ರೈನಾ, ಕೊಹ್ಲಿ ಅಲ್ಲ, IPL ಆರೇಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಯಾರು?

By Suvarna News  |  First Published Apr 26, 2020, 10:35 PM IST

ಐಪಿಎಲ್ ಟೂರ್ನಿಯಲ್ಲಿ ಸುರೇಶ್ ರೈನಾ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಟೀಂ ಇಂಡಿಯಾ ಕ್ರಿಕೆಟಿಗರು ಸ್ಫೋಟಕ ಬ್ಯಾಟಿಂಗ್ ಮೂಲಕ ಗರಿಷ್ಠ ರನ್ ದಾಖಲಿಸಿದ್ದಾರೆ. ಆದರೆ ಮೊದಲು ಆರೇಂಜ್ ಕ್ಯಾಪ್ ಗೆದ್ದ ದಾಖಲೆ ಇವರ ಹೆಸರಲ್ಲಿ ಇಲ್ಲ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆರೇಂಜ್ ಕ್ಯಾಪ್ ಗೆದ್ದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಯಾರು ಅನ್ನೋ ಕುತೂಹಲಕ್ಕೆ ಇಲ್ಲಿದೆ. ಉತ್ತರ.


ಮುಂಬೈ(ಏ.26): ಯುವ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು. ಕಾರಣ ಮೊದಲ ಓವರ್‌ನಿಂದಲೇ ಹೊಡಿ ಬಡಿ ಆಟ. ಹೀಗಾಗಿ ಪ್ರತಿ ಬಾಲ್ ಬೌಂಡರಿ ಸಿಕ್ಸರ್ ಸಿಡಿಸುವ ಆಟಗಾರನಿಗೆ ಬಹುಬೇಡಿಕೆ. ಐಪಿಎಲ್ ಆರಂಭಿಕ ಟೂರ್ನಿಗಳಲ್ಲಿ ವಿದೇಶಿ ಬ್ಯಾಟ್ಸ್‌ಮನ್ ಅಬ್ಬರವೇ ಹೆಚ್ಚಾಗಿತ್ತು. ಹೀಗಾಗಿ ಆರಂಭಿಕ 2 ಟೂರ್ನಿಗಳಲ್ಲಿ ಆರೇಂಜ್ ಕ್ಯಾಪ್ ವಿದೇಶಿ ಆಟಗಾರರ ಪಾಲಾಗಿತ್ತು. ಭಾರತೀಯ ಆಟಗಾರ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಳ್ಳಲು 3ನೇ ಆವತ್ತಿ ಬರಬೇಕಾಯಿತು.

IPL ಮೊದಲ ಓವರ್‌ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ, ಮೊದಲ ಸ್ಥಾನದಲ್ಲಿ ಭಾರತೀಯ ಕ್ರಿಕೆಟಿಗ!

Latest Videos

undefined

ಐಪಿಎಲ್ ಟೂರ್ನಿ ಮೊದಲ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡ ಬ್ಯಾಟ್ಸ್‌ಮನ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. 2010ರ ಆವೃತ್ತಿಯಲ್ಲಿ ಸಚಿನ್ ತೆಂಡುಲ್ಕರ್ ಮುಂಬೈ ಇಂಡಿಯನ್ಸ್ ನಾಯಕನಾಗಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಲ್ಲದೇ, ಆವೃತ್ತಿಯಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. 15 ಪಂದ್ಯಗಳಿಂದ ಸಚಿನ್ 618 ರನ್ ಸಿಡಿಸಿ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡರು.

IPL Birthday ಏಪ್ರಿಲ್ 18: ಅಪರೂಪದಲ್ಲೇ ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ.

2010ರ ಆವೃತ್ತಿಯಲ್ಲಿ ಸಚಿನ್ ತೆಂಡುಲ್ಕರ್ 5 ಅರ್ಧಶತಕ ಸಿಡಿಸಿದ್ದರು. 47.53ರ ಸರಾಸರಿಯಲ್ಲಿ ಸಚಿನ್ ಬ್ಯಾಟ್ ಬೀಸಿದ್ದರು. ಫೈನಲ್ ಪಂದ್ಯದಲ್ಲಿ ಸಚಿನ್ 45 ಎಸೆತದಲ್ಲಿ 48 ರನ್ ಚಚ್ಚಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಸಚಿನ್ 2011 ಹಾಗೂ 2012ರ ಆವತ್ತಿಗಳಲ್ಲೂ ಅಬ್ಬರಿಸಿದ್ದರು. 2011ರಲ್ಲಿ 553 ರನ್ ಹಾಗೂ 2012ರಲ್ಲಿ 324 ರನ್ ಸಿಡಿಸಿದ್ದರು.

ಸಚಿನ್ ಬಳಿಕ 2014ರಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ಆರೇಂಜ್ ಕ್ಯಾಪ್ ಗೆದ್ದ ಸಾಧನೆ ಮಾಡಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಬಿನ್ ಉತ್ತಪ್ಪ, 660 ರನ್ ಸಿಡಿಸಿ ಆರೇಂಜ್ ಕ್ಯಾಪ್ ಗೆದ್ದಿದ್ದರು. ಇನ್ನು 2016ರಲ್ಲಿ ವಿರಾಟ್ ಕೊಹ್ಲಿ ಇತಿಹಾಸ ಬರೆದಿದ್ದರು. 4 ಸೆಂಚುರಿ ಸೇರಿದಂತೆ 973 ರನ್ ಸಿಡಿಸಿದ ಕೊಹ್ಲಿ ಆರೇಂಜ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು. 

click me!