ಗಾಯದ ಸಮಸ್ಯೆಯಿಂದ ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದಿರುವ ಭುವನೇಶ್ವರ್ ಕುಮಾರ್ ಅವರ ಸ್ಥಾನಕ್ಕೆ ಇದೀಗ ಕೆಕೆಆರ್ ತಂಡದ ಮಾಜಿ ವೇಗಿ ಸೇರ್ಪಡೆಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಅ.07): ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಗಾಯಗೊಂಡು ಈ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದ ಕಾರಣ, ಅವರ ಬದಲು ಸನ್‌ರೈಸರ್ಸ್ ಹೈದರಾಬಾದ್ ತಂಡ ಎಡಗೈ ವೇಗಿ ಪೃಥ್ವಿ ರಾಜ್ ಎರ್ರಾ ಅವರನ್ನು ಸೇರಿಸಿಕೊಂಡಿದೆ.
ಸದ್ಯದಲ್ಲೇ ಪೃಥ್ವಿ ರಾಜ್ ಎರ್ರಾ ಯುಎಇ ತಲುಪಲಿದ್ದಾರೆ. ಆಂಧ್ರ ಪ್ರದೇಶದ ಪೃಥ್ವಿ 11 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದು, ಕಳೆದ ವರ್ಷ ಐಪಿಎಲ್ನಲ್ಲಿ ಕೆಕೆಆರ್ ಪರ ಆಡಿದ್ದರು. ತುಂಬಾ ಕುತೂಹಲಕಾರಿ ಸಂಗತಿಯೆಂದರೆ ಐಪಿಎಲ್ನಲ್ಲಿ ಪೃಥ್ವಿ ರಾಜ್ ಎರ್ರಾ ಏಕೈಕ ವಿಕೆಟ್ ಪಡೆದಿದ್ದು, ಅದು ಸನ್‌ರೈಸರ್ಸ್ ಹಾಲಿ ನಾಯಕ ಡೇವಿಡ್ ವಾರ್ನರ್ ಅವರದ್ದು ಎನ್ನುವುದು ಮತ್ತೊಂದು ವಿಶೇಷ.
undefined
ಅಕ್ಟೋಬರ್ 02ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಇಂಜುರಿಗೆ ತುತ್ತಾಗಿದ್ದರು. ಇದೀಗ ಭುವಿ ಸ್ಥಾನವನ್ನು 22 ವರ್ಷದ ಯುವ ಎಡಗೈ ವೇಗಿ ತುಂಬಲಿದ್ದಾರೆ.
ಗಾಯದ ಮೇಲೆ ಮತ್ತೊಂದು ಬರೆ; ಐಪಿಎಲ್ ಟೂರ್ನಿಯಿಂದ ಭುವನೇಶ್ವರ್ ಕುಮಾರ್ ಔಟ್..!
Update 🚨
Bhuvneshwar Kumar is ruled out of 2020 due to injury. We wish him a speedy recovery!
Prithvi Raj Yarra will replace Bhuvi for the remainder of the season.
ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದಾಗಿ 13ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಫ್ರಾಂಚೈಸಿ ಹಾರೈಸುತ್ತದೆ. ಇನ್ನುಳಿದ ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಸ್ಥಾನವನ್ನು ಪೃಥ್ವಿ ರಾಜ್ ಎರ್ರಾ ತುಂಬಲಿದ್ದಾರೆ ಎಂದು ಸನ್‌ರೈಸರರ್ಸ್ ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿದೆ.