ಒಂದು ವೇಳೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದೇ ಹೋದರೆ ಯುಎಇನಲ್ಲಿ ಐಪಿಎಲ್ ಆಯೋಜಿಸುವ ಕುರಿತಂತೆ ಬಿಸಿಸಿಐ ಪ್ಲಾನ್ ರೂಪಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.15): ಈ ವರ್ಷ ಶತಾಯ ಗತಾಯ ಐಪಿಎಲ್ ಟಿ20 ಟೂರ್ನಿ ನಡೆಸಬೇಕು ಎಂದು ಪಟ್ಟು ಹಿಡಿದಿರುವ ಬಿಸಿಸಿಐ, ಭಾರತದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ.
ಮೂಲಗಳ ಪ್ರಕಾರ, ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಇ)ನಲ್ಲಿ ಐಪಿಎಲ್ ನಡೆಸುವುದು ಬಿಸಿಸಿಐನ ಪ್ಲ್ಯಾನ್ ‘ಎ’ ಎನ್ನಲಾಗಿದೆ. ಅಬುಧಾಬಿ, ದುಬೈ ಹಾಗೂ ಶಾರ್ಜಾದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣಗಳಿದ್ದು, ಆಟಗಾರರು ಉಳಿದುಕೊಳ್ಳಲು ಸಮೀಪದಲ್ಲೇ ಹೋಟೆಲ್‌ಗಳಿವೆ. ಆಟಗಾರರ ಸುರಕ್ಷತೆಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವುದಾಗಿ ಯುಎಇ ಕ್ರಿಕೆಟ್ ಮಂಡಳಿ ಭರವಸೆ ನೀಡಿದೆ.
undefined
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!
2014ರ ಐಪಿಎಲ್ನ ಮೊದಲ 20 ಪಂದ್ಯಗಳು ಯುಎಇನಲ್ಲಿ ನಡೆದಿದ್ದವು. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಬಿಸಿಸಿಐ ಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ವಿದೇಶಕ್ಕೆ ಸ್ಥಳಾಂತರಿಸಬೇಕಾದ ಪರಿಸ್ಥಿತಿ ಎದುರಾದರೆ ಯುಎಇ ಮೊದಲ ಆಯ್ಕೆ ಆಗಿರಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನು ಶ್ರೀಲಂಕಾದಲ್ಲಿಯೂ ಐಪಿಎಲ್ ಆಯೋಜಿಸುವ ಆಯ್ಕೆ ಬಿಸಿಸಿಐ ಮುಂದಿದೆ. ಆದರೆ ಇತ್ತೀಚೆಗೆ ದ್ವೀಪರಾಷ್ಟ್ರದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಹೊರತಾಗಿ ಭಾರತದಲ್ಲೇ ಖಾಲಿ ಕ್ರೀಡಾಂಗಣದಲ್ಲಿ ಬಿಸಿಸಿಐ ಐಪಿಎಲ್ ಆಯೋಜಿಸಿದರೆ, ಅಚ್ಚರಿಪಡಬೇಕಾಗಿಲ್ಲ. ಫ್ರಾಂಚೈಸಿ ವಲಯದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಆಯೋಜನೆಗೆ ಪರ-ವಿರೋಧಗಳು ವ್ಯಕ್ತವಾಗಿವೆ.