- ಕೋವಿಡ್ ನಂತರದಲ್ಲಿ ಯಾವುದೇ ತಿಂಗಳಲ್ಲಿ ಗರಿಷ್ಠ
- ಚೇತರಿಸಿಕೊಂಡ ದೇಶದ ಆರ್ಥಿಕತೆ, ಉದ್ಯೋಗ ಸೃಷ್ಟಿ
- ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ
ಕೋಲ್ಕತಾ(ಮೇ.16): ಕಳೆದ ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿ ದೇಶದ ಆರ್ಥಿಕತೆ ಚಿಗಿತುಕೊಂಡಿರುವ ಸಿಹಿ ಸುದ್ದಿ ಬೆನ್ನಲ್ಲೇ, ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ 88 ಲಕ್ಷ ಜನರು ಹೊಸದಾಗಿ ಉದ್ಯೋಗ ಪಡೆದುಕೊಂಡಿದ್ದಾರೆ ವರದಿಯೊಂದು ತಿಳಿಸಿದೆ.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ವರದಿ ಅನ್ವಯ, ಕಳೆದ ಏಪ್ರಿಲ್‌ನಲ್ಲಿ 88 ಲಕ್ಷ ಜನರು ಹೊಸದಾಗಿ ಉದ್ಯೋಗ ಪಡೆದುಕೊಳ್ಳುವುದರೊಂದಿಗೆ ಒಟ್ಟು ಉದ್ಯೋಗ ಹೊಂದಿರುವವರ ಸಂಖ್ಯೆ 43.72 ಕೋಟಿಗೆ ತಲುಪಿದೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ಯಾವುದೇ ತಿಂಗಳೊಂದರಲ್ಲಿ ಇಷ್ಟುಪ್ರಮಾಣದ ಜನರು ದೇಶದಲ್ಲಿ ಹೊಸದಾಗಿ ಉದ್ಯೋಗ ವರ್ಗಕ್ಕೆ ಸೇರಿಕೊಂಡಿದ್ದು ಇದೇ ಮೊದಲು ವರದಿ ಹೇಳಿದೆ.
undefined
ದೂರ ಶಿಕ್ಷಣದಿಂದ ಕೆಲಸ ಕಳೆದುಕೊಂಡ ವ್ಯಕ್ತಿಗೆ ಉದ್ಯೋಗ: ಹೈಕೋರ್ಟ್
ದುಡಿಯುವ ವಯೋಮಾನದ ಜನರು ಹೊಸದಾಗಿ ಪ್ರತಿ ತಿಂಗಳು ಉದ್ಯೋಗ ಪಡೆಯುವ ಪ್ರಮಾಣ ಸಾಮಾನ್ಯವಾಗಿ 20 ಲಕ್ಷಕ್ಕಿಂತ ಹೆಚ್ಚಿಗೆ ಆಗುವುದು ಸಾಧ್ಯವಿಲ್ಲ. ಅದರ ಹೊರತಾಗಿಯೂ ಅದು 88 ಲಕ್ಷಕ್ಕೆ ತಲುಪಿದೆ ಎಂದರೆ, ಈ ಹಿಂದೆ ಉದ್ಯೋಗ ಕಳೆದುಕೊಂಡ ಹಲವರು ಮರಳಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರ್ಥ. ಏಪ್ರಿಲ್‌ಗೂ ಹಿಂದಿನ ಮೂರು ತಿಂಗಳಲ್ಲಿ 1.2 ಕೋಟಿ ಉದ್ಯೋಗ ನಷ್ಟವಾಗಿತ್ತು ಎಂದು ವರದಿ ಹೇಳಿದೆ.
ಜೊತೆಗೆ 2020-22ರ ಹಣಕಾಸು ವರ್ಷದಲ್ಲಿ ಹೀಗೆ ಮಾಸಿಕ ಹೊಸದಾಗಿ ಉದ್ಯೋಗ ವಲಯಕ್ಕೆ ಸೇರ್ಪಡೆಗೊಂಡವರ ಪ್ರಮಾಣ ಸರಾಸರಿ 20 ಲಕ್ಷ ಇತ್ತು ಎಂದು ವರದಿ ಹೇಳಿದೆ.
ಮಹತ್ವದ ಎರಡು ಆದೇಶ: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್
- ಆರ್ಥಿಕತೆ ಮತ್ತಷ್ಟುಚೇತರಿಕೆಗೆ ಪುರಾವೆ
- ದುಡಿಯುವ ವಯೋಮಾನದವರಿಗೆ ನೌಕರಿ ಸಿಗುತ್ತದೆ
- ಮಾಸಿಕ 20 ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಸಿಗುವುದಿಲ್ಲ
- ಏಪ್ರಿಲ್‌ನಲ್ಲಿ 88 ಲಕ್ಷ ಮಂದಿಗೆ ನೌಕರಿ ದೊರೆತಿದೆ
- ಇದರರ್ಥ ಉದ್ಯೋಗ ಕಳೆದುಕೊಂಡಿದ್ದವರಿಗೆ ನೌಕರಿ ಸಿಕ್ಕಿದೆ
- ಹಿಂದಿನ 3 ತಿಂಗಳಲ್ಲಿ 1.2 ಕೋಟಿ ಉದ್ಯೋಗ ಲಭಿಸಿತ್ತು
- ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ
ಯಾವ ವಲಯದಲ್ಲಿ ಉದ್ಯೋಗ
ಕೈಗಾರಿಕಾ ವಲಯ 55 ಲಕ್ಷ
ಸೇವಾ ವಲಯ 67 ಲಕ್ಷ
ಇತರೆ ವಲಯ 08 ಲಕ್ಷ
ಕೃಷಿ ವಲಯ 52 ಲಕ್ಷ
ತಾಂತ್ರಿಕ ಶಿಕ್ಷಣದಲ್ಲಿ ಉದ್ಯಮಶೀಲತೆ ಪಠ್ಯ ಅಳವಡಿಕೆ
ಕೈಗಾರಿಕಾ ಉದ್ಯಮಶೀಲತೆಗೆ ಸಂಬಂಧಿಸಿ ತಾಂತ್ರಿಕ ಶಿಕ್ಷಣದಲ್ಲಿ ಪಠ್ಯ ಅಳವಡಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್ ನಿರಾಣಿ ಹೇಳಿದ್ದಾರೆ.ಕೈಗಾರಿಕಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಲು ಕಾಲೇಜು ವಿದ್ಯಾರ್ಥಿಗಳಿಗೆ ಮಂಗಳೂರಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ‘ಉದ್ಯಮಿಯಾಗು-ಉದ್ಯೋಗ ನೀಡು’ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೈಗಾರಿಕಾ ರಂಗದಲ್ಲಿ ಉದ್ಯಮಶೀಲತೆ ಬೆಳೆಸಿಕೊಳ್ಳಲು ತಾಂತ್ರಿಕ ಶಿಕ್ಷಣದ ಪಠ್ಯಗಳಲ್ಲಿ ಕೈಗಾರಿಕೆಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದು, ಪೂರಕ ಪ್ರಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದರು.