7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಜೆಮ್ಶೆಡ್‌ಪುರ ಎಫ್‌ಸಿ 1-0 ಅಂತರದಲ್ಲಿ ರೋಚಕ ಜಯ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಸ್ಕೋ(ಡಿ.19): ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 500ನೇ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಗೆಲುವು ಸಾಧಿಸಿದೆ. ಇಲ್ಲಿನ ತಿಲಕ್ ಮೈದಾನದಲ್ಲಿ ಶುಕ್ರವಾರ ನಡೆದ 7ನೇ ಆವೃತ್ತಿಯ 32ನೇ ಪಂದ್ಯದಲ್ಲಿ ಜೆಮ್ಶೆಡ್‌ಪುರ, ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಗೆಲುವು ಪಡೆಯಿತು. ಈ ಆವೃತ್ತಿಯ ಟೂರ್ನಿಯಲ್ಲಿ ಜೆಮ್ಶೆಡ್‌ಪುರ ಎಫ್‌ಸಿಗೆ ದೊರೆತ 2ನೇ ಗೆಲುವು ಇದಾಗಿದೆ.
ಮೊದಲಾರ್ಧದ ಆಟದಲ್ಲಿ ಉಭಯ ತಂಡಗಳ ಆಟಗಾರರು ಯಾವುದೇ ಗೋಲುಗಳಿಸಿರಲಿಲ್ಲ. ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಲು ಎರಡೂ ತಂಡಗಳ ಆಟಗಾರರು ಉತ್ತಮ ಪೈಪೋಟಿ ನಡೆಸಿದರು. ಆದರೆ ಗೋಲು ಮೂಡಿರಲಿಲ್ಲ. ಮೊದಲಾರ್ಧದಲ್ಲಿ ಗೋಲುಗಳಿಲ್ಲದೇ ಸಮಬಲ ಸಾಧಿಸಿದ್ದರು.
2️⃣ shots on 🎯
1️⃣ goal 🥅's lone strike was enough to earn the 3️⃣ points in 📺 pic.twitter.com/McadiMwn5d
undefined
ಐಎಸ್‌ಎಲ್: ಬಿಎಫ್‌ಸಿಗೆ ಸತತ 2ನೇ ಜಯ
ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದವು. ಹೀಗಾಗಿ ಗೋಲುಗಳಿಸಿ ಜಯ ಸಾಧಿಸುವ ವಿಭಿನ್ನ ತಂತ್ರಗಾರಿಕೆಯಲ್ಲಿ ಇಳಿದ ಜೆಮ್ಶೆಡ್‌ಪುರ ಎಫ್‌ಸಿಗೆ ಅಂಕಿತ್ ಜಾಧವ್ (53ನೇ ನಿ.) ಮೊದಲ ಯಶಸ್ಸು ತಂದುಕೊಟ್ಟರು. ಎದುರಾಳಿ ನಾರ್ತ್ ಈಸ್ಟ್ ತಂಡದ ಭದ್ರಕೋಟೆಯ ಒಳನುಗ್ಗಿ ಅಂಕಿತ್ ಆಕರ್ಷಕ ಗೋಲುಗಳಿಸಿದರು. ಹೀಗಾಗಿ ನಾತ್ ಈಸ್ಟ್ ಮತ್ತಷ್ಟು ಒತ್ತಡಕ್ಕೆ ಒಳಗಾಯಿತು. ಪಂದ್ಯದ ಪೂರ್ಣಾವಧಿ ಆಟದಲ್ಲಿ ಗೋಲುಗಳಿಸಲು ನಾರ್ತ್ ಈಸ್ಟ್ ಮಾಡಿದ ಎಲ್ಲ ಪ್ರಯತ್ನಗಳನ್ನು ಜೆಮ್ಶೆಡ್‌ಪುರ ಆಟಗಾರರು ವಿಫಲಗೊಳಿಸಿದರು. ಅಂತಿಮವಾಗಿ ಇದೇ ಅಂತರ ಕಾಯ್ದುಕೊಂಡ ಜೆಮ್ಶೆಡ್‌ಪುರ ಎಫ್‌ಸಿ ಜಯದ ನಗೆ ಬೀರಿತು.
ಐಎಸ್‌ಎಲ್ 500ನೇ ಪಂದ್ಯ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ 500ನೇ ಪಂದ್ಯಕ್ಕೆ ತಿಲಕ್ ಮೈದಾನ ಸಾಕ್ಷಿಯಾಯಿತು. ಯಶಸ್ವಿ 6 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಎಸ್‌ಎಲ್, ಇದು 7ನೇ ಆವೃತ್ತಿಯಾಗಿದೆ.