ISL 7: ಜೆಮ್ಶೆಡ್‌ಪುರ ಎದುರು ಗೋವಾಗೆ ರೋಚಕ ಜಯ

By Kannadaprabha News  |  First Published Dec 24, 2020, 8:11 AM IST

7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಜೆಮ್ಶಡ್‌ಪುರ ವಿರುದ್ದ ಗೋವಾ 2-1 ಗೋಲುಗಳ ಅಂತರದ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ವಾಸ್ಕೋ(ಡಿ.24): ಇಂಡಿಯನ್‌ ಸೂಪರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಹಾಗೂ ಎಫ್‌ಸಿ ಗೋವಾ ವಿರುದ್ಧ ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೊನೆಯ ಹೆಚ್ಚುವರಿ ನಿಮಿಷದಲ್ಲಿ ಆಕರ್ಷಕ ಗೋಲು ಬಾರಿಸಿದ ಇಗೋರ್ ಆಂಗುಲೊ ಗೋವಾ ಫುಟ್ಬಾಲ್ ಕ್ಲಬ್‌ಗೆ ರೋಚಕ ಗೆಲುವು ತಂದು ಕೊಟ್ಟರು.

ಇದರೊಂದಿಗೆ ಎಫ್‌ಸಿ ಗೋವಾ , ಬುಧವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆದ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ದದ ಪಂದ್ಯದಲ್ಲಿ 2-1 ಗೋಲುಗಳಿಂದ ಗೆಲುವು ಪಡೆಯಿತು. ಮೊದಲಾರ್ಧದಲ್ಲಿ ಜೆಮ್ಶೆಡ್‌ಪುರ ತಂಡ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಸ್ಟೀಫನ್‌ ಎಜೆ (33ನೇ ನಿ.) ಗೋಲುಗಳಿಸಿ ಜೆಮ್ಶೆಡ್‌ಪುರ ಎಫ್‌ಸಿಗೆ ಮುನ್ನಡೆ ತಂದುಕೊಟ್ಟರು. 

Tap to resize

Latest Videos

undefined

ಐಎಸ್‌ಎಲ್‌ 7: ನಾರ್ತ್‌ ಈಸ್ಟ್- ಒಡಿಶಾ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

ದ್ವಿತೀಯಾರ್ಧದ ಆಟದಲ್ಲಿ ಪೆನಾಲ್ಟಿ ಅವಕಾಶ ಪಡೆಯುವಲ್ಲಿ ಗೋವಾ ಸಫಲವಾಯಿತು. ಇಗೋರ್‌ ಆ್ಯಂಗುಲೊ (64ನೇ ನಿ.) ಪೆನಾಲ್ಟಿ ಗೋಲುಗಳಿಸಿ ಸಮಬಲ ಸಾಧಿಸಿದರು. ಅಂತಿಮ ಅವಧಿಯವರೆಗೂ ಇದೇ ಅಂತರ ಕಾಯ್ದುಕೊಂಡಿದ್ದವು. ಕೊನೆಯ ಕೊನೆಯ ಹೆಚ್ಚುವರಿ ನಿಮಿಷದಲ್ಲಿ ಮ್ಯಾಜಿಕ್ ಮಾಡಿದ ಇಗೋರ್‌ ಗೋವಾಗೆ ರೋಚಕ ಗೆಲುವು ತಂದುಕೊಟ್ಟರು.

7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ 3ನೇ ಗೆಲುವು ದಾಖಲಿಸುವುದರ ಮೂಲಕ ಎಫ್‌ಸಿ ಗೋವಾ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.

click me!