ಭಾರತದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರುತ್ತಿದೆ. ಆರೋಗ್ಯವಂತರು ಭಯಭೀತರಾಗಿದ್ದಾರೆ. ಕೊರೋನಾ ಕಾರಣ ಉತ್ಸಾಹ ಕಳೆದುಕೊಂಡಿದ್ದಾರೆ. ಕೊರೋನಾ ವೈರಸ್ ಕಾರಣ ಮಾನಸಿಕ ಖಿನ್ನತೆ ಸೇರಿದಂತೆ ಹಲವು ಇತರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಸಪ್ಟೆಂಬರ್ 19ರಿಂದ ಮಾಯವಾಗಲಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಅದು ಹೇಗೆ ಅನ್ನೋದನ್ನು ವಿವರಿಸಿದ್ದಾರೆ.
ಮುಂಬೈ(ಆ.17): ಕೊರೋನಾ ವೈರಸ್ ಕಾರಣ ಜನರು ನಗುವುದನ್ನೇ ಮರೆತಿದ್ದಾರೆ. ಎಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ. ಮಾನಸಿಕ ಖಿನ್ನತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಕೊರೋನಾ ಮತ್ತಷ್ಟು ವೇಗ ನೀಡಿದೆ. ಕೊರೋನಾ ಕಾರಣ ಜನರು ಧೈರ್ಯ ಕಳೆದುಕೊಂಡಿದ್ದಾರೆ ಆದರೆ ಸೆಪ್ಟೆಂಬರ್ 19 ರಿಂದ ಭಾರತೀಯರಲ್ಲಿ ಕೊರೋನಾ ವೈರಸ್ ಭಯ ಮಾಯವಾಗಿ ಸಹಜ ಸ್ಥಿತಿಗೆ ಮರಳಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ
ಭಾರತ ಕಂಪನಿ ಮುಂದೆ ಬರದಿದ್ದರೆ IPL ಟೈಟಲ್ ಸ್ಪಾನ್ಸರ್‌ಗೆ ಪತಂಜಲಿ ಸಿದ್ಧ: ರಾಮ್‌ದೇವ್
ಕೊರೋನಾ ವೈರಸ್ ಕಾರಣ ಜನರು ಭಯದಿಂದಲೇ ಜವನ ಸಾಗಿಸುತ್ತಿದ್ದಾರೆ. ಮುಖದಲ್ಲಿ ನಗುವೇ ಕಾಣುತ್ತಿಲ್ಲ. ಆದರೆ ಸೆಪ್ಟೆಂಬರ್ 19 ರಿಂದ ಐಪಿಎಲ್ ಟೂರ್ನಿ ಆರಂಭವಾಗುವ ಕಾರಣ ಜನರ ಮುಖದಲ್ಲಿ ಮತ್ತೆ ನಗು ಮೂಡಲಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಸೀಸ್ ತಂಡ ಪ್ರಕಟ: RCB ಆಟಗಾರನಿಗೆ ಜಾಕ್‌ಪಾಟ್..!...
ಸದ್ಯ ಜನರು ಪ್ರತಿ ದಿನ ಕೊರೋನಾ ಸೋಂಕಿತರ ಸಂಖ್ಯೆ, ಗುಣಮುಖರಾದ ಸಂಖ್ಯೆ ಸೇರಿದಂತೆ ಕೊರೋನಾ ಅಂಕಿ ಸಂಖ್ಯೆಗಳ ಲೆಕ್ಕಾಚಾರವನ್ನೇ ಮಾಡುತ್ತಿದ್ದಾರೆ. ಆದರೆ ಐಪಿಎಲ್ ಆರಂಭವಾದ ಬಳಿಕ ಬೌಂಡರಿ, ಸಿಕ್ಸರ್, ರನ್, ವಿಕೆಟ್ ಸೇರಿದಂತೆ ಅಂಕಿ ಅಂಶಗಳ ಲೆಕ್ಕಾಚಾರ ಶುರುವಾಗಲಿದೆ. ಇದು ಜನರಲ್ಲಿ ಪಾಸಿಟಿವಿಟಿ ತುಂಬಲಿದೆ. ಕೊರೋನಾ ಭಯ ಮರೆತು ಬದುಕು ಮತ್ತೆ ಸಹಜ ಸ್ಥಿತಿಗೆ ಮರಳಿದೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಧೋನಿ ಬಗ್ಗೆ ತಿಳಿಯಲು ಈ ಮಾತುಗಳೇ ಸಾಕು...