ನವದೆಹಲಿ(ಏ.15): ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ನಡೆಯುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮಾ.29ರಂದು ಆರಂಭಗೊಳ್ಳಬೇಕಿದ್ದ ಟೂರ್ನಿಯನ್ನು ಏ.15ರ ವರೆಗೂ ಅಮಾನತುಗೊಳಿಸಲಾಗಿತ್ತು. ಇದೀಗ ಲಾಕ್‌ಡೌನ್ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯಕ್ಕೂ ಟೂರ್ನಿ ಆರಂಭಿಸಲು ಸಾಧ್ಯವಿಲ್ಲ.
ಇಂದು ಘೋಷಣೆ?: ಸೋಮವಾರ
ಐಪಿಎಲ್ ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಬಿಸಿಸಿಐ ಸಭೆ ನಡೆಸಬೇಕಿತ್ತು. ಆದರೆ ಮಂಗಳವಾರ
ಪ್ರಧಾನಿ ಮೋದಿಯವರ ಭಾಷಣದ ಬಳಿಕ ಚರ್ಚಿಸಿ ನಿರ್ಧರಿಸುವ ಸಲುವಾಗಿ ಸಭೆ ನಡೆಯಲಿಲ್ಲ. ಬುಧವಾರ, ಬಿಸಿಸಿಐ ಅಧಿಕೃತ ಪ್ರಟಕಣೆ ಹೊರಡಿಸುವ ನಿರೀಕ್ಷೆ ಇದೆ.
ಕೊರೋನಾ ಎಫೆಕ್ಟ್: 13ನೇ ಆವೃತ್ತಿ ಐಪಿಎಲ್ ಮುಂದೂಡಿಕೆ ಖಚಿತ..!
ಅಸಾಧ್ಯ ಏಕೆ?: ಏ.15ರ ನಂತರ ಆರಂಭಿಸಿದ್ದರೂ ಮೇ ಕೊನೆ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಟೂರ್ನಿ ನಡೆಸಲು ಸಾಧ್ಯವಿತ್ತು. 2009ರಲ್ಲಿ ಕೇವಲ 37 ದಿನಗಳಲ್ಲಿ ಟೂರ್ನಿ ನಡೆಸಲಾಗಿತ್ತು. ಅದೇ ಮಾದರಿಯನ್ನು ಅನುಸರಿಸಲು ಬಿಸಿಸಿಐ ಚಿಂತನೆ ನಡೆಸಿತ್ತು. ಇದೀಗ ಅದೂ ಸಾಧ್ಯವಿಲ್ಲ.
ದ್ವಿಪಕ್ಷೀಯ ಸರಣಿಗಳು, ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳು ಇರುವ ಕಾರಣ ಮುಂಬರುವ ದಿನಗಳಲ್ಲೂ ಐಪಿಎಲ್ ಆಯೋಜಿಸುವುದು ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ನಡೆಯಬೇಕಿದ್ದು, ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ನಡೆಯಬೇಕಿದೆ.