Published : Dec 19, 2019, 03:24 PM ISTUpdated : Dec 19, 2019, 09:55 PM IST

IPL Auction 2020 Live Updates: ಹರಾಜಿನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

ಸಾರಾಂಶ

2020ರ IPLಗಾಗಿ ಕೋಲ್ಕತಾದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಅದೃಷ್ಟ ಪರೀಕ್ಷೆಗಿಳಿದ 332 ಮಂದಿ ಹರಾಜು ಪ್ರಕ್ರಿಯೆ ಮುಂದುವರಿದಿದೆ. ಬಿಸಿಸಿಐ 971 ಆಟಗಾರರ ಪಟ್ಟಿಯನ್ನು 338 ಆಟಗಾರರಿಗೆ ಇಳಿಸಿದ್ದು, ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಬಹುದು. ಮೊದಲು ಬ್ಯಾಟ್ಸ್‌ಮೆನ್‌ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಆಲ್ರೌಂಡರ್‌ಗಳು, ವಿಕೆಟ್‌ ಕೀಪರ್‌ಗಳು, ವೇಗಿಗಳು ಹಾಗೂ ಸ್ಪಿನ್ನರ್‌ಗಳ ಹರಾಜು ನಡೆಯಲಿದೆ. ಹಾಗಾದ್ರೆ ಯಾವ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾಗ್ತಾರೆ? ಯಾವ ಆಟಗಾರ ಎಷ್ಟು ಮೊತ್ತಕ್ಕೆ ಹರಾಜಾಗ್ತಾರೆ? ಇಲ್ಲಿದೆ ಲೈವ್ ಅಪ್ಡೇಟ್ಸ್

IPL Auction 2020 Live Updates: ಹರಾಜಿನ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ!

07:08 PM (IST) Dec 19

ಇದುವರೆಗೆ ಸೋಲ್ಡ್ ಆದವರು ಇವರು..

ಯಾವ ಆಟಗಾರರು ಎಷ್ಟಕ್ಕೆ ಸೋಲ್ಡ್ ಆಗಿದ್ದಾರೆ?

 

 

07:06 PM (IST) Dec 19

ಪಾಲಿಪುರಿ ಮಾರೋ ಹುಡುಗ ರಾಜಸ್ಥಾನ್ ರಾಯಲ್ಸ್ ಪಾಲು

06:54 PM (IST) Dec 19

ಮಿ.ನ್ಯಾಗ್ಸ್ ಮತ್ತೆ RCBಗೆ

06:43 PM (IST) Dec 19

ಜೋಸ್ ಹೇಜಲ್‌ವುಡ್ 2 ಕೋಟಿಗೆ CSK ಪಾಲು

06:42 PM (IST) Dec 19

ನೀಶಮ್ ಪಂಜಾಬ್ ಪಾಲು

ಕಿವೀಸ್ ಆಲ್ರೌಂಡರ್ ಜೇಮ್ಸ್ ನೀಶಮ್ 50 ಲಕ್ಷಕ್ಕೆ ಕಿಂಗ್ಸ್ ಇಲೆವನ್ ಪಂಜಾಬ್ ಪಾಲು

06:38 PM (IST) Dec 19

ಅನ್‌ಸೋಲ್ಡ್ ಆದ ಆಟಗಾರ ಟ್ರೋಲ್

06:37 PM (IST) Dec 19

ಕಿವೀಸ್ ಆಲ್ರೌಂಡರ್ ಪಂಜಾಬ್ ಪಾಲು

ಕಿವೀಸ್ ಆಲ್ರೌಂಡರ್ ಜೇಮ್ಸ್ ನೀಶಮ್ 50 ಲಕ್ಷಕ್ಕೆ ಕಿಂಗ್ಸ್ ಇಲೆವನ್ ಪಂಜಾಬ್ ಪಾಲು

06:36 PM (IST) Dec 19

ಆಸೀಸ್ ಆಲ್ ರೌಂಡರ್ 2 ಕೋಟಿ ಸೋಲ್ಡ್

ಆಸೀಸ್ ಆಲ್ರೌಂಡರ್ ಮಿಚೆಲ್ ಮಾರ್ಶ್ 2 ಕೋಟಿಗೆ ಸನ್ ರೈಸರ್ಸ್ ಪಾಲು

06:32 PM (IST) Dec 19

ಈ ಆಟಗಾರರು ಅನ್‌ಸೋಲ್ಡ್

ಮನೋಜ್ ತಿವಾರಿ, ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಇಂಗ್ರಾಮ್ ಅನ್ ಸೋಲ್ಡ್.
ಸೌರಭ್ ತಿವಾರಿ 50 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು.

06:29 PM (IST) Dec 19

ದಕ್ಷಿಣ ಆಫ್ರೀಕಾದ ಡೇವಿಡ್ ಮಿಲ್ಲರ್ ರಾಜಸ್ಥಾನ ರಾಯಲ್ಸ್ ಪಾಲು

ಡೇವಿಡ್ ಮಿಲ್ಲರ್ 75 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್ ಪಾಲು.

 

06:28 PM (IST) Dec 19

ಶಿಮ್ರೋನ್ ಹೆಟ್ಮೇಯರ್ ದಿಲ್ಲಿ ಪಾಲು

ವಿಂಡೀಸ್ ಎಡಗೈ ಬ್ಯಾಟ್ಸ್‌ಮನ್ ಶಿಮ್ರೋನ್ ಹೆಟ್ಮೇಯರ್ ಅವರನ್ನು ಖರೀದಿಸಲು ಕೋಲ್ಕತಾ ಹಾಗೂ ದಿಲ್ಲಿ ನಡುವೆ ಇತ್ತು ಪೈಪೋಟಿ.

50 ಲಕ್ಷ ಮೂಲ ಬೆಲೆ ಹೊಂದಿದ್ದ ಹೆಟ್ಮೇಯರ್ ಅವರನ್ನು 7.75 ಕೋಟಿ

06:08 PM (IST) Dec 19

ಮಾರ್ಗನ್ ಖರೀದಿಸಿದ ಬಳಿಕ ನಾಯಕನ ಹೆಸರು ಬಹಿರಂಗ ಪಡಿಸಿದ KKR!

ಕೋಲ್ಕತಾ ನೈಟ್ ರೈಡರ್ಸ್ ಆಟಗಾರರ ಖರೀದಿಯಲ್ಲಿ ಎಚ್ಚರಿಕೆ ವಹಿಸಿದೆ. ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್‌ಗೆ 5.25 ಕೋಟಿ ರೂಪಾಯಿ ಖರೀದಿಸಿದೆ. ವಿಶ್ವದ ಅತ್ಯುತ್ತಮ ನಾಯಕನ್ನು ಖರೀದಿಸಿದ ಕೆಕೆಆರ್, ಇದೀಗ 2020ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಆಟಗಾರನ ಹೆಸರನ್ನು ಬಹಿರಂಗ ಪಡಿಸಿದೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

06:07 PM (IST) Dec 19

14 ವರ್ಷದ ನೂರ್ ಅಹಮ್ಮದ್, ಸಾಯಿ ಕಿಶೋರ್ ಅನ್‌ಸೋಲ್ಡ್!

ಮೂಲಬೆಲೆ 30ಲಕ್ಷ ಹೊಂದಿದ್ದ 14 ವರ್ಷದ ಆಫ್ಘಾನಿಸ್ತಾನದ ಬೌಲರ್ ನೂರ್ ಅಹಮ್ಮದ್ ಮತ್ತು ಮೂಲಬೆಲೆ 20 ಲಕ್ಷ ಹೊಂದಿದ್ದ ಸಾಯಿ ಕಿಶೋರ್ ಅನ್ಸ್‌ಸೋಲ್ಡ್

06:04 PM (IST) Dec 19

ರವಿ ಬಿಷ್ಣೋಯಿ 1.80 ಕೋಟಿಗೆ ಪಂಜಾಬ್ ಪಾಲು!

20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ರವಿ ಬಿಷ್ಣೋಯಿ 1.80 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.

06:03 PM (IST) Dec 19

20 ಲಕ್ಷಕ್ಕೆ ಸ್ಪಿನ್ನರ್ ಸಿದ್ದಾರ್ಥ್ ಹರಾಜು!

ಸ್ಪಿನ್ನರ್ ಎಂ. ಸಿದ್ದಾರ್ಥ್ 20 ಲಕ್ಷಕ್ಕೆ ಕೆಕೆಆರ್ ಪಾಲಾಗಿದ್ದಾರೆ.

06:02 PM (IST) Dec 19

ಕೆ. ಸಿ. ಕರಿಯಪ್ಪ ಅನ್‌ಸೋಲ್ಡ್

ಮೂಲಬೆಬೆಲೆ 20 ಲಕ್ಷ ಹೊಂದಿದ್ದ ಬೌಲರ್ ಕೆ. ಸಿ. ಕರಿಯಪ್ಪ ಹರಾಜಾಗದೆ ಉಳಿದಿದ್ದಾರೆ.

06:00 PM (IST) Dec 19

ಬಂಗಾಳದ ವೇಗಿ ಇಶಾನ್ ಪೊರೆಲ್ 20 ಲಕ್ಷಕ್ಕೆ ಸೇಲ್!

ಪಶ್ಚಿಮ ಬಂಗಾಳದ ವೇಗಿ ಇಶಾನ್ ಪೊರೆಲ್ 20 ಲಕ್ಷಕ್ಕೆ ಪಂಜಾಬ್ ಪಾಲಾಗಿದ್ದಾರೆ

05:59 PM (IST) Dec 19

ಕಾರ್ತಿಕ್ ತ್ಯಾಗಿ 1.30 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲು!

20 ಲಕ್ಷ ಮೂಲಬೆಲೆ ಹೊಂದಿದ್ದ ಉತ್ತರ ಪ್ರದೇಶದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಅವರನ್ನು 1.30 ಕೋಟಿಗೆ ರಾಜಸ್ಥಾನ ರಾಯಲ್ಸ್ ಖರೀದಿಸಿದೆ

05:58 PM (IST) Dec 19

ಖೆಜ್ರೋಲಿಯಾ, ತುಷಾರ್ ಅನ್‌ಸೋಲ್ಡ್!

ಮೂಲಬೆಲೆ ತಲಾ 20 ಲಕ್ಷ ಹೊಂದಿದ್ದ ಬೌಲರ್ಸ್‌, RCB ಮಾಜಿ ವೇಗಿ ಕುಲ್ವಂತ್ ಖೆಜ್ರೋಲಿಯಾ ಹಾಗೂ ತುಷಾರ್ ದೇಶ್‌ಪಾಂಡೆ ಅನ್‌ಸೋಲ್ಡ್

05:55 PM (IST) Dec 19

ಆಕಾಶ್ ಸಿಂಗ್ ರಾಜಸ್ಥಾನ ಪಾಲು!

ಆಕಾಶ್ ಸಿಂಗ್ ಖರೀದಿಸಿದ ರಾಜಸ್ಥಾನ ರಾಯಲ್ಸ್. 20 ಲಕ್ಷಕ್ಕೆ ಆಕಾಶ್ ಖರೀದಿಸಿದ ರಾಜಸ್ಥಾನ ರಾಯಲ್ಸ್.

05:54 PM (IST) Dec 19

ವಿಷ್ಣು ವಿನೋದ್ ಅನ್‌ಸೋಲ್ಡ್!

ಮೂಲಬೆಲೆ 20 ಲಕ್ಷ ಹೊಂದಿದ್ದ ವಿಷ್ಣು ವಿನೋದ್ ಅನ್ ಸೋಲ್ಡ್ ಆಗಿದ್ದಾರೆ

05:53 PM (IST) Dec 19

ಅನುಜ್ ರಾವತ್ 80 ಲಕ್ಷಕ್ಕೆ ರಾಜಸ್ಥಾನ ಪಾಲು!

