IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !

By Suvarna NewsFirst Published Aug 22, 2020, 8:56 PM IST
Highlights

ಕೊರೋನಾ ವೈರಸ್ ಕಾರಣ ಭಾರತದಿಂದ ಐಪಿಎಲ್ ಟೂರ್ನಿಯನ್ನು ದುಬೈಗೆ ಶಿಫ್ಟ್ ಮಾಡಲಾಗಿದೆ. ದುಬೈನಲ್ಲಿ ಕೊರೋನಾ ವೈರಸ್ ನಿಯಂತ್ರಣದಲ್ಲಿದೆ. ಇದರ ನಡುವೆ ಐಪಿಎಲ್ ಟೂರ್ನಿ ಪಂದ್ಯ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿದೆಯಾ? ಈ ಕುತೂಹಲಕ್ಕೆ ಎಮಿರೈಟ್ಸ್ ಕ್ರಿಕೆಟ್ ಬೋರ್ಡ್ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.

ದುಬೈ(ಆ.22):  13ನೇ ಆವೃತ್ತಿ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭಗೊಳ್ಳುತ್ತಿದೆ. ಕೊರೋನಾ ವೈರಸ್ ಕಾರಣ ಸದ್ಯ ದುಬೈನಲ್ಲಿ ಬೀಡುಬಿಟ್ಟಿರುವ ಕ್ರಿಕೆಟಿಗರು ಕ್ವಾರಂಟೈನ್‌ನಲ್ಲಿದ್ದಾರೆ. ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದರೆ ದುಬೈನಲ್ಲಿ ವೈರಸ್ ನಿಯಂತ್ರಣದಲ್ಲಿದೆ. ಹೀಗಾಗಿ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶವಿದೆಯಾ ಅನ್ನೋ ಹಲವರ ಪ್ರಶ್ನೆಗೆ, ಎಮಿರೈಟ್ಸ್ ಕ್ರಿಕೆಟ್ ಬೋರ್ಡ್(ECB) ಉತ್ತರಿಸಿದೆ.

 ಪ್ರತ್ಯೇಕ ವಿಮಾನದಲ್ಲಿ ದುಬೈಗೆ ಹಾರಿದ ಕೊಹ್ಲಿ: RCB ತಂಡ ಸೇರಿಕೊಂಡ ನಾಯಕ!

ಸದ್ಯ ದುಬೈನಲ್ಲಿ ಕೊರೋನಾ ನಿಯಂತ್ರಣದಲ್ಲಿ. ಐಪಿಎಲ್ ಟೂರ್ನಿ ಆಯೋಜನೆಗೆ ಹಲವು ಮುಂಜಾಗ್ರತ ಕ್ರಮ ಕೈಗೊಂಡಿದ್ದೇವೆ. ಟೂರ್ನಿ ಆರಂಭದ ವೇಳೆ ಕೊರೋನಾ ಪರಿಸ್ಥಿತಿ ಅವಲೋಕರಿಸಲಿದ್ದೇವೆ. ಐಪಿಎಲ್ ಟೂರ್ನಿಯಿಂದ ಕೊರೋನಾ ಹರಡುವಿಕೆ ಅಂಕಿ ಅಂಶ ಪರಿಶೀಲಿಸಲಿದ್ದೇವೆ. ಇದರ ಆಧಾರದಲ್ಲಿ ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗುವುದು.  ಆದರೆ ಕೆಲವೇ ಕೆಲವು ಅಭಿಮಾನಿಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ಇದಕ್ಕೆ ದುಬೈ ಸರ್ಕಾರದ ಅನುಮತಿ ಅಗತ್ಯ ಎಂದು ECB ಹೇಳಿದೆ.

IPLಗಾಗಿ ದುಬೈಗೆ ಹಾರೋ ಮೊದಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗೆ ಅಚ್ಚರಿ ನೀಡಿದ ಧೋನಿ!

ಅಭಿಮಾನಿಗಳ ಪ್ರವೇಶ ಕುರಿತು ಅಧಿಕಾರಿಗಳಿಂದ ನಿರಂತರ ಸಂಪರ್ಕದಲ್ಲಿದ್ದೇವೆ. ಇದಕ್ಕಾಗಿ ಅನುಸರಿಸಬೇಕಾದ ಮಾರ್ಗಸೂಚಿ ಸೇರಿದಂತೆ ಇತರ ಎಲ್ಲಾ ನಿಯಮಗಳನ್ನು ಪಾಲಿಸಲು ECB ಸಿದ್ಧವಿದೆ. ಮುಂದಿನ ತಿಂಗಳು ಈ ಕುರಿತು ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ECB ಹೇಳಿದೆ.

click me!