13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ ಎಲ್ ರಾಹುಲ್ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಬುಧಾಬಿ(ಅ.31): ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ಈ ಆವೃತ್ತಿಯ ಐಪಿಎಲ್‌ನಲ್ಲಿ 600 ರನ್ ಪೂರೈಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ತಲುಪಿದರು.
13 ಪಂದ್ಯಗಳಲ್ಲಿ ಪಂಜಾಬ್ ನಾಯಕ ಕೆ. ಎಲ್. ರಾಹುಲ್ 58.27ರ ಸರಾಸರಿಯಲ್ಲಿ 641 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳು ಸೇರಿದ್ದು, ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 600 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ರಾಹುಲ್ ಪಾತ್ರರಾಗಿದ್ದಾರೆ.
undefined
ರಾಜಸ್ಥಾನ್ ವಿರುದ್ಧ ಹೊಸ ದಾಖಲೆ ಬರೆದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!
2018ರ ಐಪಿಎಲ್‌ನಲ್ಲಿ 659 ರನ್ ದಾಖಲಿಸಿದ್ದ ರಾಹುಲ್, 2019ರ ಆವೃತ್ತಿಯಲ್ಲಿ 593 ರನ್ ಗಳಿಸಿದ್ದರು. ಐಪಿಎಲ್‌ನಲ್ಲಿ 2 ಬಾರಿ 600ಕ್ಕೂ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ರಾಹುಲ್. ಕೊಹ್ಲಿ ಈ ಮೊದಲು 2013 ಹಾಗೂ 2016ರಲ್ಲಿ 600+ ರನ್ ಬಾರಿಸಿದ ಸಾಧನೆ ಮಾಡಿದ್ದರು. 2013ರಲ್ಲಿ ಆರ್‌ಸಿಬಿ ತಂಡದ ನಾಯಕನಾಗುತ್ತಿದ್ದಂತೆ ಕೊಹ್ಲಿ 634 ರನ್ ಬಾರಿಸಿದ್ದರು, ಇನ್ನು 2016ರಲ್ಲಿ ಕೊಹ್ಲಿ 4 ಶತಕ ಸಹಿತ 81.08ರ ಸರಾಸರಿಯಲ್ಲಿ 973 ರನ್ ಚಚ್ಚಿದ್ದರು.