IPL ಆರಂಭಕ್ಕೂ ಮುನ್ನವೇ KKR ತಂಡಕ್ಕೆ ಶಾಕ್, ಅನುಭವಿ ಆಟಗಾರ ಟೂರ್ನಿಯಿಂದಲೇ ಔಟ್!

By Suvarna NewsFirst Published Feb 28, 2020, 11:33 AM IST
Highlights

13ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡ ಕೂಡಿಕೊಂಡಿದ್ದ ಅನುಭವಿ ಸ್ಪಿನ್ನರ್ 2020ರ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನರ್ಹರಾಗಿದ್ದಾರೆ. ಯಾರು ಆ ಬೌಲರ್? ಏನಾಯ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಮುಂಬೈ(ಫೆ.28): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕೋಲ್ಕತಾ ನೈಟ್‌ರೈಡರ್ಸ್ ತಂಡದ ಅನುಭವಿ ಆಟಗಾರ ಮಿಲಿಯನ್ ಡಾಲರ್ ಟೂರ್ನಿಯಾಡಲು ಅನರ್ಹರಾಗಿದ್ದಾರೆ. 

IPL 2020: ಕೆಕೆಆರ್ ತಂಡಕ್ಕೆ ಹೊಸ ಕೋಚ್ ನೇಮಕ!

ಹೌದು, 48 ವರ್ಷದ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ತಾಂಬೆ ಮುಂಬರುವ ಐಪಿಎಲ್‌ 13ನೇ ಆವೃತ್ತಿಯಲ್ಲಿ ಆಡಲು ಅನರ್ಹರಾಗಿದ್ದಾರೆ. ಐಪಿಎಲ್‌ ಆಡಳಿತ ಸಮಿತಿ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಬಿಸಿಸಿಐ ಅನುಮತಿ ಪಡೆಯದೆ ದುಬೈನಲ್ಲಿ ನಡೆದ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಬಿಸಿಸಿಐನಿಂದ ಅನುಮತಿ ಪಡೆಯದೆ ವಿದೇಶಿ ಲೀಗ್‌ನಲ್ಲಿ ಆಡಿದ್ದಕ್ಕೆ ಅವರನ್ನು ಅನರ್ಹಗೊಳಿಸಲಾಗಿದೆ.

IPL ಆರಂಭಕ್ಕೂ KKR ತಂಡಕ್ಕೆ ಆಘಾತ, ಆಲ್ರೌಂಡರ್ 3 ತಿಂಗಳು ಬ್ಯಾನ್..!

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್‌ರೈಡರ್ಸ್ ತಂಡ 20 ಲಕ್ಷ ರುಪಾಯಿ ನೀಡಿ ತಾಂಬೆಯನ್ನು ಖರೀದಿಸಿತ್ತು. 2018ರಲ್ಲಿ ತಾಂಬೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಇನ್ನು ತಾಂಬೆ ನಿವೃತ್ತಿಯಿಂದ ಹೊರಬಂದು ಮುಂಬೈ ಲೀಗ್‌ನಲ್ಲಿ ಆಡಿದ್ದರು. 

IPL 2020ರ ಟೂರ್ನಿಯ ಹಿರಿಯ ಆಟಗಾರ ಪ್ರವೀಣ್ ತಾಂಬೆ!

2013ರಿಂದ 2016ರವರೆಗೆ 4 ಐಪಿಎಲ್ ಆವೃತ್ತಿಗಳಲ್ಲಿ ಪ್ರವೀಣ್ ತಾಂಬೆ ರಾಜಸ್ಥಾನ ರಾಯಲ್ಸ್, ಗುಜರಾತ್ ಲಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಕಾಣಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಒಟ್ಟು 33 ಪಂದ್ಯಗಳನ್ನಾಡಿದ್ದ ತಾಂಬೆ 28 ವಿಕೆಟ್‌ಗಳನ್ನು ಪಡೆದಿದ್ದರು. 
 

click me!