ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟನ್ನು ಸ್ವತಃ ತಾವೇ ರೆಡಿ ಮಾಡಿಕೊಳ್ಳುತ್ತಿದ್ದು, ಈ ವಿಡಿಯೋ ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ದುಬೈ(ಸೆ.12): ಕೊರೋನಾ ಸೋಂಕು ತಡೆಯಲು ಬಯೋ ಸೆಕ್ಯೂರ್ ವಾತಾವರಣ ಸೃಷ್ಟಿಸಿರುವ ಐಪಿಎಲ್ ಅಯೋಜಕರು, ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಹೊರತು ಪಡಿಸಿ ಮತ್ತ್ಯಾರಿಗೂ ಕ್ರೀಡಾಂಗಣ, ಹೋಟೆಲ್‌ಗೆ ಪ್ರವೇಶ ನೀಡುತ್ತಿಲ್ಲ.
ಈ ಕಾರಣದಿಂದಾಗಿ ಆಟಗಾರರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಿದೆ. ಬ್ಯಾಟ್ ತಯಾರಕರಿಗೂ ಪ್ರವೇಶವಿಲ್ಲದ ಕಾರಣ, ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಹೋಟೆಲ್ ಕೊಠಡಿಯಲ್ಲಿ ಬ್ಯಾಟ್‌ಗಳನ್ನು ತಾವೇ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೊಹ್ಲಿ ಗರಗಸದಲ್ಲಿ ಬ್ಯಾಟ್ ಹ್ಯಾಂಡಲ್ ಕಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
undefined
IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!
‘ಸಣ್ಣ ವಿಚಾರವೂ ಮಹತ್ವದಾಗಲಿದೆ. ಬ್ಯಾಟ್ ಸಮತೋಲನವನ್ನು ಕಾಪಾಡಲು ಕೆಲ ಸೆಂಟಿ ಮೀಟರ್‌ಗಳು ಸಹ ಮುಖ್ಯವೆನಿಸಲಿದೆ’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
It's the small details that matter 👌. For me even couple of centimeters are crucial for the balance of a bat. I LOVE taking care of my bats 😍 pic.twitter.com/oJ4Tqk5UfP
— Virat Kohli (@imVkohli)ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಪ್ಟೆಂಬರ್ 21ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.