
ಕೋಲ್ಕತಾ[ಡಿ.19]: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಮೊದಲ ಒಂದು ಗಂಟೆಯಲ್ಲಿ ಎಂಟು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಮುಗಿಬಿದ್ದವು. ಇದುವರೆಗೂ 10 ಆಟಗಾರರು ಹರಾಜಾಗಿದ್ದು, 9 ಆಟಗಾರರು ವಿದೇಶಿಯರಾಗಿದ್ದಾರೆ.
ಸದ್ಯ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.50 ಕೋಟಿಗೆ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಐಪಿಎಲ್ ಇತಿಹಾಸದಲ್ಲೇ ಇದು ಎರಡನೇ ಗರಿಷ್ಠ ಹರಾಜಾಗಿದೆ. ಈ ಮೊದಲು 2015ರ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 16 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇನ್ನು ಯೂಸುಪ್ ಪಠಾಣ್, ಸ್ಟುವರ್ಟ್ ಬಿನ್ನಿ, ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಸೇರಿದಂತೆ 5 ಆಟಗಾರರು ಅನ್ ಸೋಲ್ಡ್ ಆದರು.
ಸ್ಟಾರ್ ಆಲ್‌ರೌಂಡರ್ ಖರೀದಿಸಿದ RCB
ಇನ್ನು ಮತ್ತೋರ್ವ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್’ವೆಲ್ ಅವರನ್ನು ಪಂಜಾಬ್ 10.75 ಕೋಟಿ ರುಪಾಯಿ ನೀಡಿ ಖರೀದಿಸಿದರೆ, ಕ್ರಿಸ್ ಮೋರಿಸ್ ಅವರನ್ನು 10 ಕೋಟಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಫಿಂಚ್ ಕೂಡಾ 4.40 ಕೋಟಿಗೆ RCB ಪಾಲಾಗಿದ್ದಾರೆ.
1. ಪ್ಯಾಟ್ ಕಮಿನ್ಸ್- 15.50 ಕೋಟಿ- ಕೋಲ್ಕತ ನೈಟ್ ರೈಡರ್ಸ್
2. ಗ್ಲೆನ್ ಮ್ಯಾಕ್ಸ್’ವೆಲ್- 10.75 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್
3. ಕ್ರಿಸ್ ಮೋರಿಸ್- 10 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು
4. ಸ್ಯಾಮ್ ಕರನ್- 5.50 ಕೋಟಿ- ಚೆನ್ನೈ ಸೂಪರ್ ಕಿಂಗ್ಸ್
5. ಇಯಾನ್ ಮಾರ್ಗನ್-5.25 ಕೋಟಿ- ಕೋಲ್ಕತಾ ನೈಟ್ ರೈಡರ್ಸ್
6. ಆ್ಯರೋನ್ ಫಿಂಚ್- 4.40 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು
7. ರಾಬಿನ್ ಉತ್ತಪ್ಪ- 3 ಕೋಟಿ- ರಾಜಸ್ಥಾನ ರಾಯಲ್ಸ್
8. ಕ್ರಿಸ್ ಲಿನ್- 2 ಕೋಟಿ- ಮುಂಬೈ ಇಂಡಿಯನ್ಸ್
ದಾಖಲೆ ಮೊತ್ತಕ್ಕೆ ಸೇಲಾದ ಪ್ಯಾಟ್ ಕಮಿನ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.