20 ಲಕ್ಷ ಮೂಲ ಬೆಲೆ ಹೊಂದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಅನುಜ್ ರಾವತ್ 80 ಲಕ್ಷಕ್ಕೆ ರಾಜಸ್ಥಾನ ರಾಯಲ್ಸ್ ಪಾಲು

05:51 PM (IST) Dec 19

ಮೂವರು ವಿಕೆಟ್‌ ಕೀಪರ್ಡ್ ಅನ್‌ಸೋಲ್ಡ್

ತಲಾ ಮೂಲಬೆಲೆ 20 ಲಕ್ಷ ಹೊಂದಿದ್ದ ವಿಕೆಟ್ ಕೀಪರ್ ಕೆ. ಎಸ್. ಭರತ್, ಪ್ರಭ್ ಸಿಮ್ರಾನ್ ಸಿಂಗ್ ಹಾಗೂ ಅಂಕುಶ್ ಬೈನ್ಸ್ ನ್‌ಸೋಲ್ಡ್

05:47 PM (IST) Dec 19

ಕನ್ನಡಿಗ ಪವನ್ ದೇಶಪಾಂಡೆ ಅನ್ ಸೋಲ್ಡ್

ಮೂಲ ಬೆಲೆ ತಲಾ 20 ಲಕ್ಷ ಹೊಂದಿದ್ದ ಆಲ್‌ರೌಂಡರ್, ಕನ್ನಡಿಗ ಪವನ್ ದೇಶಪಾಂಡೆ ಹಾಗೂ ಶಾರುಖ್ ಖಾನ್  ಅನ್ ಸೋಲ್ಡ್

05:45 PM (IST) Dec 19

2.40 ಕೋಟಿಗೆ ರಾಜಸ್ಥಾನ ಪಾಲಾದ ಮುಂಬೈ ಯುವ ಬ್ಯಾಟ್ಸ್‌ಮನ್!

17 ವರ್ಷದ ಮುಂಬೈ ಯುವ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಖರೀದಿಸಲು ಪಂಜಾಬ್ ಕೋಲ್ಕತಾ ನಡುವೆ ಪೈಪೋಟಿ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಜೈಸ್ವಾಲ್, ವಿಜಯ್ ಹಜಾರೆ ಟೂರ್ನಿಯಲ್ಲಿ ಡಬಲ್ ಸೆಂಚುರಿ ಬಾರಿಸಿದ್ದರು. ಇದೀಗ ರಾಜಸ್ತಾನ ರಾಯಲ್ಸ್ ತೆಕ್ಕೆಗೆ 2.40 ಕೋಟಿ 2.40 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ಜೈಸ್ವಾಲ್

05:41 PM (IST) Dec 19

ಸ್ಪಿನ್ನರ್ ವರುಣ್ ಚಕ್ರವರ್ತಿ 4 ಕೋಟಿಗೆ ಸೇಲ್!

30 ಲಕ್ಷ ಮೂಲ ಬೆಲೆ ಹೊಂದಿದ್ದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ 4 ಕೋಟಿಗೆ ಕೆಕೆಆರ್ ಪಾಲಾಗಿದ್ದಾರೆ.

05:40 PM (IST) Dec 19

ಪಂಜಾಬ್ ಪಾಲಾದ ದೀಪಕ್ ಹೂಡಾ!

50 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾದ ದೀಪಕ್ ಹೂಡಾ

05:38 PM (IST) Dec 19

ಭಾರತ ಅಂಡರ್ 19 ನಾಯಕ ಪ್ರಿಯಂ ಗರ್ಗ್ 1.9 ಕೋಟಿಗೆ ಸೇಲ್!

ಭಾರತ ಅಂಡರ್ 19 ನಾಯಕ ಪ್ರಿಯಂ ಗರ್ಗ್ ಅವರನ್ನು ಖರೀದಿಸಲು ಮುಗಿಬಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಸನ್ ರೈಸರ್ಸ್ ಹೈದರಾಬಾದ್. 20 ಲಕ್ಷ ಮೂಲ ಬೆಲೆ ಹೊಂದಿದ್ದ ಗರ್ಗ್ 1.9 ಕೋಟಿಗೆ ಸನ್ ರೈಸರ್ಸ್ ತೆಕ್ಕೆಗೆ

05:35 PM (IST) Dec 19

ವಿರಾಟ್ ಸಿಂಗ್ 1.90 ಲಕ್ಷಕ್ಕೆ ಸನ್ ರೈಸರ್ಸ್ ಪಾಲು

20 ಲಕ್ಷ ಮೂಲ ಬೆಲೆ ಹೊಂದಿದ್ದ ಬ್ಯಾಟ್ಸ್‌ಮನ್ ವಿರಾಟ್ ಸಿಂಗ್ 1.90 ಲಕ್ಷಕ್ಕೆ ಸನ್ ರೈಸರ್ಸ್ ಪಾಲಾಗಿದ್ದಾರೆ.

