
ಮುಂಬೈ(ಆ.23): ಐಪಿಎಲ್ ಟೂರ್ನಿ ತಯಾರಿ ಭರದಿಂದ ಸಾಗಿದೆ. ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದೆ. ಕೊರೋನಾ ವೈರಸ್ ಕಾರಣ ಭಾರತದಿಂದ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಲಾಗಿದ್ದು, ಹೊಸ ಮಾರ್ಗಸೂಚಿಗಳಂತೆ ಟೂರ್ನಿ ನಡೆಯಲಿದೆ. ಇದೀಗ ಕೆಲವರು ಐಪಿಎಲ್ ಟೂರ್ನಿ ಹಣಕ್ಕಾಗಿ ಬಿಸಿಸಿಐ ಆಯೋಜಿಸುತ್ತಿದೆ. ಕೊರೋನಾ ನಡುವೆ ಈ ಟೂರ್ನಿ ಅವಶ್ಯಕತೆ ಇತ್ತಾ ಅನ್ನೋ ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ಸುನಿಲ್ ಗವಾಸ್ಕರ್ ತಕ್ಕ ಉತ್ತರ ನೀಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕೆಲವರು ಹಣ ಹೊಳೆ ಹರಿಯುತ್ತೆ. ಕ್ರಿಕಟಿಗರಿಗೆ ಕೋಟಿ ಕೋಟಿ ರೂಪಾಯಿ ಸಿಗುತ್ತೆ, ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ. ಐಪಿಎಲ್ ಟೂರ್ನಿ ಹಲವರ ಜೀವನದ ದಾರಿಯಾಗಿದೆ. ಕೇವಲ 2 ತಿಂಗಳ ಆದಾಯದಿಂದ ಇಡೀ ವರ್ಷ ಕಳೆಯುವ ಹಲವು ಕುಟುಂಬಗಳಿವೆ ಎಂದು ಗವಾಸ್ಕರ್ ಹೇಳಿದ್ದಾರೆ.
IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !.
ಟಿ ಶರ್ಟ್ ಮಾರಾಟ ಮಾಡುವವರು, ಅಭಿಮಾನಿಗಳ ಮುಖಕ್ಕೆ ಬಣ್ಣ ಬಳಿಯುವವರು, ಟೀ ಸ್ಟಾಲ್, ಹೊಟೆಲ್, ಗ್ರೌಂಡ್ಸ್ ಮನ್, ಕಾರ್ಪೆಂಟರ್, ಕೂಲಿ ಕಾರ್ಮಿಕರು ಸೇರಿದಂತೆ ಸಾವಿ ರ ಸಾವಿರ ಕುಟುಂಬಗಳ ಜೀವನ ಈ ಐಪಿಎಲ್ ಟೂರ್ನಿಯಿಂದ ನಡೆಯುತ್ತಿದೆ. ಇನ್ನು ಕ್ರಿಕೆಟ್ ವಿಚಾರದಲ್ಲೂ ಐಪಿಎಲ್ ಟೂರ್ನಿ ಪ್ರಮುಖವಾಗಿದೆ. ಐಪಿಎಲ್ ಟೂರ್ನಿಯಿಂದ ಭಾರತದ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಅನುಭವ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಮಟ್ಟದ ಕ್ರಿಕೆಟ್ ಹಳ್ಳಿ ಪ್ರತಿಭೆಗೂ ಸಿಗುವಂತಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.
ಐಪಿಎಲ್ ಟೂರ್ನಿ ಯಶಸ್ಸು ಸಹಿಸಿದ ಕೆಲವರು ಟೀಕೆ ಮಾಡುತ್ತಿದ್ದಾರೆ. ಹೊರಗಡೆ ಕುಳಿತ ಭಾರತೀಯ ಕ್ರಿಕೆಟ್‌ನ ಒಳಿತು ಕೆಡುಕುಗಳ ತೀರ್ಪು ನೀಡುವವರು ಈ ರೀತಿ ಟೀಕೆ ಮಾಡಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.