ಐಎಸ್‌ಎಲ್‌: ಬಿಎಫ್‌ಸಿಗಿಂದು ಮುಂಬೈ ಸವಾಲು

Kannadaprabha News   | Asianet News
Published : Jan 05, 2021, 04:57 PM IST
ಐಎಸ್‌ಎಲ್‌: ಬಿಎಫ್‌ಸಿಗಿಂದು ಮುಂಬೈ ಸವಾಲು

ಸಾರಾಂಶ

ಸತತ ಎರಡು ಸೋಲುಗಳನ್ನು ಕಂಡು ಆಘಾತಕ್ಕೊಳಗಾಗಿರುವ ಬೆಂಗಳೂರು ಎಫ್‌ಸಿ ತಂಡವು ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಗೋವಾ(ಜ.05): 2021ನೇ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಲು ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಫುಟ್ಬಾಲ್ ಕ್ಲಬ್‌(ಬಿಎಫ್‌ಸಿ) ಎದುರು ನೋಡುತ್ತಿದೆ.

7ನೇ ಆವೃತ್ತಿಯ ಇಂಡಿಯನ್‌ ಸೂಪರ್ ಲೀಗ್‌ ಫುಟ್ಬಾಲ್ ಪಂದ್ಯದಲ್ಲಿ ಸತತ ಎರಡು ಸೋಲುಗಳನ್ನು ಕಾಣುವುದರ ಮೂಲಕ ಕಂಗಾಲಾಗಿರುವ ಬಿಎಫ್‌ಸಿ ತಂಡ ಮಂಗಳವಾರ ಮುಂಬೈ ಸಿಟಿ ಎಫ್‌ಸಿ ವಿರುದ್ದ ಕಾದಾಡಲಿದೆ.

ಈ ಸಾಲಿನ ಐಎಸ್‌ಎಲ್‌ ಟೂರ್ನಿಯಲ್ಲಿ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡ 8 ಪಂದ್ಯಗಳನ್ನಾಡಿದ್ದು, 3 ಪಂದ್ಯಗಳಲ್ಲಿ ಗೆಲುವು ಮತ್ತೆ 3 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದ್ದರೆ, ಕಳೆದೆರಡು ಪಂದ್ಯಗಳಲ್ಲಿ ಬೆಂಗಳೂರು ತಂಡ ಸೋಲಿನ ಕಹಿಯುಂಡಿದೆ.

ಐಎಸ್‌ಎಲ್ 7‌: ಒಡಿಶಾ ಎದುರು ಬೆಂಗಾಲ್‌ಗೆ ಮೊದಲ ಗೆಲುವು

ಹೈದ್ರಾಬಾದ್‌ಗೆ 4-1ರ ಜಯ:

ಸೋಮವಾರ ನಡೆದ ಪಂದ್ಯದಲ್ಲಿ ಹೈದ್ರಾಬಾದ್ ಎಫ್‌ಸಿ ತಂಡ ಚೆನ್ನೈಯಿನ್ ಎಫ್‌ಸಿ ಎದುರು 4-1 ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಹೈದ್ರಾಬಾದ್ ತಂಡ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ 3ನೇ ಗೆಲುವು ದಾಖಲಿಸಿದೆ.

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?