13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ ಚಾನೆಲ್ 10 ಸೆಕೆಂಡ್‌ಗಳ ಜಾಹಿರಾತಿಗೆ 10 ಲಕ್ಷ ರುಪಾಯಿಗಳ ದರ ವಿಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.15): ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಐಪಿಎಲ್ 13ನೇ ಆವೃತ್ತಿಗೆ ಸಿದ್ಧತೆ ನಡೆದಿರುವ ಹಿನ್ನೆಲೆಯಲ್ಲಿ ಪ್ರಸಾರ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್, ಪಂದ್ಯಗಳ ನೇರ ಪ್ರಸಾರದ ವೇಳೆಯ ಜಾಹೀರಾತುಗಳ ಬೆಲೆಯನ್ನೂ ನಿಗದಿಗೊಳಿಸಿದೆ.
10 ಸೆಕೆಂಡ್‌ಗಳ ಜಾಹೀರಾತುಗಳಿಗೆ 10 ಲಕ್ಷ ರುಪಾಯಿ ನಿಗದಿ ಮಾಡಿದೆ ಎಂದು ವರದಿಯಾಗಿದೆ. ಕಳೆದ ಸಾಲಿನ ಐಪಿಎಲ್ ಟೂರ್ನಿಯಿಂದ ಸ್ಟಾರ್ ಸ್ಪೋರ್ಟ್ಸ್‌ಗೆ 3,000 ಕೋಟಿ ರು. ಆದಾಯ ಬಂದಿತ್ತು. ಕೊರೋನಾ ಹಿನ್ನೆಲೆಯಲ್ಲಿ ಜಾಹೀರಾತು ದರವನ್ನು ಇಳಿಕೆ ಮಾಡಲಾಗಿದೆ. ಹೀಗಾಗಿ ಹೆಚ್ಚು ಆದಾಯ ನಿರೀಕ್ಷಿಸಲಾಗದು ಎಂದು ಹೇಳಲಾಗಿದೆ.
undefined
ವಿಶ್ವಾದ್ಯಂತ ಕೊರೋನಾ ಸೋಂಕಿನಿಂದಾಗಿ ಆರ್ಥಿಕ ಕುಸಿತವಾಗಿರುವ ಹಿನ್ನೆಲೆಯಲ್ಲಿ ಜಾಹೀರಾತು ದರಗಳಲ್ಲಿ ಕಡಿಮೆ ಮಾಡಲಾಗಿದೆ. ಪ್ರತಿ 10 ಸೆಕೆಂಡ್‌ಗಳ ಜಾಹೀರಾತಿಗೆ 8-10 ಲಕ್ಷ ರು. ನಿಗಧಿಗೊಳಿಸಿದೆ. ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಜಾಹೀರಾತು ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕೊರೋನಾ ನೆಗೆಟಿವ್ ಬೆನ್ನಲ್ಲೇ ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ
ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೋನಾ ಭೀತಿಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಅಬುದಾಬಿ, ದುಬೈ ಹಾಗೂ ಶಾರ್ಜಾ ಮೈದಾನದಲ್ಲಿ ಜರುಗಲಿದೆ.