Agnipath recruitment rally: ನೇಮಕಾತಿಗೆ ಬಂದವರ ಹಸಿವು ನೀಗಿಸುತ್ತಿರುವ ಸೇವಾ ಸಂಸ್ಥೆಗಳು

Published : Sep 04, 2022, 11:05 AM IST
Agnipath recruitment rally: ನೇಮಕಾತಿಗೆ ಬಂದವರ ಹಸಿವು ನೀಗಿಸುತ್ತಿರುವ ಸೇವಾ ಸಂಸ್ಥೆಗಳು

ಸಾರಾಂಶ

ಮಹತ್ವಾಕಾಂಕ್ಷಿ ಅಗ್ನಿಪಥ್‌ ಯೋಜನೆಯಡಿ ಅಗ್ನಿವೀರರ ನೇಮಕಾತಿ Rally ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಅಭ್ಯರ್ಥಿಗಳಿಗೆ ಸ್ಥಳೀಯ ಸಂಘ -ಸಂಸ್ಥೆಗಳು ಉಚಿತವಾಗಿ ಊಟ, ಉಪಹಾರ ನೀಡುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ.

ನಾರಾಯಣ ಹೆಗಡೆ

 ಹಾವೇರಿ (ಸೆ.4) : ಮಹತ್ವಾಕಾಂಕ್ಷಿ ಅಗ್ನಿಪಥ್‌ ಯೋಜನೆಯಡಿ ಅಗ್ನಿವೀರರ ನೇಮಕಾತಿ Rally ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ಅಭ್ಯರ್ಥಿಗಳಿಗೆ ಸ್ಥಳೀಯ ಸಂಘ -ಸಂಸ್ಥೆಗಳು ಉಚಿತವಾಗಿ ಊಟ, ಉಪಹಾರ ನೀಡುತ್ತಿರುವುದು ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿದೆ. ಇಲ್ಲಿ ನಡೆಯುತ್ತಿರುವ ಅಗ್ನಿವೀರ(Agniveer)ರ ನೇಮಕಾತಿ Rallyಗೆ 14 ಜಿಲ್ಲೆಗಳ 58 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಬಂದವರಿಗೆ ವಸತಿ ಇತ್ಯಾದಿ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿದೆ. ಆದರೆ, ಪ್ರತಿ ದಿನ ಬರುವ ಸಾವಿರಾರು ಅಭ್ಯರ್ಥಿಗಳಿಗೆ ಊಟೋಪಚಾರಕ್ಕಾಗಿ ಪರದಾಡುವುದನ್ನು ತಪ್ಪಿಸಲು ಸ್ಥಳೀಯ ಸೇವಾ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ನಿತ್ಯ ಬೆಳಗ್ಗೆ 8 ಗಂಟೆಯಂದ ಆರಂಭವಾಗಿ ಮಧ್ಯಾಹ್ನದ ವರೆಗೂ ಬಿಸಿ ಬಿಸಿ ಪಲಾವ್‌, ಚಿತ್ರಾನ್ನ, ಅನ್ನ ಸಾಂಬಾರು ನೀಡುವ ಕಾರ್ಯ ನಡೆಯುತ್ತಿದೆ.

Haveri Agnipath Rally; ಅಗ್ನಿವೀರರ ನೇಮಕಕ್ಕೆ ಭರ್ಜರಿ ಸಿದ್ಧತೆ, ಸಾರಿಗೆ ವ್ಯವಸ್ಥೆ

ಹುಬ್ಬಳ್ಳಿ(Hubballi)ಯ ಅದಮ್ಯ ಚೇತನ(Adamya Chetana) ಅಡುಗೆ ಮನೆಯಿಂದ ನಿತ್ಯವೂ ಅಡುಗೆ ತಯಾರಾಗಿ ಬರುತ್ತಿದ್ದು, ಸ್ಥಳೀಯ ಸೇವಾ ಭಾರತಿ(Seva Bharati) ಸಂಸ್ಥೆಯು ನಗರದ ದಾನಿಗಳ ನೆರವಿನಿಂದಲೂ ಈ ಕಾರ್ಯಕ್ಕೆ ಕೈಜೋಡಿಸಿದೆ. ಅಲ್ಲದೇ ಅನೇಕ ಸೇವಾ ಸಂಸ್ಥೆಗಳ ಸ್ವಯಂ ಸೇವಕರು ಅಡುಗೆ ಬಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೆ. 1ರಿಂದ 20 ದಿನಗಳ ಕಾಲ 58 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅಗ್ನಿವೀರ ನೇಮಕಾತಿ ರಾರ‍ಯಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸೇವೆಗೆ ಮೆಚ್ಚುಗೆ: ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಜಿಲ್ಲಾ ಕ್ರೀಡಾಂಗಣದ ಬಳಿ ಹೋಟೆಲ್‌ಗಳ ಸಂಖ್ಯೆ ಕಡಿಮೆಯಿದ್ದು, ದೂರದ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಸ್ಥಳೀಯ ಹೋಟೆಲ್‌ ಹುಡುಕಿಕೊಂಡು ಹೋಗುವುದು ಕಷ್ಟವಾಗಿದೆ. ಆದರಿಂದ ನೇಮಕಾತಿ ಸ್ಥಳದಲ್ಲೇ ಉಚಿತವಾಗಿ ನೀಡುತ್ತಿರುವ ಊಟೋಪಹಾರವನ್ನೇ ಬಹುತೇಕ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಅಲ್ಲದೇ ವ್ಯವಸ್ಥಿತ ರೀತಿಯಲ್ಲಿ ಅಡುಗೆ ಬಡಿಸುತ್ತಿರುವುದಕ್ಕೆ ಅಭ್ಯರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಒಮ್ಮೆ ಕ್ರೀಡಾಂಗಣದ ಒಳಗೆ ಪ್ರವೇಶಿಸಿದರೆ ಮತ್ತೆ ಹೊರಗೆ ಬರಲು ತಡವಾಗುತ್ತಿರುವುದರಿಂದ ಅಲ್ಲಿಯೇ ಆಹಾರ ಪ್ಯಾಕೆಟ್‌ ನೀಡುವ ಕಾರ್ಯವನ್ನೂ ಮಾಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳ ಹಸಿವು ನೀಗಿಸುವ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉಚಿತವಾಗಿ ಈ ಸೇವೆ ಸಲ್ಲಿಸಲು ದಾನಿಗಳು, ಸಂಘ​​- ಸಂಸ್ಥೆಗಳು ಮುಂದೆ ಬರುತ್ತಿದ್ದಾರೆ. ಮೂರು ದಿನಗಳ ನೇಮಕಾತಿ ರಾರ‍ಯಲಿ ಮುಗಿದಿದ್ದು, ಇನ್ನೂ 17 ದಿನ ಹತ್ತಾರು ಸಾವಿರ ಅಭ್ಯರ್ಥಿಗಳು ಆಗಮಿಸಲಿದ್ದಾರೆ. ಅವರಿಗೆಲ್ಲ ಉಚಿತ ಉಪಹಾರ ನೀಡಲು ಸ್ಥಳೀಯರು ಕೈಜೋಡಿಸಿದರೆ ಜಿಲ್ಲೆಯ ಆತಿಥ್ಯಕ್ಕೆ ಮೆರಗು ಬರಲಿದೆ

Agnipath recruitment rally: ಹಾವೇರಿಯಲ್ಲಿ ಸೆ.1ರಿಂದ ಆರಂಭ

ಅಗ್ನಿಪಥ್‌ ಯೋಜನೆಯಡಿ ಅಗ್ನಿವೀರರ ನೇಮಕಾತಿ ರಾರ‍ಯಲಿ ಹಾವೇರಿಯಲ್ಲಿ ನಡೆಯುತ್ತಿರುವುದು ಈ ಭಾಗದ ಯುವಕರ ಸೌಭಾಗ್ಯವಾಗಿದೆ. ದೂರದ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ನಮ್ಮ ಕೈಲಾದ ಸಹಾಯ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾದರೆ ಜಿಲ್ಲೆಗೂ ಗೌರವ ಸಿಕ್ಕಂತಾಗುತ್ತದೆ. ಅದಕ್ಕಾಗಿ ಈ ಸೇವಾ ಕಾರ್ಯ ಕೈಗೊಂಡಿದ್ದು, ದಾನಿಗಳು ಕೈಜೋಡಿಸಿದರೆ ಇನ್ನೂ ಉತ್ತಮ ರೀತಿಯಲ್ಲಿ ಆತಿಥ್ಯ ನೀಡಬಹುದಾಗಿದೆ.

- ಡಾ. ಶಿವಾನಂದ ಕೆಂಭಾವಿ, ಸೇವಾ ಭಾರತಿ ಪ್ರಮುಖರು

PREV
Read more Articles on
click me!

Recommended Stories

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!
ಕ್ಯಾನ್ಸರ್ ಹೋರಾಟದಲ್ಲಿರುವಾಗಲೇ ಕೆಲಸದಿಂದ ತೆಗೆದ ಕಂಪನಿ, ಗೇಟಿನ ಮುಂದೆ ಉಪವಾಸ ಹೋರಾಟ