ಐಎಸ್‌ಎಲ್‌ 7: ನಾರ್ತ್‌ ಈಸ್ಟ್- ಒಡಿಶಾ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ

By Kannadaprabha NewsFirst Published Dec 23, 2020, 8:38 AM IST
Highlights

7ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್‌ನ ಒಡಿಶಾ ಹಾಗೂ ನಾರ್ತ್‌ಈಸ್ಟ್ ಯುನೈಟೆಡ್ ನಡುವಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಾಂಬೋಲಿಮ್(ಡಿ.23)‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 7ನೇ ಆವೃತ್ತಿಯಲ್ಲಿ ನಾರ್ತ್ ಈಸ್ಟ್‌ ಯುನೈಟೆಡ್‌ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ನಡುವಣ ಮಂಗಳವಾರ ಇಲ್ಲಿ ನಡೆದ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಗಿದೆ. 

ಮೊದಲಾರ್ಧದಲ್ಲಿ ನಾರ್ತ್ ಈಸ್ಟ್‌ ಮತ್ತು ಒಡಿಶಾ ತಲಾ 1-1 ಗೋಲುಗಳಿಂದ ಸಮಬಲ ಸಾಧಿಸಿದ್ದವು. ದ್ವಿತೀಯಾರ್ಧದಲ್ಲಿ 2 ಗೋಲುಗಳು ಮೂಡಿಬಂದ ಕಾರಣ ಪಂದ್ಯ ಟೈನಲ್ಲಿ ಕೊನೆಗೊಂಡಿತು.

ಅಜೇಯ ಬೆಂಗಳೂರಿಗೆ ಮೊದಲ ಸೋಲಿನ ಆಘಾತ!

4️⃣ Goals
3️⃣ From the 👟
2️⃣ Sublimes strikes
1️⃣ Penalty

Here are all the goals from what was an exciting contest in 🤩 pic.twitter.com/n0Um6VPHbG

— Indian Super League (@IndSuperLeague)

ನಾರ್ತ್ ಈಸ್ಟ್‌ ಪರ ಲಂಬೋಟ್‌ (45ನೇ ನಿ.), ಅಪೈ (65ನೇ ನಿ.) ಗೋಲುಗಳಿಸಿದರೆ, ಒಡಿಶಾ ಪರ ಡಿಗೊ ಮರ್ಸಿಯೊ (23ನೇ ನಿ.) ಮತ್ತು ಅಲೆಕ್ಸಾಂಡರ್‌ (67ನೇ ನಿ.) ಗೋಲು ಬಾರಿಸಿದರು.

No shortage of shots in this one 📝 😯

Check out the Match Stats from pic.twitter.com/tRc0qPVcyQ

— Indian Super League (@IndSuperLeague)

ಇಂದಿನ ಪಂದ್ಯ: ಜೆಮ್ಶೆಡ್‌ಪುರ-ಗೋವಾ

ಸ್ಥಳ: ತಿಲಕ್‌ ಮೈದಾನ, 
ಸಮಯ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
 

click me!