ಐಪಿಎಲ್‌ ಪ್ರಾಯೋಜಕತ್ವಕ್ಕೆ ಬೆಂಗಳೂರು ಕಂಪನಿ ಅರ್ಜಿ..!

By Suvarna NewsFirst Published Aug 15, 2020, 11:04 AM IST
Highlights

13ನೇ ಆವೃತ್ತಿ ಐಪಿಎಲ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವಕ್ಕೆ ಪೈಪೋಟಿ ಜೋರಾಗಿದೆ. ಇದರ ನಡುವೆ ಬೆಂಗಳೂರು ಮೂಲದ ಕಂಪನಿ ಟೈಟಲ್ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಆ.15): ಪ್ರಸಕ್ತ ಸಾಲಿನ ಐಪಿಎಲ್‌ ಪ್ರಾಯೋಜಕತ್ವಕ್ಕೆ ಬೆಂಗಳೂರು ಮೂಲದ ಎಜ್ಯುಕೇಷನ್‌ ಟೆಕ್ನಾಲಜಿ ಸಂಸ್ಥೆ ‘ಅನ್‌ಅಕಾಡೆಮಿ’ ಮತ್ತು ಕ್ರೀಡಾ ಕ್ಷೇತ್ರದಲ್ಲಿಯೇ ಗುರುತಿಸಿಕೊಂಡ ಡ್ರೀಮ್‌11 ಸಂಸ್ಥೆಗಳು ಅರ್ಜಿ ಅಲ್ಲಿಸಿವೆ. 

ಸ್ವತಃ ಬಿಸಿಸಿಐ ಉನ್ನತ ಮೂಲಗಳೇ ಇದನ್ನು ಖಚಿತಪಡಿಸಿದೆ. ಆದರೆ ಬಿಡ್‌ ಮಾಡಿರುವ ಮೊತ್ತದ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರ ತನಕ ಯುಎಇಯಲ್ಲಿ ನಡೆಯಲಿರುವ ಐಪಿಎಲ್‌ 13ನೇ ಆವೃತ್ತಿಯ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ಅರ್ಜಿ ಸಲ್ಲಿಸಲು ಆಗಸ್ಟ್ 18 ಕಡೆಯ ದಿನವಾಗಿದೆ. ಟಾಟಾ ಮೊಟಾರ್ಸ್ ಕೂಡ ಅರ್ಜಿ ಸಲ್ಲಿಸಿದ್ದಾಗಿ ಸಾಕಷ್ಟು ಸುದ್ದಿಗಳು ಹರಿದಾಡಿವೆ.

ಐಪಿಎಲ್ 2020‌ ಕೇವಲ 10 ಸೆಕೆಂಡ್‌ ಜಾಹೀರಾತಿಗೆ 10 ಲಕ್ಷ ರುಪಾಯಿ..!

ಟಾಟಾ ಗ್ರೂಪ್, ರಿಲಯನ್ಸ್ ಜಿಯೋ, ಪತಾಂಜಲಿ, ಬೈಜೂಸ್, ಡ್ರೀಮ್ ಇಲೆವನ್ ಹಾಗೂ ಅನ್ಅಕಾಡಮಿ ಕಂಪನಿಗಳು 2020ನೇ ಸಾಲಿನ ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಒಲವು ತೋರಿವೆ. 

ಗಲ್ವಾನ್ ಘರ್ಷಣೆಯಲ್ಲಿ ಭಾರತದ 20 ಯೋಧರು ಕೊನೆಯುಸಿರೆಳೆದಿದ್ದರು. ಇದರ ಬೆನ್ನಲ್ಲೇ ದೇಶಾದ್ಯಂತ ಚೀನಾ ಉತ್ಫನ್ನಗಳನ್ನು ಬಹಿಷ್ಕರಿಸುವಂತೆ ಆಗ್ರಹ ಜೋರಾಗಿತ್ತು. ಹೀಗಾಗಿ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಹೊಂದಿದ್ದ ಚೀನಾ ಮೊಬೈಲ್ ಕಂಪನಿ ವಿವೋ ಬಿಸಿಸಿಐಯೊಂದಿಗಿನ ಒಪ್ಪಂದವನ್ನು ಕಡಿತ ಮಾಡಿಕೊಂಡಿತ್ತು.


 

click me!