ಐಎಸ್‌ಎಲ್ 7‌: ಒಡಿಶಾ ಎದುರು ಬೆಂಗಾಲ್‌ಗೆ ಮೊದಲ ಗೆಲುವು

Kannadaprabha News   | Asianet News
Published : Jan 04, 2021, 11:51 AM IST
ಐಎಸ್‌ಎಲ್ 7‌: ಒಡಿಶಾ ಎದುರು ಬೆಂಗಾಲ್‌ಗೆ ಮೊದಲ ಗೆಲುವು

ಸಾರಾಂಶ

7ನೇ ಆವೃತ್ತಿಯ ಇಂಡಿಯನ್ ಸೂಪರ್‌ ಲೀಗ್‌ನಲ್ಲಿ ಈಸ್ಟ್‌ ಬೆಂಗಾಲ್‌ ತಂಡ ಮೊದಲ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

ವಾಸ್ಕೋ(ಜ.04): ಇಂಡಿಯನ್‌ ಸೂಪರ್‌ ಲೀಗ್‌ 7ನೇ ಆವೃತ್ತಿಯಲ್ಲಿ ಎಸ್‌ಸಿ ಈಸ್ಟ್‌ ಬೆಂಗಲ್‌ ಮೊದಲ ಗೆಲುವು ದಾಖಲಿಸಿದೆ. ಭಾನುವಾರ ಇಲ್ಲಿ ನಡೆದ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್‌ 3-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. 

ಬೆಂಗಾಲ್‌ ಪರ ಆ್ಯಂಥೋನಿ (13ನೇ ನಿಮಿಷ), ಜಾಕಸ್‌ (39ನೇ ನಿಮಿಷ), ಬ್ರೈಟ್‌ (88ನೇ ನಿಮಿಷ) ಹಾಗೂ ಒಡಿಶಾ ಪರ ಡೇನಿಯಲ್‌ (90ನೇ ನಿಮಿಷ) ಗೋಲುಗಳಿಸಿದರು.

ಐಎಸ್‌ಎಲ್‌: ಬೆಂಗಾಲ್‌ಗೆ ಚೆನ್ನೈ ಎಫ್‌ಸಿ ಸವಾಲು

ಎಟಿಕೆಗೆ ಅಗ್ರಸ್ಥಾನ: ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಟಿಕೆ ಮೋಹನ್‌ ಬಗಾನ್‌, ನಾರ್ತ್ ಈಸ್ಟ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳಿಂದ ಜಯ ಪಡೆದಿದೆ. ಈ ಗೆಲುವಿನ ಮೂಲಕ ಎಟಿಕೆ 20 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಯ್‌ ಕೃಷ್ಣ (51ನೇ ನಿ.), ಬೆಂಜಮಿನ್‌ (58ನೇ ನಿಮಿಷ) ಸ್ವಂತ ಗೋಲು ಬಾರಿಸಿದರು.

PREV
click me!

Recommended Stories

ಆರ್‌ಸಿಬಿ ತಂಡದ ನಾಯಕತ್ವಕ್ಕೆ ಹಿಂದಿರುಗಿದ ವಿರಾಟ್ ಕೊಹ್ಲಿ!
ಡೈಮಂಡ್‌ ಲೀಗ್ ಟ್ರೋಫಿ ಗೆಲ್ತಾರಾ ನೀರಜ್‌ ಚೋಪ್ರಾ, ಅವಿನಾಶ್ ಸಾಬ್ಳೆ?