Dream JOB ಇಂತಾ ಕೆಲಸ ಸಿಗಬೇಕು, ಏನೂ ಮಾಡದ ಈತನಿಗೆ ತಿಂಗಳಿಗೆ 1.70 ಲಕ್ಷ ರೂಪಾಯಿ ವೇತನ!

By Suvarna NewsFirst Published Sep 6, 2022, 4:47 PM IST
Highlights

ಈತ ಏನೂ ಮಾಡುವುದಿಲ್ಲ. ಅದುವೇ ಈತನ ಕೆಲಸ. ತಿಂಗಳ 30 ದಿನವೂ ಈತ ಬ್ಯುಸಿ. ಅಪಾಯಿಂಟ್‌ಮೆಂಟ್‌ಗೆ ತಿಂಗಳುಗಟ್ಟಲೇ ಕಾಯಬೇಕು. ಪ್ರತಿ ಗಂಟೆಗೆ 71 ಡಾಲರ್ ಅಂದರೆ ಪ್ರತಿ ದಿನ 8 ಗಂಟೆ ಕೆಲಸ ಮಾಡಿದರೆ ತಿಂಗಳ ಸಂಬಳ 1.70 ಲಕ್ಷ ರೂಪಾಯಿ.  
 

ಜಪಾನ್(ಸೆ.6):  ತಿಂಗಳ ವೇತನ, ದಿನಗೂಲಿ, ಗಂಟೆಗಳಲ್ಲಿ ವೇತನ ಪಡೆಯಲು ಏನಾದರೂ ಒಂದು ಕೆಲಸ ಮಾಡಬೇಕು. ಕೆಲಸಕ್ಕೆ ಅನುಗುಣವಾಗಿ ವೇತನ ಸಿಗಲಿದೆ. ಕ್ರಿಯೇಟೀವ್, ಡಿಸೈನ್, ಕಲೆ, ಕರುಕುಶಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಷ್ಟು ಗಂಟೆ ಕೆಲಸ ಮಾಡಿದ್ದೀರಿ ಅನ್ನೋದಕ್ಕಿಂತ ಕ್ರಿಯಾತ್ಮಕತೆ, ಕಲೆ ವಿಚಾರಕ್ಕೆ ಬೆಲೆ ಕಟ್ಟಲಾಗುತ್ತದೆ. ಇದರ ಹಿಂದೆ ಒಂದಷ್ಟು ಕೆಲಸ ಅಥವಾ ಶ್ರಮ ಹಾಕಿರುತ್ತಾರೆ. ಆದರೆ ಇಲ್ಲೊಬ್ಬ ಯಾವುದೇ ಕೆಲಸ ಮಾಡುತ್ತಿಲ್ಲ. ಆದರೆ ಅದುವೆ ಅತನ ಬಹುದೊಡ್ಡ ಕೆಲಸ. ಇದಕ್ಕೆ ವೇತನ ಕೂಡ ಪಡೆಯುತ್ತಿದ್ದಾರೆ. ಪ್ರತಿ ಗಂಟೆಗೆ 71 ಡಾಲರ್ ಈತ ಚಾರ್ಜ್ ಮಾಡುತ್ತಾನೆ. ಪ್ರತಿ ದಿನ 8 ಗಂಟೆ ದುಡಿದರೆ ಈತನ ತಿಂಗಳ ವೇತನ ಸರಿಸುಮಾರು 1.70 ಲಕ್ಷ ರೂಪಾಯಿ. ಸಿಕ್ಕಿದರೆ ಈತನಂತ ಕೆಲಸ ಸಿಗಬೇಕು. ಕಾರಣ ಏನೂ ಕೆಲಸ ಮಾಡದೆ ಸಂಬಳ ಪಡೆಯುವ ವಿಶ್ವದ ಏಕೈಕ ವ್ಯಕ್ತಿ ಈತ. ಈತನ ಹೆಸರು ಶೋಜಿ ಮೊರಿಮೊಟೊ. 38 ವರ್ಷದ ಶೋಜಿ ಜಪಾನ್ ನಿವಾಸಿ. ಈತನ ಮಾತುಗಳಲ್ಲಿ ಹೇಳುವುದಾದರೆ ತನ್ನನ್ನು ತಾನು ಬಾಡಿಗೆ ನೀಡುತ್ತಾನೆ. ಅಂದರೆ ಕ್ಲೈಂಟ್ ಜೊತೆಗಿರಲು, ಅವರ ಜೊತೆಗೆ ಸ್ನೇಹಿಯಾಗಿರಲು, ಮಾತನಾಡುತ್ತಾ ಹರಟೆ ಹೊಡೆಯಲು, ಆತ್ಮೀಯ ಒಡನಾಡಿಯಾಗಿರಲು ಈತ ತನ್ನನ್ನು ತಾನೇ ಬಾಡಿಗೆ ನೀಡುತ್ತಾನೆ. ಇದಕ್ಕೆ ಚಾರ್ಜ್ ಮಾಡುತ್ತಾನೆ.

