ಈ ಬಾರಿಯ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಲು ಯುಎಇ ಸಜ್ಜಾಗಿದೆ. ಇದರ ಬೆನ್ನಲ್ಲೇ ಮೈದಾನದೊಳಗೆ ಪ್ರೇಕ್ಷಕರನ್ನು ಬಿಡಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.01): ಸಾಕಷ್ಟು ಹಂಗಾಮಗಳ ಬಳಿಕ ಕೊನೆಗೂ ಐಪಿಎಲ್ ಆಯೋಜನೆ ಪಕ್ಕಾ ಆಗಿದೆ. ಆದರೆ ಕೊರೋನಾ ಆತಂಕದಿಂದ ಐಪಿಎಲ್ ಖಾಲಿ ಮೈದಾನದಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವುದು ಅಷ್ಟೊಂದು ಜೋಶ್ ಇರುವುದಿಲ್ಲ ಎಂದು ಈ ಹಿಂದೆಯೇ ಕೆಲ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಶೇ.30ರಿಂದ 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಪ್ರವೇಶ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಯುಎಇ ಕ್ರಿಕೆಟ್ ಮಂಡಳಿ ತಿಳಿಸಿದೆ. ಎಮಿರಾಟ್ಸ್ ಕ್ರಿಕೆಟ್ ಬೋರ್ಡ್ ಜನರಲ್ ಸೆಕ್ರೇಟರಿ ಮುಬಶೀರ್ ಉಸ್ಮಾನಿ, ಯುಎಇ ಸರ್ಕಾರ ಅನುಮತಿ ನೀಡಿದರೆ ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.
undefined
ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!
ಸದ್ಯ ಯುಎಇನಲ್ಲಿ ಕೇವಲ 6200 ಕೊರೋನಾ ಪ್ರಕರಣಗಳು ಇದ್ದು, ಐಪಿಎಲ್ ಆರಂಭದ ವೇಳೆಗೆ ಮತ್ತಷ್ಟು ಕಡಿಮೆಯಾಗುವ ವಿಶ್ವಾಸವನ್ನು ಉಸ್ಮಾನಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2014ರಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದರಿಂದ ಐಪಿಎಲ್ ಟೂರ್ನಿಯ ಮೊದಲ 20 ಪಂದ್ಯಗಳಿಗೆ ಯುಎಇ ಆತಿಥ್ಯವನ್ನು ವಹಿಸಿತ್ತು.
ಐಪಿಎಲ್‌ಗೂ ಮುನ್ನ ಆಟಗಾರರಿಗೆ 4 ಬಾರಿ ಕೋವಿಡ್ ಟೆಸ್ಟ್:
ಯುಎಇನಲ್ಲಿ ಈ ವರ್ಷದ ಐಪಿಎಲ್ ಟೂರ್ನಿ ನಡೆಸಲು ಸಿದ್ಧತೆ ಆರಂಭಿಸಿರುವ ಬಿಸಿಸಿಐ, ಭಾನುವಾರ ಸಭೆ ನಡೆಸಲಿದ್ದು ಫ್ರಾಂಚೈಸಿಗಳಿಗೆ ಮಾರ್ಗಸೂಚಿಯನ್ನು ನೀಡಲಿದೆ. ಮಾರ್ಗಸೂಚಿಯಲ್ಲಿರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಬಿಸಿಸಿಐ ಮೂಲಗಳು, ಮಾಧ್ಯಮಗಳಿಗೆ ತಿಳಿಸಿವೆ.
ಆ ಪೈಕಿ, ಪ್ರತಿ ಆಟಗಾರರಿಗೆ ಟೂರ್ನಿ ಆರಂಭಕ್ಕೂ ಮುನ್ನ 4 ಬಾರಿ ಕೋವಿಡ್ ಪರೀಕ್ಷೆ ನಡೆಸುವುದು ಪ್ರಮುಖ ಅಂಶವಾಗಿದೆ. ಭಾರತದಿಂದ ಹೊರಡುವ ಮುನ್ನ 2 ಬಾರಿ, ಯುಎಇನಲ್ಲಿ ಕ್ವಾರಂಟೈನ್ ಮುಕ್ತಾಯಗೊಂಡ ಬಳಿಕ 2 ಬಾರಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದೇ ವೇಳೆ ಆಟಗಾರರ ಪತ್ನಿ, ಪ್ರೇಯಸಿಯರನ್ನು ಯುಎಇಗೆ ಕರೆದೊಯ್ಯುವ ನಿರ್ಧಾರವನ್ನು ಫ್ರಾಂಚೈಸಿಗಳಿಗೆ ಬಿಡಲು ಬಿಸಿಸಿಐ ತೀರ್ಮಾನಿಸಿದೆ.