ಈ ಸಲದ ಐಪಿಎಲ್ ಮಿಸ್‌ ಮಾಡ್ದೇ ನೋಡ್ಬೇಕು, ಯಾಕೆ ಅಂತಿರಾ..?

By Suvarna News  |  First Published Sep 18, 2020, 1:42 PM IST

ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್‌ ಹಲವು ಸರ್ಕಸ್‌ಗಳ ಬಳಿಕ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಐಪಿಎಲ್‌ನ ವಿಶೇಷತೆಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.


ದುಬೈ(ಸೆ.18): 13ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಜಗತ್ತಿನ ಅತ್ಯಂತ ಜನಪ್ರಿಯ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಈ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಆತಿಥ್ಯವನ್ನು ವಹಿಸಿದೆ. ಕೊರೋನಾ ಭೀತಿ ಭಾರತದಿಂದ ಐಪಿಎಲ್‌ ಸ್ಥಳಾಂತರಕ್ಕೆ ಪ್ರಮುಖ ಕಾರಣ.
ಈ ಬಾರಿ ಐಪಿಎಲ್ ಸಾಕಷ್ಟು ಹೊಸತನದಿಂದ ಕೂಡಿರಲಿದೆ. ಈ ಬಾರಿಯ ಐಪಿಎಲ್‌ನ ವಿಶೇಷವೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

3ನೇ ಬಾರಿ ವಿದೇಶಕ್ಕೆ ಸ್ಥಳಾಂತರ 

Latest Videos

undefined

ಐಪಿಎಲ್ ಭಾರತದಿಂದ ಹೊರಗೆ ನಡೆಯುತ್ತಿರುವುದು ಇದೇ ಮೊದಲಲ್ಲ. 2009ರಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014ರಲ್ಲಿ ಚುನಾವಣೆ ಕಾರಣಕ್ಕೇ ಮೊದಲ 20 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಟೂರ್ನಿಯನ್ನು ಕಡಿಮೆ ಪ್ರಕರಣಗಳನ್ನು ಹೊಂದಿರುವ ಯುಎಇಗೆ ಸ್ಥಳಾಂತರಿಸಲಾಗಿದೆ. 

ಸುರಕ್ಷತೆಗೆ ಹಲವು ಕ್ರಮ:

ಐಪಿಎಲ್ ಟೂರ್ನಿಯನ್ನು ಕೊರೋನಾದಿಂದ ದೂರವಿಡಲು ಬಿಸಿಸಿಐ ಕಠಿಣ ನಿಯಮಗಳನ್ನು ರೂಪಿಸಿದ್ದು, ಎಲ್ಲ ತಂಡಗಳು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದೆ. 3 ಬಾರಿ ಕೋವಿಡ್ ಪರೀಕ್ಷೆಗೆ ನಡೆಸಿದೆ. ಪರೀಕ್ಷೆಗೆಂದೇ ಬಿಸಿಸಿಐ 10 ಕೋಟಿ ರು. ಖರ್ಚು ಮಾಡುತ್ತಿದೆ. ಬ್ರಿಟನ್ ಮೂಲದ ಸಂಸ್ಥೆಯೊಂದರಿಂದ ಬಯೋ ಸೆಕ್ಯೂರ್ ವಾತಾವರಣ ನಿರ್ಮಾಣ ಮಾಡಿಸಿದ್ದು, ಟೂರ್ನಿ ಮುಗಿಯುವವರೆಗೂ ಹೊರಹೋಗುವಂತಿಲ್ಲ. 

ಕೊನೆಗೂ ಬಂತು ಐಪಿಎಲ್ ಟಿ20 ಹಬ್ಬ

ಖಾಲಿ ಕ್ರೀಡಾಂಗಣಗಳಲ್ಲಿ ಆಟ!

ಕ್ರಿಕೆಟ್ ಮಾತ್ರವಲ್ಲ, ಯಾವುದೇ ಕ್ರೀಡೆಯಲ್ಲಿ ಆದರೂ ಪ್ರೇಕ್ಷಕರ ಉಪಸ್ಥಿತಿ ಮಹತ್ವದಾಗಿರಲಿದೆ. ಆದರೆ ಕೊರೋನಾ ಸೋಂಕಿನ ಭೀತಿಯಿಂದಾಗಿ ಈ ಬಾರಿ ಐಪಿಎಲ್ ಪಂದ್ಯಗಳನ್ನು ಅಭಿಮಾನಿ ಗಳು ಟೀವಿಯಲ್ಲಷ್ಟೇ ವೀಕ್ಷಿಸಬೇಕಿದೆ. ಅಭಿಮಾನಿ ಗಳ ಬೆಂಬಲದಿಂದ ಸ್ಫೂರ್ತಿ ಪಡೆಯುವ ಆಟಗಾರರು, ಈ ಬಾರಿ ಖಾಲಿ ಕ್ರೀಡಾಂಗಣ ಗಳಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎನ್ನವುದು ಎಲ್ಲರಲ್ಲೂ ಇರುವ ಕುತೂಹಲ. 

ನಿಧಾನ ಪಿಚ್‌ಗಳು: ಸ್ಪಿನ್ ಮೇಲುಗೈ?

ಕಳೆದ ಡಿಸೆಂಬರ್‌ನಲ್ಲಿ ಆಟಗಾರರ ಹರಾಜು ನಡೆದಾಗ, ತಂಡಗಳು ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಿಕೊಂಡಿದ್ದರು. ಯುಎಇ ಪಿಚ್‌ಗಳು ನಿಧಾನವಾಗಿರಲಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದ್ದು, 150-160 ರನ್ ಗಳಿಸಿದರೂ ಗೆಲ್ಲುವ ಅವಕಾಶ ಹೆಚ್ಚಿರಲಿದೆ. ಅಲ್ಲದೇ ಇಲ್ಲಿನ ಹವಾಮಾನ ಗಮನದಲ್ಲಿಟ್ಟುಕೊಂಡೇ ಫ್ರಾಂಚೈಸಿಗಳು ತಂಡಗಳನ್ನು ಬಲಿಷ್ಠಗೊಳಿಸಿಕೊಂಡಿದ್ದಾರೆ.  
 

click me!