05:34 PM (IST) Dec 19

ರಾಹುಲ್ ತ್ರಿಪಾಟಿ 60 ಲಕ್ಷಕ್ಕೆ ಹರಾಜು!

ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಟಿ 60 ಲಕ್ಷಕ್ಕೆ ಕೆಕೆಆರ್ ಪಾಲು 

05:33 PM (IST) Dec 19

ಕನ್ನಡಿಗ ರೋಹನ್ ಕದಂ, ಭಾಟಿಯಾ, ಮಂಜೂತ್ ಕಾಲ್ರ ಅನ್‌ಸೋಲ್ಡ್!

ಮೂಲ ಬೆಲೆ 20 ಲಕ್ಷ ಹೊಂದಿದ್ದ ಮಂಜೂತ್ ಕಾಲ್ರ, 20ಲಕ್ಷ ಮೂಲಬೆಲೆ ಹೊಂದಿದ್ದ ಕನ್ನಡಿಗ ರೋಹನ್ ಕದಂ ಹಾಗೂ 20ಲಕ್ಷ ಮೂಲಬೆಲೆ ಹೊಂದಿದ್ದ ಹರ್ಪ್ರೀತ್ ಭಾಟಿಯಾ ಅನ್ ಸೋಲ್ಡ್

05:17 PM (IST) Dec 19

ಜಹೀರ್ ಖಾನ್ ಸೇರಿ ನಾಲ್ವರು ಅನ್‌ಸೋಲ್ಡ್!

75 ಲಕ್ಷ ಮೂಲ ಬೆಲೆ ಹೊಂದಿದ್ದ ಇಶ್ ಸೋದಿ, 1.50 ಕೋಟಿ ಮೂಲ ಬೆಲೆ ಹೊಂದಿದ್ದ ಆ್ಯಡಂ ಜಂಪಾ, ಹೇಡನ್ ವಾಲ್ಶ್ ಹಾಗೂ ಅಫ್ಘಾನಿಸ್ತಾನ ಆಟಗಾರ ಜಹೀರ್ ಖಾನ್ ಅನ್‌ಸೋಲ್ಡ್

05:15 PM (IST) Dec 19

6.75 ಕೋಟಿಗೆ ಪೀಯೂಶ್ ಚಾವ್ಲಾ ಚೆನ್ನೈ ತೆಕ್ಕೆಗೆ

ಒಂದು ಕೋಟಿ ಮೂಲ ಬೆಲೆ ಹೊಂದಿದ್ದ ಲೆಗ್ ಸ್ಪಿನ್ನರ್ ಪೀಯೂಶ್ ಚಾವ್ಲಾ ಖರೀದಿಸಲು ಚೆನ್ನೈ ಹಾಗೂ ಪಂಜಾಬ್ ನಡುವೆ ಜಿದ್ದಾಜಿದ್ದಿನ ಪೈಪೋಟಿ. 6.75 ಕೋಟಿ ನೀಡಿ ಕೊನೆಗೂ ತನ್ನ ತೆಕ್ಕೆಗೆ ಸೆಳೆಯುವಲ್ಲಿ ಚೆನ್ನೈ ಯಶಸ್ವಿ

05:13 PM (IST) Dec 19

ಉತ್ತಪ್ಪ ಬಳಿಕ 2ನೇ ಭಾರತೀಯ ಕ್ರಿಕೆಟಿಗ ಸೇಲ್!

ಐಪಿಎಲ್ ಆಟಗಾರರ ಹರಾಜಿನಲ್ಲಿ ವಿದೇಶಿ ಆಟಗಾರರಿಗೆ ಭಾರೀ ಬೇಡಿಕೆ ಬರುತ್ತಿದೆ. ಇದುವರೆಗಿನ ಬಿಡ್ಡಿಂಗ್‌ನಲ್ಲಿ ಕೇವಲ ಇಬ್ಬರು ಭಾರತೀಯರು ಸೇಲಾಗಿದ್ದಾರೆ. ರಾಬಿನ್ ಉತ್ತಪ್ಪ ಬಳಿಕ ಬಿಕರಿಯಾದ ಭಾರತೀಯ ಕ್ರಿಕೆಟಿಗ ವೇಗಿ ಜಯದೇವ್ ಉನಾದ್ಕಟ್. ರಾಜಸ್ಥಾನ ರಾಯಲ್ಸ್ 3 ಕೋಟಿ ರೂಪಾಯಿ ನೀಡಿ ಉನಾದ್ಕಟ್ ಖರೀದಿಸಿತು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

