ಮಂಕಡಿಂಗ್: ಇದೇ ಮೊದಲು ಇದೇ ಕೊನೆ ಎಂದು ಖಡಕ್ ವಾರ್ನಿಂಗ್ ಕೊಟ್ಟ ಅಶ್ವಿನ್

By Suvarna NewsFirst Published Oct 7, 2020, 3:07 PM IST
Highlights

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಉಳಿದ ತಂಡಗಳ ಬ್ಯಾಟ್ಸ್‌ಮನ್‌ಗಳಿಗೆ ಮಂಕಡಿಂಗ್ ವಿಚಾರವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಅ.07): ನಾನ್‌ ಸ್ಟ್ರೈಕ್‌ನಲ್ಲಿ​ರುವ ಬ್ಯಾಟ್ಸ್‌ಮನ್‌ಗಳು ಬೌಲ್‌ ಮಾಡುವ ಮೊದಲೇ ಕ್ರೀಸ್‌ ಬಿಡ​ದಂತೆ ಡೆಲ್ಲಿ ಕ್ಯಾಪಿ​ಟಲ್ಸ್‌ ಸ್ಪಿನ್ನರ್‌ ರವಿಚಂದ್ರನ್ ಅ​ಶ್ವಿನ್‌ ಮತ್ತೊಮ್ಮೆ ಎಚ್ಚ​ರಿ​ಸಿ​ದ್ದಾರೆ. 

"

ಸೋಮ​ವಾರ ಆರ್‌ಸಿಬಿ ವಿರು​ದ್ಧದ ಪಂದ್ಯ​ದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೋನ್‌ ಫಿಂಚ್‌ ಮುಂಚಿತವಾಗಿಯೇ ಕ್ರೀಸ್‌ ಬಿಟ್ಟಾಗ ಅಶ್ವಿನ್‌, ಮಂಕ​ಡಿಂಗ್‌ ಮೂಲಕ ರನೌಟ್‌ ಮಾಡ​ಲಿಲ್ಲ. ಪಂದ್ಯದ ಬಳಿಕ ಅಶ್ವಿನ್‌, ‘ಇದು ಮೊದಲ ಹಾಗೂ ಕೊನೆ ಎಚ್ಚ​ರಿಕೆ. ಆನಂತರ ನನ್ನನ್ನು ದೂರಬೇಡಿ’ ಎಂದು ಟ್ವೀಟ್‌ ಮಾಡಿ​ದ್ದಾರೆ. ಅಶ್ವಿನ್‌ರ ಈ ಟ್ವೀಟ್‌ ವೈರಲ್‌ ಆಗಿದೆ.

IPL 2020: ಡೆಲ್ಲಿ ದಾಳಿಗೆ ತತ್ತರಿಸಿದ RCB,ಕೊಹ್ಲಿ ಪಡೆಗೆ ಸೋಲಿನ ಶಾಕ್!

Let’s make it clear !! First and final warning for 2020. I am making it official and don’t blame me later on. and I are good buddies btw.😂😂

— Ashwin 🇮🇳 (@ashwinravi99)

ಕಳೆದ ವರ್ಷ ನಡೆದ ಐಪಿಎಲ್ ಟೂರ್ನಿಯ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್‌ ಬಟ್ಲರ್ ಅವರನ್ನು ಆರ್. ಅಶ್ವಿನ್ ಮಂಕಡ್‌ ರನೌಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಂಡ ಬಳಿಕ ತಂಡದ ಕೋಚ್ ರಿಕಿ ಪಾಂಟಿಂಗ್ ಹಾಗೂ ಸ್ಪಿನ್ನರ್ ಅಶ್ವಿನ್ ನಡುವೆ ಈ ಬಗ್ಗೆ ಚರ್ಚೆಯೂ ನಡೆದಿತ್ತು. ಈ ವೇಳೆ ಪಾಂಟಿಂಗ್, ಮಂಕಡಿಂಗ್ ಮಾಡದಂತೆ ಅಶ್ವಿನ್‌ಗೆ ತಿಳಿ ಹೇಳಿದ್ದರು.
 

click me!