ಐಪಿಎಲ್ ವೀಕ್ಷಕರ ಸಂಖ್ಯೆ ಈ ಬಾರಿ ಶೇ.28% ಹೆಚ್ಚಳ..!

By Suvarna NewsFirst Published Nov 13, 2020, 11:33 AM IST
Highlights

13ನೇ ಆವೃತ್ತಿಯ ಐಪಿಎಲ್ ಟೂರ್ನಿ ಖಾಲಿ ಮೈದಾನದಲ್ಲೇ ನಡೆದರೂ ಅದರ ಜನಪ್ರಿಯತೆ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ನ.13): ಇತ್ತೀಚೆಗಷ್ಟೇ ಮುಕ್ತಾಯವಾದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೀಕ್ಷಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚು ಮಂದಿ ಈ ಬಾರಿ ಟೂರ್ನಿಯನ್ನು ವೀಕ್ಷಿಸಿದ್ದಾರೆ. 

ಐಪಿಎಲ್‌ ಚೇರ್ಮನ್‌ ಬ್ರಿಜೇಶ್‌ ಪಟೇಲ್‌ ಈ ಕುರಿತು ಗುರುವಾರ ಮಾಹಿತಿ ನೀಡಿದ್ದು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಯುಎಇಯಲ್ಲಿ ಆಯೋಜನೆಗೊಂಡಿದ್ದರೂ ವೀಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ. ತನ್ನ ಎಂದಿನ ಜನಪ್ರಿಯತೆಯನ್ನು ಐಪಿಎಲ್‌ ಟೂರ್ನಿ ಕಳೆದುಕೊಂಡಿಲ್ಲ. ಕಳೆದ ಆವೃತ್ತಿಗಿಂತಲೂ ಶೇ.28ರಷ್ಟು ಹೆಚ್ಚು ಮಂದಿ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಈ ಬಾರಿ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡಿರುವುದು ಇದಕ್ಕೊಂದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

IPL ಸೇರಿಕೊಳ್ಳುತ್ತಿದೆ ಹೊಸ ತಂಡ; ದೀಪಾವಳಿ ಬಳಿಕ ಬಿಡ್ಡಿಂಗ್?

ಭಾರತದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೋನಾ ಆತಂಕದಿಂದಾಗಿ ಯುಎಇಗೆ ಸ್ಥಳಾಂತರಗೊಂಡಿತ್ತು. ಸೆಪ್ಟೆಂಬರ್ 19ರಿಂದ ಆರಂಭವಾದ ಐಪಿಎಲ್ ನವೆಂಬರ್ 10ರವರೆಗೂ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ದುಬೈನಲ್ಲಿ ನವೆಂಬರ್ 10ರಂದು ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಮುಂಬೈ ಇಂಡಿಯನ್ಸ್‌ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

click me!