
ನವದೆಹಲಿ(ಆ.25): ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಬೌಲರ್ ನೋಬಾಲ್ ಎಸೆದಾಗ ಬ್ಯಾಟ್ಸ್‌ಮನ್‌ಗಳಿಗೆ ಫ್ರೀ ಹಿಟ್ ಸಿಗುವಂತೆ, ಬೌಲರ್‌ಗಳಿಗೂ ಅನುಕೂಲವಾಗುವಂತಹ ನಿಯಮವನ್ನು ಜಾರಿ ಮಾಡಬೇಕು ಎಂದು ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ
ಫ್ರೀ ಹಿಟ್‌ನಂತೆ ‘ಫ್ರೀ ಬಾಲ್’ ನಿಯಮ ಅಳವಡಿಕೆಗೆ ರವಿಚಂದ್ರನ್ ಅಶ್ವಿನ್ ಸಲಹೆ ನೀಡಿದ್ದಾರೆ. ಈ ನಿಯಮದ ಪ್ರಕಾರ, ಚೆಂಡನ್ನು ಎಸೆಯುವ ಮೊದಲೇ ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್ ತೊರೆದರೆ ಅಂಪೈರ್ ಫ್ರೀ ಬಾಲ್ ಘೋಷಿಸಬೇಕು. ಫ್ರೀ ಬಾಲ್‌ನಲ್ಲಿ ಬೌಲರ್ ವಿಕೆಟ್ ಕಿತ್ತರೆ, ಬ್ಯಾಟಿಂಗ್ ತಂಡದ 5 ರನ್ ಕಡಿತಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
IPL ಸಂಪೂರ್ಣ ವೇಳಾಪಟ್ಟಿ ಪ್ರಕಟ ಯಾವಾಗ..? ಬ್ರಿಜೇಶ್ ಪಟೇಲ್ ಕೊಟ್ರು ಸುಳಿವು
ಅಶ್ವಿನ್ ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಮಂಕಡಿಂಗ್ ಮಾಡಲು ಆಸ್ಪದವಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅಶ್ವಿನ್ ಫ್ರೀ ಬಾಲ್ ಕಾನ್ಸೆಪ್ಟ್ ಪರಿಚಯದ ಮಾತುಗಳನ್ನಾಡಿದ್ದಾರೆ. ಅಶ್ವಿನ್‌ರ ಸಲಹೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.