
ಮುಂಬೈ(ಆ.04): ಕೊರೋನಾ ವೈರಸ್ ಕಾರಣ ಮಾರ್ಚ್ 29 ರಂದು ಆರಂಭಗೊಳ್ಳಬೇಕಿದ್ದ ಐಪಿಎಲ್ 2020 ಟೂರ್ನಿ ಹಲವು ಬಾರಿ ಮುಂದೂಡಿಕೆಯಾಗಿತ್ತು. ಭಾರತದಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಬಹುತೇಕ ರದ್ದಾಗುವ ಹಂತದಲ್ಲಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಇದೀಗ ದುಬೈನಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಚೀನಾ ಪ್ರಾಯೋಜಕತ್ವ ತೆಗೆದುಹಾಕಲು ಬಿಸಿಸಿಐ ಮೇಲೆ ಒತ್ತಡಗಳು ಕೇಳಿ ಬಂದಿತ್ತು. ಹೀಗಾಗಿ ತುರ್ತು ಸಭೆ ಕರೆದ ಬಿಸಿಸಿಐ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ಪ್ರಾಯೋಜಕತ್ವ ಉಳಿಸಿಕೊಳ್ಳಲು ನಿರ್ಧರಿಸಿತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಇದೀಗ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಮೊಬೈಲ್ ವಿವೋ ಹಿಂದೆ ಸರಿದಿದೆ.
IPL ಆಯೋಜನೆಗೆ ಅಭಿಮಾನಿಗಳಿಂದ ವಿರೋಧ; #BoycottIPL ಅಭಿಯಾನ ಆರಂಭ!
ಚೀನಾ ಪ್ರಾಯೋಜಕತ್ವವಿರುವ ಐಪಿಎಲ್ ಟೂರ್ನಿ ಬಹಿಷ್ಕರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಗೊಂಡಿತ್ತು. ಇದರ ಬೆನ್ನಲ್ಲೇ ವಿವೋ ಇಂಡಿಯಾ ಇದೀಗ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ದುಬೈನಲ್ಲಿ ನಡೆಯಲಿರುವ ಐಪಿಎಲ್ 2020 ಟೂರ್ನಿಯಲ್ಲಿ ವಿವೋ ಪ್ರಾಯೋಜಕತ್ವ ಇರುವುದಿಲ್ಲ.
ದುಬೈನಲ್ಲಿ IPL 2020 ಆಯೋಜನೆಗೆ CAIT ವಿರೋಧ; ಕೇಂದ್ರ ಸರ್ಕಾರಕ್ಕೆ ಪತ್ರ!
ಲಡಾಖ್ ಗಡಿಯಲ್ಲಿ ಚೀನಾ ಖ್ಯಾತೆ ತೆಗೆದ ಬಳಿಕ ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಚೀನಾ ಸೇನೆ ಆಕ್ರ
ಣಮಣದಿಂದ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಬಳಿಕ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಯಿತು. ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಲಾಯಿತು. ಕೇಂದ್ರ ಸರ್ಕಾರ ಚೀನಾ ಮೂಲದ ಆ್ಯಪ್ ಬ್ಯಾನ್ ಮಾಡಲಾಯಿತು. ಚೀನಾ ಜೊತೆಗಿನ ಹಲವು ವ್ಯವಹಾರ ಒಪ್ಪಂದಗಳು ರದ್ದಾಯಿತು. ಹೀಗಾಗಿ ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದಿಂದ ಚೀನಾದ ವಿವೋ ಒಪ್ಪಂದ ರದ್ದು ಮಾಡಲು ಬಿಸಿಸಿಐ ಮೇಲೆ ಒತ್ತಡ ಬಿದ್ದಿತ್ತು.
ಕೊರೋನಾ ವೈರಸ್ ಕಾರಣ ಮೊದಲೇ ನಷ್ಟದಲ್ಲಿದ್ದ ಬಿಸಿಸಿಐ ಪ್ರಸಕ್ತ ವರ್ಷ ಎಲ್ಲಾ ಪ್ರಾಯೋಜಕತ್ವ ಉಳಿಸಿಕೊಂಡು ಟೂರ್ನಿ ಆಯೋಜಿಸಲು ಆಗಸ್ಟ್ 2 ರಂದು ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಸಭೆ ನಡೆದ 2 ದಿನದಲ್ಲಿ ಇದೀಗ ವಿವೋ ಟೂರ್ನಿಯಿಂದ ಹೊರ ನಡೆದಿದೆ. ಹೀಗಾಗಿ ಇದೀಗ ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕಟಾ ನಡೆಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.