13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿಂದು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಫೀಲ್ಡಿಂಗ್ ಅಯ್ದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದುಬೈ(ಅ.31): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 51ನೇ ಪಂದ್ಯದಲ್ಲಿಂದು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಕಿರಾನ್ ಪೊಲ್ಲಾರ್ಡ್ ಫೀಲ್ಡಿಂಗ್ ಆಯ್ದುಕೊಂಡಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಜೇಮ್ಸ್ ಪ್ಯಾಟಿನ್‌ಸನ್ ಬದಲಿಗೆ ಜಯಂತ್ ಯಾದವ್ ಹಾಗೂ ನೇಥನ್ ಕೌಲ್ಟರ್ ನೀಲ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕರ್ನಾಟಕದ ಲೆಗ್‌ಸ್ಪಿನ್ನರ್ ಪ್ರವೀಣ್ ದುಬೈ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಪೃಥ್ವಿ ಶಾ ಹಾಗೂ ಹರ್ಷಲ್ ಪಟೇಲ್ ತಂಡ ಕೂಡಿಕೊಂಡಿದ್ದಾರೆ
Match 51. Mumbai Indians win the toss and elect to field https://t.co/4ccAy22BB4
— IndianPremierLeague (@IPL)undefined
ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ 16 ಅಂಕಗಳೊಂದಿಗೆ ತನ್ನ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಸತತ ಮೂರು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಶ್ರೇಯಸ್ ಅಯ್ಯರ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಇನ್ನುಳಿದ 2 ಪಂದ್ಯಗಳ ಪೈಕಿ ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ತಂಡಗಳು ಹೀಗಿವೆ:
ಮುಂಬೈ ಇಂಡಿಯನ್ಸ್
Match 51. Mumbai Indians XI: Q de Kock, I Kishan, S Yadav, S Tiwary, J Yadav, K Pollard, K Pandya, N Coulter-Nile, R Chahar, T Boult, J Bumrah https://t.co/4ccAy22BB4
— IndianPremierLeague (@IPL)ಡೆಲ್ಲಿ ಕ್ಯಾಪಿಟಲ್ಸ್
Match 51. Delhi Capitals XI: P Shaw, S Dhawan, S Iyer, R Pant, S Hetmyer, M Stoinis, P Dubey, H Patel, K Rabada, R Ashwin, A Nortje https://t.co/4ccAy22BB4
— IndianPremierLeague (@IPL)