05:11 PM (IST) Dec 19

8.50 ಕೋಟಿಗೆ ಪಂಜಾಬ್ ಪಾಲಾದ ಕಾಟ್ರೆಲ್

50 ಲಕ್ಷ ಮೂಲ ಬೆಲೆ ಹೊಂದಿದ್ದ ವಿಂಡೀಸ್ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್ ಖರೀದಿಸಲು ಪಂಜಾಬ್ ಹಾಗೂ ಡೆಲ್ಲಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ 8.50 ಕೋಟಿಗೆ ಪಂಜಾಬ್ ಪಾಲಾದ ಕಾಟ್ರೆಲ್.

05:09 PM (IST) Dec 19

ಹರಾಜಾಗದ ಟಿಮ್ ಸೌಥಿ!

1 ಕೋಟಿ ಮೂಲಬೆಲೆ ಹೊಂದಿದ್ದ ಟಿಮ್ ಸೌಥಿ ಹರಾಜಾಗದೆ ಉಳಿದಿದ್ದಾರೆ.

05:08 PM (IST) Dec 19

8 ಕೋಟಿಗೆ ಮುಂಬೈ ಪಾಲಾದ ಕೌಲ್ಟರ್ ನೀಲ್

ನೇಥನ್ ಕೌಲ್ಟರ್ ನೀಲ್ ಖರೀದಿಸಲು ಮುಂಬೈ ಹಾಗೂ ಚೆನ್ನೈ ನಡುವೆ ಪೈಪೋಟಿ. ಕೊನೆಗೂ 8 ಕೋಟಿಗೆ ಮುಂಬೈ ಪಾಲಾದ ಕೌಲ್ಟರ್ ನೀಲ್.

05:05 PM (IST) Dec 19

ಹರಾಜಾಗದ ಆ್ಯಂಡ್ರೋ ಟೈ!

ಮೂಲಬೆಲೆ 1 ಕೋಟಿ ಹೊಂದಿದ್ದ ಆ್ಯಂಡ್ರೋ ಟೈ ಹರಾಜಾಗದೆ ಉಳಿದಿದ್ದಾರೆ. ಮುಂದಿನ ಹಂತದಲ್ಲಿ ಹರಾಜಾಗ್ತಾರಾ ಕಾದು ನೋಡ್ಬೇಕು

05:03 PM (IST) Dec 19

1 ಕೋಟಿ ಬೆಲೆ ಹೊಂದಿದ್ದ ಉನಾದ್ಕತ್ 3 ಕೋಟಿಗೆ ಸೇಲ್!

ಒಂದು ಕೋಟಿ ಮೂಲ ಬೆಲೆ ಹೊಂದಿದ್ದ ಉನಾದ್ಕತ್ ಖರೀದಿಸಲು ಡೆಲ್ಲಿ, ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಪೈಪೋಟಿ ಏರ್ಪಟ್ಟಿತ್ತು.ಕೊನೆಗೂ ಉನಾದ್ಕತ್ 3 ಕೋಟಿಗೆ ರಾಜಸ್ಥಾನ ಪಾಲಾಗಿದ್ದಾರೆ.

05:00 PM (IST) Dec 19

RCBಗೆ ಶಾಕ್ ನೀಡಿ ಅಲೆಕ್ಸ್ ಕ್ಯಾರಿ ಖರೀದಿಸಿದ ಡೆಲ್ಲಿ

ಐಪಿಎಲ್ ಆಟಗಾರರ ಹರಾಜು ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ ನಡೆಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ 2.4 ಕೋಟಿ ರೂಪಾಯಿ ನೀಡಿ ಕ್ಯಾರಿ ಖರೀದಿಸುವಲ್ಲಿ ಯಶಸ್ವಿಯಾಯಿತು

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