IPL ಹರಾಜಿನಲ್ಲಿ ಉತ್ತಪ್ಪ ಬಳಿಕ 2ನೇ ಭಾರತೀಯ ಕ್ರಿಕೆಟಿಗ ಸೇಲ್!

By Suvarna NewsFirst Published Dec 19, 2019, 5:09 PM IST
Highlights

ಈ ಬಾರಿ ಹರಾಜಿನಲ್ಲಿ ಇದುವರೆಗೆ ಇಬ್ಬರು ಭಾರತೀಯ ಕ್ರಿಕೆಟಿಗರು ಸೇಲಾಗಿದ್ದಾರೆ. ರಾಬಿನ್ ಉತ್ತಪ್ಪ ಬಳಿಕ ಇದೀಗ ವೇಗಿ ಜಯದೇವ್ ಉನಾದ್ಕಟ್ ಬಿಕರಿಯಾಗಿದ್ದಾರೆ. 

ಕೋಲ್ಕತಾ(ಡಿ.19):  ಐಪಿಎಲ್ ಆಟಗಾರರ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಭಾರೀ ಬೇಡಿಕೆ ಬರುತ್ತಿದೆ. ಇದುವರೆಗಿನ ಬಿಡ್ಡಿಂಗ್‌ನಲ್ಲಿ ಕೇವಲ ಇಬ್ಬರು ಭಾರತೀಯರು ಸೇಲಾಗಿದ್ದಾರೆ. ರಾಬಿನ್ ಉತ್ತಪ್ಪ ಬಳಿಕ ಬಿಕರಿಯಾದ ಭಾರತೀಯ ಕ್ರಿಕೆಟಿಗ ವೇಗಿ ಜಯದೇವ್ ಉನಾದ್ಕಟ್. ರಾಜಸ್ಥಾನ ರಾಯಲ್ಸ್ 3 ಕೋಟಿ ರೂಪಾಯಿ ನೀಡಿ ಉನಾದ್ಕಟ್ ಖರೀದಿಸಿತು.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಜಯದೇವ್ ಉನಾದ್ಕಟ್ ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ , ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪೈಪೋಟಿ ನಡೆಸಿತು. ಅಂತಿಮವಾಗಿ ರಾಜಸ್ಥಾನ ಬಿಡ್ಡಿಂಗ್‌ನಲ್ಲಿ ಗೆಲುವು ಸಾಧಿಸಿತು.

ಕಳೆದ ಐಪಿಎಲ್ ಹರಾಜಿನಲ್ಲಿ ಜಯದೇವ್ ಉನಾದ್ಕಟ್ 8.5 ಕೋಟಿ ರೂಪಾಯಿ ನೀಡಿ ಇದೇ ರಾಜಸ್ಥಾನ ರಾಯಲ್ಸ್ ಖರೀದಿಸಿತ್ತು. 2017ರ ಹರಾಜಿನಲ್ಲಿ 11 ಕೋಟಿ ರೂಪಾಯಿ ಮೊತ್ತಕ್ಕೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಖರೀದಿಸಿತ್ತು.

click me!