ಐಪಿಎಲ್ 2020: ಚೆನ್ನೈ ಸೂಪರ್‌ ಕಿಂಗ್ಸ್‌ಗಿಂದು ರಾಜಸ್ಥಾನ ರಾಯಲ್ಸ್ ಚಾಲೆಂಜ್..!

By Kannadaprabha News  |  First Published Sep 22, 2020, 9:11 AM IST

ಇಂದು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಹಾಗೂ ಧೋನಿ ನೇತೃತ್ವದ 3 ಬಾರಿಯ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಶಾರ್ಜಾ(ಸೆ.22): ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ಸ್‌ ಆಗಿದ್ದ ರಾಜಸ್ಥಾನ ರಾಯಲ್ಸ್‌ ತಂಡವು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಮಂಗಳವಾರ ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೆಣಸಲಿದೆ.

ಮಿದುಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನಾಯಕ ಸ್ಟೀವ್‌ ಸ್ಮಿತ್‌ ಗುಣಮುಖರಾಗಿದ್ದು, ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕ್ವಾರಂಟೈನ್‌ ಪೂರೈಸಬೇಕಾದ ಹಿನ್ನೆಲೆಯಲ್ಲಿ ಸ್ಟಾರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಅಲಭ್ಯರಾಗಿದ್ದಾರೆ. ಜತೆಗೆ ಬೆನ್‌ ಸ್ಟೋಕ್ಸ್‌ ಗೈರು ರಾಯಲ್ಸ್‌ ಚಿಂತೆಗೆ ಕಾರಣವಾಗಿದೆ. ಜೋಫ್ರಾ ಆರ್ಚರ್‌, ಟಾಮ್‌ ಕರ್ರನ್‌ ಬೌಲಿಂಗ್‌ ಬಲ ಸ್ಮಿತ್‌ ಪಡೆಗಿದೆ.

Latest Videos

undefined

IPL 2020: ಚಹಾಲ್ ಸ್ಪಿನ್ ಮೋಡಿಗೆ SRH ತಬ್ಬಿಬ್ಬು, RCBಗೆ ಸಿಕ್ತು ಗೆಲುವು!

ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಅನ್ನು ಮಣಿಸಿರುವ ಚೆನ್ನೈ ಗೆಲುವಿನ ಓಟ ಮುಂದುವರೆಸುವ ಆತ್ಮವಿಶ್ವಾಸದಲ್ಲಿದೆ. ಎಂತಹ ಸಂದರ್ಭದಲ್ಲೂ ಪಂದ್ಯದ ಗತಿ ಬದಲಿಸುವ ಧೋನಿ ಚಾಣಾಕ್ಷತನ ಚೆನ್ನೈನ ಪ್ರಮುಖ ಬಲವಾಗಿದೆ. ಸುರೇಶ್‌ ರೈನಾ ಸ್ಥಾನವನ್ನು ಅಂಬಟಿ ರಾಯುಡು ಸಮರ್ಥವಾಗಿ ತುಂಬಿದ್ದು, ಫಾಫ್‌ ಡು ಪ್ಲೇಸಿಸ್‌, ಧೋನಿ ಚೆನ್ನೈ ಪ್ರಮುಖ ಬ್ಯಾಟಿಂಗ್‌ ಬಲವಾಗಿದ್ದಾರೆ. ಶೇನ್‌ ವ್ಯಾಟ್ಸನ್‌, ರವೀಂದ್ರ ಜಡೇಜಾರಂತಹ ಆಲ್‌ರೌಂಡರ್‌ಗಳ ಲಭ್ಯತೆ ತಂಡದ ಬಲವನ್ನು ಹೆಚ್ಚಿಸಿದ್ದು, ಪಿಯೂಷ್‌ ಚಾವ್ಲಾ, ಲುಂಗಿ ಎನ್‌ಗಿಡಿ ಬೌಲಿಂಗ್‌ನ ಪ್ರಮುಖ ಅಸ್ತ್ರವಾಗಿದ್ದಾರೆ. ಒಟ್ಟಾರೆ ಇಂದಿನ ಪಂದ್ಯದಲ್ಲಿ ಚೆನ್ನೈ ಫೆವರಿಟ್‌ ಆಗಿದೆ.

ಒಟ್ಟು ಮುಖಾಮುಖಿ: 21

ಚೆನ್ನೈ 14

ರಾಜಸ್ಥಾನ್‌ 7

ಸಂಭಾವ್ಯ ಆಟಗಾರರು

ರಾಜಸ್ಥಾನ್‌ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ರಾಬಿನ್‌ ಉತ್ತಪ್ಪ, ಸಂಜು ಸ್ಯಾಮ್ಸನ್‌, ಸ್ಟೀವನ್‌ ಸ್ಮಿತ್‌(ನಾಯಕ), ರಿಯಾನ್‌ ಪರಾಗ್‌, ಡೇವಿಡ್‌ ಮಿಲ್ಲರ್‌, ಶ್ರೇಯಸ್‌ ಗೋಪಾಲ್‌, ಜೋಫ್ರಾ ಆರ್ಚರ್‌, ಟಾಮ್‌ ಕರ್ರನ್‌‌, ಜಯದೇವ್‌ ಉನದ್ಕಟ್‌, ಅನಿರುದ್ಧ ಜೋಶಿ

ಚೆನ್ನೈ ಸೂಪರ್‌ ಕಿಂಗ್ಸ್‌: ಮುರಳಿ ವಿಜಯ್, ಶೇನ್‌ ವ್ಯಾಟ್ಸನ್‌, ಫಾಫ್‌ ಡು ಪ್ಲೇಸಿಸ್‌, ಅಂಬಟಿ ರಾಯುಡು, ಕೇದಾರ್‌ ಜಾಧವ್‌, ಧೋನಿ(ನಾಯಕ), ರವೀಂದ್ರ ಜಡೇಜಾ, ಸ್ಯಾಮ್‌ ಕರ್ರನ್‌, ದೀಪಕ್‌ ಚಹರ್‌, ಪಿಯೂಷ್‌ ಚಾವ್ಲಾ, ಲುಂಗಿ ಎನ್‌ಗಿಡಿ

ಪಿಚ್‌ ರಿಪೋರ್ಟ್‌: ಈ ಬಾರಿಯ ಐಪಿಎಲ್‌ ನಡೆಯುತ್ತಿರುವ 3 ಕ್ರೀಡಾಂಗಣ ಪೈಕಿ ಶಾರ್ಜಾ ಮೈದಾನವು ಕೊಂಚ ಚಿಕ್ಕ ಮೈದಾನವಾಗಿದ್ದು, ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಶಾರ್ಜಾ ಮೈದಾನವು ನಿಧಾನಗತಿಯ ಪಿಚ್‌ ಆಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕಾರಿ ಆಗಿದೆ. ಟಾಸ್‌ ಗೆದ್ದ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 150-160 ರನ್‌ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

click me!