ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ!

By Suvarna News  |  First Published Mar 5, 2020, 9:41 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಸುದೀರ್ಘ ವಿಶ್ರಾಂತಿ ಬಳಿಕ ಮತ್ತೆ ಮೈದಾನಕ್ಕಿಳಿದಿದ್ದಾರೆ. ಧೋನಿ ಆಟ ನೋಡಲು ಕಾತರಗೊಂಡಿರುವ ಅಭಿಮಾನಿಗಳು ಇದೀಗ ಅಭ್ಯಾಸಕ್ಕೂ ಹಾಜರಾಗುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ನೋಡು ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿದೆ. ಈ ವೇಳೆ ಅಭಿಮಾನಿಯೊಬ್ಬ ಬ್ಯಾರಿಕೇಡ್ ಹಾರಿ ಧೋನಿ ಕೈಕುಲುಕುವ ಪ್ರಯತ್ನ ಮಾಡಿದ್ದಾನೆ.


ಚೆನ್ನೈ(ಮಾ.05): ಐಪಿಎಲ್ ಟೂರ್ನಿಗೆ ತಂಡಗಳು ಅಭ್ಯಾಸ ಆರಂಭಿಸಿವೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಎಂ.ಎಸ್.ಧೋನಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಸರಿಸುಮಾರು 6 ತಿಂಗಳಿನಿಂದ ಮೈದಾನದಲ್ಲಿ ಕಾಣಿಸಿಕೊಳ್ಳದ ಧೋನಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಇದನ್ನೂ ಓದಿ: 8 ಐಪಿಎಲ್ ತಂಡದ ಬ್ರ್ಯಾಂಡ್ ವ್ಯಾಲ್ಯೂ, RCB, CSKಗೆ ಇಲ್ಲ ಅಗ್ರಸ್ಥಾನ!

Tap to resize

Latest Videos

ಚೆನ್ನೈನ ಚಿಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಅಭ್ಯಾಸ ನಡೆಸುತ್ತಿದೆ. ಧೋನಿ ಅಭ್ಯಾಸ ವೀಕ್ಷಿಸಲು ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕ್ರೀಡಾಂಗಣವೇ ಅಭಿಮಾನಿಗಳಿಂದ ಭರ್ತಿಯಾಗುತ್ತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಭಿಮಾನಿಯೊರ್ವ ಬ್ಯಾರಿಕೇಡ್ ಹಾರಿದ್ದಾನೆ.

ಇದನ್ನೂ ಓದಿ: ಚೆನ್ನೈಯಲ್ಲಿ ಈಗಲೇ ಶುರುವಾಗಿದೆ IPL, ಅಭಿಮಾನಿಗಳು ಫುಲ್ ಖುಷ್!.

ಧೋನಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅಭಿಮಾನಿ  ಕ್ರೀಡಾಂಗಣ ಪ್ರವೇಶಿಸಿ ಧೋನಿಯತ್ತ ಮುನ್ನಗ್ಗಿದ್ದಾನೆ. ಬಳಿಕ ಧೋನಿಯ ಕೈಕುಲುಕುವು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಭದ್ರತಾ ಸಿಬ್ಬಂದಿ ಬಂದು ಅಭಿಮಾನಿಯನ್ನು ಹೊರಕ್ಕೆ ಕಳುಹಿಸಿದರು. 

 

Here is Video and Credits to whoever captured it :) !! pic.twitter.com/q1P8OyhJ7o

— ∆ (@Helicoptershott)

ಸಿಎಸ್‌ಕೆ ಅಭ್ಯಾಸ ಶಿಬಿರದಲ್ಲಿ ಧೋನಿ ಸೇರಿದಂತೆ ಸುರೇಶ್ ರೈನಾ, ಅಂಬಾಟಿ ರಾಯುಡು ಹಾಗೂ ಹಲವು ಯುವ ಕ್ರಿಕೆಟಿಗರು ಪಾಲ್ಗೊಂಡಿದ್ದಾರೆ. ಮಾರ್ಚ್ 29 ರಿಂದ 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭವಾಗಲಿದೆ.
 

click me!