IPL ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆ.19ರಂದು 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ, ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
ದುಬೈ(ಸೆ.18): 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೋರಾಟ ಮಾಡಲಿದೆ. ಸೆಪ್ಟೆಂಬರ್ 19ರ ಸಂಜೆ 7.30ಕ್ಕೆ ರೋಚಕ ಪಂದ್ಯ ಆರಂಭಗೊಳ್ಳುತ್ತಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, RCB ನಾಯಕ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.
ಈ ಸಲದ ಐಪಿಎಲ್ ಮಿಸ್ ಮಾಡ್ದೇ ನೋಡ್ಬೇಕು, ಯಾಕೆ ಅಂತಿರಾ..?
undefined
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗರಿಷ್ಠ ರನ್ ಸಿಡಿಸಿದ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಸಿಎಸ್‌ಕೆ ವಿರುದ್ಧ 747 ರನ್ ಸಿಡಿಸಿದ್ದಾರೆ. ಇದೀಗ ಈ ದಾಖಲೆ ಮುರಿಯಲು ರೋಹಿತ್ ರೆಡಿಯಾಗಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಸದ್ಯ ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 27 ಪಂದ್ಯಗಳಲ್ಲಿ 705 ರನ್ ಸಿಡಿಸಿದ್ದಾರೆ. ಕೇವಲ 43 ರನ್ ಹಿನ್ನಡೆಯಲ್ಲಿದ್ದಾರೆ.
ಕೊರೋನಾ ವಾರಿಯರ್ಸ್‌ಗೆ ಗೌರವ: MyCovidHeroes ಸಂದೇಶದ ಜರ್ಸಿ ತೊಡಲಿದೆ RCB!
2014ರಲ್ಲಿ ಯುಎಇನಲ್ಲಿ ಐಪಿಎಲ್ ಆಯೋಜನೆ ಮಾಡಲಾಗಿತ್ತು. ದುಬೈ ಪಿಚ್‌ನಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ರೆಕಾರ್ಡ್ ಹೊಂದಿಲ್ಲ. ಆದರೆ ಈ 2014ರ ತಂಡದಲ್ಲಿದ ಕೇವಲ ಇಬ್ಬರೇ ಆಟಗಾರರು ತಂಡದಲ್ಲಿದ್ದಾರೆ. ಹೀಗಾಗಿ ದುಬೈ ಹಿಂದಿನ ಅಂಕಿ ಅಂಶ ನಮ್ಮ ಪ್ರದರ್ಶನಕ್ಕೆ ಅಡ್ಡಿಯಾಗಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಉದ್ಘಾಟನಾ ಪಂದ್ಯದತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇದಕ್ಕೆ ಹಲವು ಕಾರಣಗಳವೂ ಇವೆ. ಎಂ.ಎಸ್.ಧೋನಿ ಧೋನಿ ವಿದಾಯದ ಬಳಿಕ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೋನಾ ಕಾರಣ ಬದಲಾದ ಸ್ವರೂಪದಲ್ಲಿ ಐಪಿಎಲ್ ಆಯೋಜನೆಯಾಗುತ್ತಿದೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ.