
ಚೆನ್ನೈ(ಮಾ.09): ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ವೀಕ್ಷಿಸಲು ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿಶೇಷವಾಗಿ ಎಂ.ಎಸ್.ಧೋನಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ತಲೆನೋವಾಗಿದೆ. ಇತ್ತ ತಮಿಳುನಾಡು ಸರ್ಕಾರ ಅಭಿಮಾನಿಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ.
ಇದನ್ನೂ ಓದಿ: 6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!
ನಿರ್ಬಂಧ ನಿರ್ಧಾರಕ್ಕೆ ಅಭಿಮಾನಿಗಳು ಹೆಚ್ಚುತ್ತಿರುವುದು ಕಾರಣವಲ್ಲ. ಬದಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸರ್ಕಾರದ ಅಂತಿಮ ನಿರ್ಧಾರಕ್ಕೆ ಕಾಯುತ್ತಿದೆ. ವೈರಸ್ ಹರಡದಂತೆ ಮನ್ನಚ್ಚರಿಕಾ ಕ್ರಮವಾಗಿ ಅಭಿಮಾನಿಗಳಿಗೆ ನಿರ್ಬಂಧ ಹೇರುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲೇ ಸರ್ಕಾರ, ಸಿಎಸ್‌ಕೆ ತಂಡದ ಜೊತೆ ಮಾತುಕತೆ ನಡೆಸಲಿದೆ.
ಧೋನಿ ಅಭ್ಯಾಸ ನೋಡಲು ಕ್ರೀಡಾಂಗಣ ಫುಲ್, ಬ್ಯಾರಿಕೇಡ್ ಹಾರಿದ ಅಭಿಮಾನಿ
ಸಿಎಸ್‌ಕೆ ಆಟಗಾರರಿಗೆ ಮ್ಯಾನೇಜ್ಮೆಂಟ್ ಖಡಕ್ ಸೂಚನೆ ನೀಡಿದೆ. ಅಭಿಮಾನಿಗಳ ಜೊತೆ ಕೈಕುಲುವ, ಸೆಲ್ಫಿ ಸೇರಿದಂತೆ ಯಾವುದೇ ಆತ್ಮೀಯತೆ ಉತ್ತಮವಲ್ಲ ಎಂದಿದೆ. ಇನ್ನು ಆಟಗಾರರು ತಂಗುವ ಹೊಟೆಲ್‌ಗಳಲ್ಲೂ ಎಚ್ಚರಿಕೆ ವಹಿಸಲಾಗಿದೆ. ಮಾರ್ಚ್ 29 ರಿಂದ 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭವಾಗಲಿದೆ.
News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.