ಸನ್‌ರೈಸರ್ಸ್-ಕೆಕೆಆರ್‌ಗೆ ಹ್ಯಾಟ್ರಿಕ್ ಸೋಲಿನ ಭೀತಿ..!

By Kannadaprabha News  |  First Published Oct 18, 2020, 8:54 AM IST

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸೂಪರ್ ಸಂಡೇಯ 35ನೇ ಪಂದ್ಯದಲ್ಲಿಂದು ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಅಬುಧಾಬಿ(ಅ.18): ಕೋಲ್ಕತ ನೈಟ್‌ ರೈಡರ್ಸ್ ಶುಕ್ರವಾರ ತನ್ನ ನಾಯಕನನ್ನು ದಿಢೀರನೇ ಬದಲಾಯಿಸಿದರೂ, ತಂಡದ ಅದೃಷ್ಟವೇನೂ ಬದಲಾಗಲಿಲ್ಲ. ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲಿ ಸೋಲು ಕಂಡ ಇಯಾನ್ ಮಾರ್ಗನ್, ಭಾನುವಾರ ಇಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಡಲು ಎದುರು ನೋಡುತ್ತಿದ್ದಾರೆ.

"

Tap to resize

Latest Videos

undefined

ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳೆರಡು ಈ ಹಿಂದಿನ 2 ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದು, ಇದೀಗ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿಯೇ ಕಣಕ್ಕಿಳಿಯಲು ಸಜ್ಜಾಗಿವೆ. ಕೆಕೆಆರ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲು ಕಂಡಿದ್ದು, ಇದೀಗ ಜಯದ ಹಳಿಗೆ ಮರಳಲು ತುದಿಗಾಲಿನಲ್ಲಿ ನಿಂತಿದೆ.

ಈ ಕಾರಣಕ್ಕೆ ಬ್ರಾವೋ ಕೊನೆ ಓವರ್ ಎಸೆಯಲಿಲ್ಲ!

ಕೆಕೆಆರ್ ಪರ ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಹಾಗೂ ರಸೆಲ್ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಬೇಕಾಗಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಅಗ್ರಕ್ರಮಾಂಕದ ಜತೆಜತೆಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಬೇಕಾಗಿದೆ.

ಸ್ಥಳ: ಅಬುಧಾಬಿ
ಸಮಯ: ಮಧ್ಯಾಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

click me!