ಐಪಿಎಲ್ 2020‌: ಫ್ರಾಂಚೈ​ಸಿ​ಗಳ ಮುಂದೆ ಎದುರಾಗಿವೆ ಹಲವು ಸವಾ​ಲು..!

By Kannadaprabha News  |  First Published Aug 2, 2020, 11:03 AM IST

ಹಲವು ಸರ್ಕಸ್‌ಗಳ ಬಳಿಕ ಐಪಿಎಲ್ ಟೂರ್ನಿಗೆ ಡೇಟ್ ಫಿಕ್ಸ್ ಆಗಿದೆ. ಆದರೆ ಫ್ರಾಂಚೈಸಿಗಳ ಮುಂದೆ ಇದೀಗ ಹಲವು ಸವಾಲುಗಳು ಎದುರಾಗಿವೆ. ಏನು ಆ ಸವಾಲುಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.


ನವ​ದೆ​ಹ​ಲಿ(ಆ.02): ಈ ಬಾರಿ ಐಪಿ​ಎಲ್‌ ಟೂರ್ನಿ​ಯನ್ನು ಯುಎ​ಇ​ನಲ್ಲಿ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿ​ದ್ದರೂ, ಹಲವು ಪ್ರಶ್ನೆಗಳಿಗೆ ಉತ್ತರ ಹುಡು​ಕಿ​ಕೊಂಡಿಲ್ಲ. ಫ್ರಾಂಚೈಸಿಗಳ ಮುಂದೆ ಅನೇಕ ಸವಾಲುಗಳಿದ್ದು, ವಿದೇಶಿ ಆಟ​ಗಾ​ರ​ರನ್ನು ಯುಎ​ಇಗೆ ಕರೆ​ಸಿ​ಕೊ​ಳ್ಳು​ವುದು ಪ್ರಮುಖ ಸವಾ​ಲಾ​ಗಿ ಪರಿ​ಣ​ಮಿ​ಸ​ಲಿದೆ. 

ಅನೇಕ ತಾರಾ ವಿದೇಶಿ ಆಟ​ಗಾ​ರರು ಮೊದಲ ಒಂದೆ​ರಡು ವಾರದ ಪಂದ್ಯ​ಗ​ಳಿಗೆ ಗೈರಾ​ಗುವ ಸಾಧ್ಯತೆ ಇದೆ. ವಿದೇಶಿ ಆಟ​ಗಾ​ರ​ರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡು​ವುದು ಫ್ರಾಂಚೈ​ಸಿ​ಗ​ಳಿಗೆ ತಲೆನೋವಾಗಿ ಪರಿ​ಣ​ಮಿ​ಸ​ಲಿದೆ. ಸೆ.15ರ ವರೆಗೂ ಆಸ್ಪ್ರೇ​ಲಿ​ಯಾ-ಇಂಗ್ಲೆಂಡ್‌ ನಡುವೆ ಸರಣಿ ನಡೆ​ಯ​ಲಿದೆ. ಬೆನ್‌ ಸ್ಟೋಕ್ಸ್‌, ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಸೇರಿ​ದಂತೆ ಹಲವು ತಾರಾ ಆಟ​ಗಾ​ರರು ಈ ಸರ​ಣಿ​ಯಲ್ಲಿ ಪಾಲ್ಗೊ​ಳ್ಳ​ಲಿ​ದ್ದಾರೆ. ಸೆ.19ರಿಂದ ಐಪಿ​ಎಲ್‌ ಆರಂಭ​ಗೊ​ಳ್ಳ​ಲಿದ್ದು, ಇಂಗ್ಲೆಂಡ್‌ ಹಾಗೂ ಆಸೀಸ್‌ ಆಟ​ಗಾ​ರರು ಯುಎ​ಇ​ನಲ್ಲಿ ಕಡ್ಡಾಯ ಕ್ವಾರಂಟೈನ್‌ ಸಹ ಪೂರೈ​ಸ​ಬೇ​ಕಿದೆ. 

Latest Videos

ಖಾಲಿ ಸ್ಟೇಡಿಯಂನಲ್ಲಿ IPL ನಡೆಯುತ್ತಾ..? UAE ನಿಂದ ಮಹತ್ವದ ತೀರ್ಮಾನ

ಇನ್ನು ಸೆ.10ರ ವರೆಗೂ ಕೆರಿ​ಬಿ​ಯನ್‌ ಪ್ರೀಮಿ​ಯರ್‌ ಲೀಗ್‌ ನಡೆ​ಯ​ಲಿದ್ದು, ಈ ಟೂರ್ನಿ​ಯಲ್ಲಿ ಆಡುವ ವಿದೇಶಿ ಆಟ​ಗಾ​ರರನ್ನು ಕರೆ​ಸಿ​ಕೊ​ಳ್ಳು​ವುದು ಸಹ ಸವಾ​ಲು. ಅದೇ ರೀತಿ ಕೊರೋನಾ ಪ್ರಕ​ರಣಗಳು ಹೆಚ್ಚು​ತ್ತಿ​ರುವ ಕಾರಣ ದಕ್ಷಿಣ ಆಫ್ರಿಕಾ ಆಟಗಾ​ರರು ಟೂರ್ನಿ​ಯಲ್ಲಿ ಪಾಲ್ಗೊ​ಳ್ಳು​ವುದೇ ಅನು​ಮಾನವೆನಿ​ಸಿದೆ.

ದೀಪಾವಳಿ: ಐಪಿಎಲ್‌ ಫೈನಲ್‌ 8ರ ಬದಲು 10ಕ್ಕೆ?

ನವದೆಹಲಿ: 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಫೈನಲ್‌ ಪಂದ್ಯ ನವೆಂಬರ್‌ 8ರ ಬದಲು 10ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ದೀಪಾವಳಿ ಹಿನ್ನೆಲೆಯಲ್ಲಿ ಪಂದ್ಯದ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್‌ ಸ್ಪೋರ್ಟ್ಸ್ ಈ ಬದಲಾವಣೆ ಕೇಳಿದೆ ಎನ್ನಲಾಗಿದೆ. 

ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಚರ್ಚೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಬದಲಾದ ದಿನಾಂಕದಲ್ಲಿ ಫೈನಲ್‌ ಪಂದ್ಯ ನಡೆದರೆ, 51 ದಿನಗಳ ಟೂರ್ನಿ 53 ದಿನಕ್ಕೆ ವಿಸ್ತರಣೆಯಾಗಲಿದೆ. ಯುಎಇಯಲ್ಲಿ ನಡೆಸಲು ನಿರ್ಧರಿಸಿರುವ ಐಪಿಎಲ್‌ ಟೂರ್ನಿ ಸೆ.19ರಿಂದ ಆರಂಭವಾಗಲಿದ್ದು, ಅಂತಿಮ ವೇಳಾಪಟ್ಟಿ ಇನ್ನು ಬಿಡುಗಡೆಯಾಗಿಲ್ಲ.
 

click me!