ಅರೆ ಈತನನ್ನು ಬಾಡಿಗೆ(Rent Himself) ಪಡೆಯುವವರ ಯಾರು? ಏತಕ್ಕಾಗಿ ಈತನನ್ನು ಬಾಡಿಗೆ ಪಡೆಯಬೇಕು ಅನ್ನೋ ಹಲವು ಪ್ರಶ್ನೆಗಳು ಮೂಡುವುದು ಸಹಜ. ಗ್ರಾಹಕರು ನನ್ನನ್ನು ಬಾಡಿಗೆ ಪಡೆದು ಅವರ ಕ್ಲೈಂಟ್(Client) ಜೊತೆಗಿರಲು ಮಾತನಾಡಿಲು ಹೇಳುತ್ತಾರೆ. ಹಲವು ಬಾರಿ ಕೆಲ ಸ್ಥಳಗಳಲ್ಲಿ ಇರಬೇಕೆಂದು ಗ್ರಾಹಕರು ಹೇಳುತ್ತಾರೆ. ಅಲ್ಲಿದ್ದು ತನ್ನ ಸಮಯ ಮುಗಿದಾ ಬರುತ್ತೇನೆ. ಈ ರೀತಿ ಕಳೆದ ನಾಲ್ಕು ವರ್ಷಗಳಲ್ಲಿ 4,000 ಸೆಶನ್ ಪೂರ್ಣಗೊಳಿಸಿದ್ದಾನೆ. ಓರ್ವ ಗ್ರಾಹಕರ(Customer) ಈತನನ್ನು 270 ಬಾರಿ  ನೇಮಿಸಿಕೊಂಡಿದ್ದಾನೆ.

ಇದ್ದಕ್ಕಿದ್ದಂತೆ ಅಕೌಂಟ್‌ಗೆ ಬಿತ್ತು ಕೋಟಿ ರೂ. ಸ್ಯಾಲರಿ: ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯೋಗಿ ಪರಾರಿ

ಡೇಟಾ ವಿಶ್ಲೇಷಕಿ ಅರುಣಾ ಚಿದಾ ಕಳೆದ ವಾರ ಶೋಜಿಯನ್ನು ನೇಮಿಸಿಕೊಂಡಿದ್ದರು. ವಿಶ್ಲೇಷಕಿ ಎದುರು ಕುಳಿತುಕೊಳ್ಳುವುದು, ಚಹಾ ಮತ್ತು ಕೇಕ್ ಕುರಿತು ಸಂಭಾಷಣೆ ಮಾಡಿದ್ದಾನೆ. ಅರುಣಾ ಚಿದ ಭಾರತೀಯ ಉಡುಗೆಯನ್ನು ಸಾರ್ವಜನಿಕಗಾವಿ ಧರಿಸಬೇಕು ಎಂದು ಬಯಸಿದ್ದರು. ಆದರೆ ಇದು ತನ್ನ ಗೆಳೆಯರಿಂದ ನಗೆಪಾಟಲೀಗೀಡಾಗಬಹುದೆಂಬ ಆತಂಕದಿಂದ ಶೋಜಿಯನ್ನು ನೇಮಿಸಿಕೊಂಡಿದ್ದರು. ಇಷ್ಟೆ ನೋಡಿ. ಕೆಲಸ ಮುಗಿಸಿ ಹಣ(Do Nothing get paid) ಜೇಬಿಗಿಳಿಸಿ ಅಲ್ಲಿಂದ ಹೊರಟಿದ್ದಾನೆ. ಆದರೆ ಶೋಜಿ ಲೈಂಗಿಕ ವಿನಂತಿಗಳನ್ನು ಸ್ವೀಕರಿಸುವುದಿಲ್ಲ. 

