆಯ ವಿವಿಧ ದಾನಿಗಳ ನೆರವಿನಿಂದ ಈ ಕಾರ್ಯಮಾಡಲು ಸಾಧ್ಯವಾಗಿದೆ. ಎಲ್ಲರನ್ನೂ ಒಂದೇಸೂರನಡಿ ತಂದು ಭಾರತೀಯ ಸೇನೆಗೆ ಸೇರಲು ಮುಂದಾಗಿರುವ ಹೆಮ್ಮೆಯ ಪುತ್ರರರಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ರೆಡ್‌ಕ್ರಾಸ್‌ ಸಂಸ್ಥೆಯ ಅಧ್ಯP್ಷÜ ಸಂಜೀವಕುಮಾರ ನೀರಲಗಿ, ಸೇವಾ ಭಾರತಿ ಸಂಸ್ಥೆಯ ಕಾರ್ಯದರ್ಶಿ ರಘು ಮುಗಜ್ಜಿ, ವಿವಿಧ ಕಲ್ಯಾಣ ಮಂಟಪ, ಸಮುದಾಯ ಭವನಗಳ ಮಾಲೀಕರು ಸೇರಿದಂತೆ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳಿಗೆ, ಅಧಿಕಾರಿ, ಸಿಬ್ಬಂದಿಗಳನ್ನುಸನ್ಮಾನಿಸಲಾಯಿತು.

ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್‌ ಬಗ್ಗೆ ಸೇನೆಯ ಸ್ಪಷ್ಟನೆ!

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್‌ ರೋಷನ್‌, ಅಪರ ಜಿಲ್ಲಾಧಿಕಾರಿ ಡಾ. ಎನ್‌. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ, ತಹಸೀಲ್ದಾರ್‌ ಗಿರೀಶ ಸ್ವಾದಿ ಹಾಗೂ ಅಗ್ನಿವೀರ ನೇಮಕಾತಿ ವಿವಿಧ ಉಸ್ತುವಾರಿ ಅಧಿಕಾರಿಗಳು ಭಾಗವಹಿಸಿದ್ದರು.

click me!