
ನವದೆಹಲಿ(ಫೆ.18): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲಿಕರು, ವಿಂಡೀಸ್‌ನ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್)ನ ಸೇಂಟ್ ಲೂಸಿಯಾ ಫ್ರಾಂಚೈಸಿಯನ್ನು ಖರೀದಿಸಲು ಮುಂದಾಗಿದ್ದಾರೆ.
ಇದರೊಂದಿಗೆ ಸಿಪಿಎಲ್‌ನಲ್ಲಿ ತಂಡ ಹೊಂದರಲಿರುವ ಐಪಿಎಲ್‌ನ 2ನೇ ತಂಡ ಎನ್ನುವ ಹಿರಿಮೆಗೆ ಕಿಂಗ್ಸ್ ಇಲೆವೆನ್ ಪಾತ್ರವಾಗಲಿದೆ. ಈ ಹಿಂದೆ ಕೋಲ್ಕತಾ ನೈಟ್‌ರೈಡರ್ಸ್ 2015ರಲ್ಲಿ ಟ್ರಿನಿಬ್ಯಾಗೋ ನೈಟ್‌ರೈಡರ್ಸ್ ತಂಡವನ್ನು ಖರೀದಿಸಿತ್ತು. ಟ್ರಿನಿಬ್ಯಾಗೋ ನೈಟ್‌ರೈಡರ್ಸ್ ಮೂರು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿದೆ.
IPL 2020: ಹರಾಜಿನ ಬಳಿಕ KXIP ತಂಡದ ಫುಲ್ ಲಿಸ್ಟ್!
ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳಲ್ಲಿ ಸೇಂಟ್ ಲೂಸಿಯಾ ಕೂಡಾ ಒಂದು ಎನಿಸಿದೆ. ಸೇಂಟ್ ಲೂಸಿಯಾ ತಂಡವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಮುನ್ನಡೆಸುತ್ತಿದ್ದಾರೆ. ಸೇಂಟ್ ಲೂಸಿಯಾ 2016ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೇ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.
2020ರ ಆವೃತ್ತಿಯ ಸಿಪಿಎಲ್ ಆಗಸ್ಟ್ 19ರಿಂದ ಸೆಪ್ಟೆಂಬರ್ 26ರ ವರೆಗೂ ನಡೆಯಲಿದೆ. ಆರ್‌ಸಿಬಿಯ ಮಾಜಿ ಮಾಲಿಕ ವಿಜಯ್ ಮಲ್ಯ ಬಾರ್ಬಡೊಸ್ ಟ್ರೈಡೆಂಟ್ಸ್ ತಂಡವನ್ನು ಖರೀದಿಸಿದ್ದರು, ಆದರೆ ಕಳೆದ ವರ್ಷ ತಂಡದ ಮಾಲಿಕತ್ವವನ್ನು ಅವರು ಕಳೆದುಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.