ಸಾಮಾಜಿಕ ಜಾಲತಾಣದಲ್ಲಿ ಭಾರಿ ಅನುಯಾಯಿಗಳನ್ನು ಹೊಂದಿರುವ ಶೋಜಿ ತನ್ನ ಹೆಚ್ಚಿನ ಗ್ರಾಹಕರನ್ನು ಇಲ್ಲಿಂದಲೇ ಪಡೆಯುತ್ತಾರೆ. ಕೆಲವರು ಉದ್ಯಾನವನಕ್ಕೆ ಹೋಗಲು ಬಯಸುತ್ತಾರೆ. ಆದರೆ ಅವರಿಗೆ ಯಾವುದೇ ಕಂಪನಿ ಇಲ್ಲದೆ ತನ್ನ ನಿರ್ಧಾರದಿಂದ ಅನಿವಾರ್ಯವಾಗಿ ಹಿಂದೆ ಸರಿಯಬೇಕಾಗುತ್ತದೆ. ಈ ಹಿಂದೆ ಇದೇ ರೀತಿ ಉದ್ಯಾನವನಕ್ಕೆ ಹೋಗಲು ಶೋಜಿಯನ್ನು(Shoji Morimoto) ಓರ್ವ ನೇಮಿಸಿಕೊಂಡಿದ್ದ. ಈ ಗ್ರಾಹಕನ ಜೊತೆ ಉದ್ಯಾನವನಕ್ಕೆ ತೆರಳಿ ಒಂದಷ್ಟು ಸಮಯ ಆತನ ಜೊತೆ ಗೆಳೆಯನ ರೀತಿ ಕಳೆದಿದ್ದಾನೆ. 

Highest Paid CEO:ಈಗ ಭಾರತದ ಅತೀಹೆಚ್ಚು ವೇತನ ಪಡೆಯೋ ಸಿಇಒ ಸಲೀಲ್‌ ಪಾರೇಖ್‌ ಅಲ್ಲ, ಮತ್ತೆ ಯಾರು? ಇಲ್ಲಿದೆ ಮಾಹಿತಿ

ಏನೂ ಮಾಡದೆ ಹಣ(Income) ಗಳಿಸುತ್ತಿರುವ ಶೋಜಿ ಏಕಾಂಗಿಯಲ್ಲ. ಪತ್ನಿ ಹಾಗೂ ಮಗುವಿನ ಸುಂದರ ಸಂಸಾರವಿದೆ. ಈ ಸಂಸಾರದ ಬಂಡಿ ಇದೇ ಕೆಲಸದಿಂದ ಸಾಗುತ್ತಿದೆ. ಕೊರೋನಾಗೂ ಮೊದಲು ಪ್ರತಿ ದಿನ 4 ರಿಂದ 5 ಕ್ಲೈಂಟ್ ಕಾಲ್ ತೆಗೆದುಕೊಳ್ಳುತ್ತಿದೆ. ಕೊರೋನಾ ಬಳಿಕ 2 ರಿಂದ ಮೂರು ಮಾತ್ರ ಎಂದಿದ್ದಾನೆ. ತಿಂಗಳ ಸಂಪಾದನೆ ಎಷ್ಟು ಅನ್ನೋದನ್ನು ಈತ ಬಾಯ್ಬಿಟ್ಟಿಲ್ಲ.

click me!