IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

By Suvarna NewsFirst Published Feb 22, 2020, 6:22 PM IST
Highlights

ಕ್ರೀಡೆಯಲ್ಲಿನ ಒಂದು ನಿರ್ಧಾರ, ಒಂದು ಸೆಕೆಂಡ್, ಒಂದು ರನ್, ಒಂದು ಗೋಲು, ಪಾಯಿಂಟ್ ಎಷ್ಟು ಮುಖ್ಯ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. 2008ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತೆಗೆದುಕೊಂಡ ಒಂದು ನಿರ್ಧಾರಕ್ಕೆ ಈಗಲೂ ಪರಿತಪಿಸುತ್ತಿದೆ. ಅದುವೆ ಕೊಹ್ಲಿ ಆಯ್ಕೆ.. ಈ ಕುರಿತು ರೋಚಕ ಮಾಹಿತಿ ಇಲ್ಲಿದೆ.

ಬೆಂಗಳೂರು(ಫೆ.22): ಐಪಿಎಲ್ ಟೂರ್ನಿ ವಿಶ್ವದ ಅತ್ಯಂತ ಯಶಸ್ವಿ ಕ್ರಿಕೆಟ್ ಲೀಗ್ ಟೂರ್ನಿ. ಯುವ ಆಟಗಾರರಿಗೆ ವೇದಿಕೆ, ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಚಾನ್ಸ್, ಆದಾಯ ಸೇರಿದಂತೆ ಎಲ್ಲಾ ರೀತಿಯಲ್ಲೂ ಐಪಿಎಲ್ ಇತರ ಲೀಗ್ ಕ್ರಿಕೆಟ್ ಟೂರ್ನಿಗಳಿಂತ ಮುಂದಿದೆ. 2008ರಲ್ಲಿ ಐಪಿಎಲ್ ಆರಂಭವಾದಾಗ ಹರಾಜಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಅತ್ಯುತ್ತಮ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿತು. ಇದೀಗ ಪರಿತಪಿಸುವಂತಾಗಿದೆ.

ಇದನ್ನೂ ಓದಿ: ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!.

ಮೊದಲ ಐಪಿಎಲ್ ಆವೃತ್ತಿಯ ಟೂರ್ನಿ 2ನೇ ಹರಾಜು ತೀವ್ರ ಕುತೂಹಲ ಕೆರಳಿಸಿತ್ತು. ಕಾರಣ ಈ ಹರಾಜಿನ 10 ದಿನ ಮೊದಲು ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕಿರಿಯರ ತಂಡ ಅಂಡರ್ 19  ವಿಶ್ವಕಪ್ ಟ್ರೋಫಿ ಗೆದ್ದಿತ್ತು.  ಅಂಡರ್ 19 ತಂಡದ ಆಟಗಾರನ್ನು ಡ್ರಾಫ್ಟ್ ಮೂಲಕ ನೇರವಾಗಿ ಖರೀದಿಸುವ ಅವಕಾಶ ಕಲ್ಪಿಸಲಾಗಿತ್ತು. 

ಇದನ್ನೂ ಓದಿ: ಬೆಂಗಳೂರು ಮೂಲದ ಕಂಪನಿಯಲ್ಲಿ ವಿರುಷ್ಕಾ 3.5 ಕೋಟಿ ಬಂಡವಾಳ ಹೂಡಿಕೆ!.

ಡ್ರಾಫ್ಟ್ ಮೂಲಕ ಯಾವ ಆಟಗಾರರನ್ನು ಖರೀದಿಸುವ ಅವಕಾಶ 8 ಫ್ರಾಂಚೈಸಿಗಿತ್ತು. ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಮೊದಲು ಆಯ್ಕೆ ಮಾಡುವ ಚಾನ್ಸ್ ಒಲಿದು ಬಂದಿತ್ತು. ಡೆಲ್ಲಿ ಡೇರ್‌ಡೆವಿಲ್ಸ್ ಅಂಡರ್ 19 ತಂಡದ ನಾಯಕ ವಿರಾಟ್ ಕೊಹ್ಲಿ ಬದಲು, ವೇಗಿ ಪ್ರದೀಪ್ ಸಂಗ್ವಾನ್ ಆಯ್ಕೆ ಮಾಡಿತು. ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಪ್ರದೀಪ್ ಉತ್ತಮ ಪ್ರದರ್ಶನ ನೀಡಿದ್ದರು.

ಡ್ರಾಫ್ಟ್ ಮೂಲಕ ಡೆಲ್ಲಿ ತಂಡ ಸಾಂಗ್ವಾನ್ ಆಯ್ಕೆ ಮಾಡಿಕೊಂಡರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಕ್ಷಣ ತಡಮಾಡದೇ ವಿರಾಟ್ ಕೊಹ್ಲಿ ಆಯ್ಕೆ ಮಾಡಿತು. ನಂತರ ಇತಿಹಾಸ. ಕಾರಣ 2008ರಿಂದ ವಿರಾಟ್ ಕೊಹ್ಲಿ RCB ತಂಡ ಪ್ರತಿನಿಧಿಸುತ್ತಿದ್ದಾರೆ. ಆರಂಭಿಕ 2 ಆವೃತ್ತಿ ಕೊಹ್ಲಿಗೆ ತೃಪ್ತಿ ನೀಡಿರಲಿಲ್ಲ. ಆದರೆ ಟೀಂ ಇಂಡಿಯಾಗೆ ಅವಕಾಶ ಗಿಟ್ಟಿಸಿಕೊಂಡ ಕೊಹ್ಲಿ ಇದೀಗ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಹಾಗೂ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 

click me!