IPL ಟೂರ್ನಿಗಾಗಿ ಕ್ರಿಸ್‌ ಗೇಲ್‌ಗೆ 2 ಬಾರಿ ಕೊರೋನಾ ಟೆಸ್ಟ್: ವರದಿ ಪ್ರಕಟ!

Published : Aug 25, 2020, 03:36 PM IST
IPL ಟೂರ್ನಿಗಾಗಿ ಕ್ರಿಸ್‌ ಗೇಲ್‌ಗೆ 2 ಬಾರಿ ಕೊರೋನಾ ಟೆಸ್ಟ್:  ವರದಿ ಪ್ರಕಟ!

ಸಾರಾಂಶ

ಸ್ಪೀಡ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ಉಸೇನ್ ಬೋಲ್ಟ್ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡ ಬಳಿಕ ಆತಂಕದಲ್ಲಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಆತಂಕದಲ್ಲೇ ದಿನದೂಡಿದ್ದಾರೆ. ಬೋಲ್ಟ್‌ಗೆ ಕೊರೋನಾ ವೈರಸ್ ಖಚಿತವಾದ ಕಾರಣ ಗೇಲ್ ಆತಂಕ ಹೆಚ್ಚಾಗಿತ್ತು. ಹೀಗಾಗಿ ಪಾರ್ಟಿ ಬಳಿಕ ಕ್ರಿಸ್‌ಗೇಲ್‍‌ಗೆ 2 ಬಾರಿ ಕೊರೋನಾ ಟೆಸ್ಟ್ ಮಾಡಲಾಗಿದೆ. ಇದೀಗ ಈ ವರದಿ ಬಂದಿದೆ.

ಜಮೈಕಾ(ಆ.25):  IPL ಟೂರ್ನಿಗಾಗಿ 8 ಫ್ರಾಂಚೈಸಿಗಳು ದುಬೈನಲ್ಲಿ ಬೀಡುಬಿಟ್ಟಿದೆ. ಭಾರತೀಯ ಕ್ರಿಕೆಟಿಗರು ಈಗಾಗಲೇ ದುಬೈಗೆ ತೆರಳಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇತ್ತ ವಿದೇಶಿ ಕ್ರಿಕೆಟಿಗರೂ ಕೂಡ ದುಬೈನತ್ತ ಮುಖ ಮಾಡಿದ್ದಾರೆ. ಆದರೆ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳೋ ಮೂಲಕ ಪ್ರತಿ ಕ್ರಿಕೆಟಿಗರು ಕೊರೋನಾ ಪರೀಕ್ಷೆ ಮಾಡಬೇಕಿದೆ. ನೆಗಟೀವ್ ವರದಿ ಇದ್ದರೆ ಮಾತ್ರ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳಲು ಅವಕಾಶವಿದೆ. ನೆಗಟೀವ್ ವರದಿಯೊಂದಿಗೆ ಐಪಿಎಲ್ ಟೂರ್ನಿಗಾಗಿ ಕಾಯುತ್ತಿದ್ದ ವಿಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಮತ್ತೆ ಎರಡು ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!.

ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ 34ನೇ ಹುಟ್ಟು ಹಬ್ಬ ಪಾರ್ಟಿಯಲ್ಲಿ ಕ್ರಿಸ್ ಗೇಲ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಪಾರ್ಟಿ ಮರುದಿನ ಉಸೇನ್ ಬೋಲ್ಟ್ ಕೊರೋನಾ ವರದಿ ಪ್ರಕಟಗೊಂಡಿದ್ದು, ನೆಗಟೀವ್ ಎಂಬ ರಿಪೋರ್ಟ್ ಬಂದಿದೆ. ಹೀಗಾಗಿ ಗೇಲ್ ಸೇರಿದಂತೆ ಪಾರ್ಟಿಯಲ್ಲಿ ಪಾಲ್ಗೊಂಡ ಸೆಲೆಬ್ರೆಟಿಗಳಲ್ಲಿ ಆತಂಕ ಮನೆ ಮಾಡಿತ್ತು. ಹೀಗಾಗಿ ಪಾರ್ಟಿ ಬಳಿಕ 2 ಬಾರಿ ಕ್ರಿಸ್ ಗೇಲ್ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿದ್ದಾರೆ. ಇದೀಗ ಎರಡೂ ಪರೀಕ್ಷೆಯಲ್ಲಿ ನೆಗಟೀವ್ ಎಂದು ರಿಪೋರ್ಟ್ ಬಂದಿದೆ.

ಟೀಂ ಇಂಡಿಯಾ ಸ್ಪಿನ್ನರ್ ಚಹಲ್‌ರನ್ನು ಹೀನಾಯವಾಗಿ ಟ್ರೋಲ್‌ ಮಾಡಿದ ಗೇಲ್

ಐಪಿಎಲ್ ಟೂರ್ನಿಗಾಗಿ ದುಬೈಗೆ ತೆರಳುವ ಕ್ರಿಕೆಟಿಗರು 2 ನೆಗಟೀವ್ ಕೊರೋನಾ ವರದಿ ಇರಬೇಕು. ಹೀಗಾಗಿ ಕ್ರಿಸ್ ಗೇಲ್ ಬರ್ತ್‌ಡೇ ಪಾರ್ಟಿ ಬಳಿಕ 2 ಬಾರಿ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಇದೀಗ ನೆಗಟೀವ್ ವರದಿ ಹಿಡಿದು ದುಬೈಗೆ ಬಂದಿಳಿದಿದ್ದಾರೆ. 

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಆಗಿರುವ ಕ್ರಿಸ್ ಗೇಲ್, ಭರ್ಜರಿ ಸಿಕ್ಸರ್‌ಗಳಿಂದಲೇ ಮನೆಮಾತಾಗಿದ್ದಾರೆ. ಸದ್ಯ ಕೊರೋನಾ ಭಯದಿಂದ ಮುದುಡಿರುವ ಜನತೆಗೆ ಗೇಲ್ ಸಿಕ್ಸರ್ ಅಬ್ಬರ  ಹೊಸ ಚೈತನ್ಯ ನೀಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಆಯೋಜಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; ಅಭಿಮಾನಿಗಳು ಹೇಳಿದ್ದೇನು?
ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್‌ ಕೊಟ್ಟ ಬೆಂಗಳೂರು ಫ್ರಾಂಚೈಸಿ