ಎಬಿಡಿ-ಪಡಿಕ್ಕಲ್ ಅಬ್ಬರ, ಹೈದರಾಬಾದ್‌ಗೆ 164 ರನ್ ಟಾರ್ಗೆಟ್ ನೀಡಿದ RCB

By Suvarna NewsFirst Published Sep 21, 2020, 9:16 PM IST
Highlights

ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಹಾಗೂ ದೇವದತ್ ಪಡಿಕ್ಕಲ್ ಹಾಫ್ ಸೆಂಚುರಿ ನೆರವಿನಿಂದ RCB ಹೊಸ ಅಧ್ಯಾಯ ಆರಂಭಿಸಿದೆ. 3ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಮೊತ್ತ ಪೇರಿಸಿದೆ. 

ದುಬೈ(ಸೆ.21): ಬಹುತೇಕ ಐಪಿಎಲ್ ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಪ್ ಆರ್ಡರ್ ಸಮಸ್ಯೆ ಎದುರಿಸಿತ್ತು. ಎಬಿ ಡಿವಿಲಿಯರ್ಸ್ ಸ್ಫೋಟಕ ಇನ್ನಿಂಗ್ಸ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್  ಹಾಫ್ ಸೆಂಚುರಿ ನೆರವಿನಿಂದ RCB 5 ವಿಕೆಟ್ ಕಳೆದುಕೊಂಡು 163 ರನ್ ಸಿಡಿಸಿದೆ.

IPL 2020: ಡೆಬ್ಯು ಪಂದ್ಯದಲ್ಲಿ ಕನ್ನಡಿಗ ದೇವದತ್ ದಾಖಲೆಯ ಹಾಫ್ ಸೆಂಚುರಿ!.

ಈ ಬಾರಿ ಭಿನ್ನ ತಂಡದೊಂದಿದೆ ಕಣಕ್ಕಿಳಿದಿರುವ RCB ಭರ್ಜರಿ ಆರಂಭ ಪಡೆದಿದೆ. ಈ ಮೂಲಕ ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಸೂಚನೆ ನೀಡಿದೆ. ಆರಂಭಿಕ, ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆ್ಯರೋನ್ ಫಿಂಚ್ ಆರಂಭಕ್ಕೆ ಸನ್‌ರೈಸರ್ಸ್ ಹೈದರಾಬಾದ್ ನಡುಗಿತು. ಪದಾರ್ಪಣಾ ಪಂದ್ಯದಲ್ಲಿ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

42 ಎಸೆತದಲ್ಲಿ 8 ಬೌಂಡರಿ ನೆರವಿನಿಂದ 56 ರನ್ ಸಿಡಿಸಿದ ಪಡಿಕ್ಕಲ್ RCBಗೆ ಉತ್ತಮ ಆರಂಭ ಒದಗಿಸಿದರು. ಪಡಿಕ್ಕಲ್ ಬೆನ್ನಲ್ಲೇ ಆ್ಯರೋನ್ ಫಿಂಚ್ 29 ರನ್ ಕಾಣಿಕೆ ನೀಡಿ ನಿರ್ಗಮಿಸಿದರು. ಇತ್ತ ನಾಯಕ ವಿರಾಟ್ ಕೊಹ್ಲಿ ಆರ್ಭಟಿಸಲಿಲ್ಲ. ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು.

ಎಬಿ ಡಿವಿಲಿಯರ್ಸ್ ತಂಡಕ್ಕೆ ಆಸರೆಯಾದರು. ಬೌಂಡರಿ  ಮೂಲಕ ಎಬಿಡಿ ಇನ್ನಿಂಗ್ಸ್ ಆರಂಭಗೊಂಡಿತು. 29 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಹಾಫ್ ಸೆಂಚುರಿ ಸಿಡಿಸಿದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಎಬಿಡಿ ರನೌಟ್‌ಗೆ ಬಲಿಯಾದರು.  ಶಿವಂ ದುಬೆ 7 ರನ್ ಕಾಣಿಕೆ ನೀಡಿದರು. ಈ ಮೂಲಕ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು.
 

click me!