IPL 2020: ಇಂಗ್ಲೆಂಡ್‌ನಿಂದ 22 ಆಟಗಾರರನ್ನು ಕರೆ ತರಲು 1 ಕೋಟಿ ರುಪಾಯಿ ಖರ್ಚು..!

Suvarna News   | Asianet News
Published : Sep 09, 2020, 09:43 AM IST
IPL 2020: ಇಂಗ್ಲೆಂಡ್‌ನಿಂದ 22 ಆಟಗಾರರನ್ನು ಕರೆ ತರಲು 1 ಕೋಟಿ ರುಪಾಯಿ ಖರ್ಚು..!

ಸಾರಾಂಶ

ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರನ್ನು ಇಂಗ್ಲೆಂಡ್‌ನಿಂದ ದುಬೈಗೆ ಕರೆ ತರಲು 7 ಫ್ರಾಂಚೈಸಿಗಳು ಬರೋಬ್ಬರಿ 1 ಕೋಟಿ ರುಪಾಯಿ ಖರ್ಚು ಮಾಡಲಿದೆ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.09)‌: ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ಪ್ರವಾಸದಲ್ಲಿ ಪಾಲ್ಗೊಂಡಿರುವ ಆಟಗಾರರನ್ನು ದುಬೈಗೆ ಕರೆತರಲು ಐಪಿಎಲ್‌ನ 7 ಫ್ರಾಂಚೈಸಿಗಳು ಒಟ್ಟಾಗಿ ಒಂದು ವಿಶೇಷ ವಿಮಾನ ಕಾಯ್ದಿರಿಸಿದೆ. ಮ್ಯಾಂಚೆಸ್ಟರ್‌ನಿಂದ ದುಬೈಗೆ ಒಟ್ಟು 22 ಆಟಗಾರರು ಆಗಮಿಸಲಿದ್ದು, ಆಟಗಾರರ ಪ್ರಯಾಣಕ್ಕೆ 1 ಕೋಟಿ ರು. ಖರ್ಚು ಮಾಡಲಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ಈ ಸರಣಿಯಲ್ಲಿ ಹಾಗೂ ಇಂಗ್ಲೆಂಡ್‌ನಿಂದ ಆಗಮಿಸುವ ಆಟಗಾರರ ಪೈಕಿ ತನ್ನ ತಂಡದಲ್ಲಿ ಯಾರೂ ಇಲ್ಲದಿರುವ ಕಾರಣ ಮುಂಬೈ ಇಂಡಿಯನ್ಸ್‌, ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಿನ ಸೀಮಿತ ಓವರ್‌ ಸರಣಿ ಸೆ.16ರಂದು ಮುಕ್ತಾಯಗೊಳ್ಳಲಿದ್ದು, ಆಟಗಾರರು ಕ್ರೀಡಾಂಗಣದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ದುಬೈಗೆ ಹೊರಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

8 ರಲ್ಲಿ 7 IPL ತಂಡದಲ್ಲಿ ವಿದೇಶಿ ಕೋಚ್: ಅಸಮಾಧಾನ ವ್ಯಕ್ತಪಡಿಸಿದ ಕುಂಬ್ಳೆ

ಸ್ಟೀವ್ ಸ್ಮಿತ್, ಜೋಸ್ ಬಟ್ಲರ್(ರಾಜಸ್ಥಾನ ರಾಯಲ್ಸ್), ಡೇವಿಡ್ ವಾರ್ನರ್(ಸನ್‌ರೈಸರ್ಸ್ ಹೈದರಾಬಾದ್), ಆ್ಯರೋನ್ ಫಿಂಚ್(ರಾಯಲ್ ಚಾಲೆಂಜರ್ಸ್ ಬೆಂಗಳೂರು), ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್(ಕೋಲ್ಕತ ನೈಟ್‌ರೈಡರ್ಸ್) ಸೇರಿದಂತೆ 22 ಆಟಗಾರರು ನೇರವಾಗಿ ಮ್ಯಾಂಚೆಸ್ಟರ್‌ನಿಂದ ದುಬೈಗೆ ಬಂದಿಳಿಯಲಿದ್ದಾರೆ. 

13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI