ಕೆಲ್ಸ, ಹುಡುಗಿಗಾಗಿ ಬೇಡಲ್ಲ, RCB ಕಪ್ ಗೆಲ್ಲಲಿ ಎಂದು ತಾಯಿ ಚಾಮುಂಡಿ ಪೂಜೆ!

Suvarna News   | Asianet News
Published : Mar 09, 2020, 08:08 PM ISTUpdated : Mar 09, 2020, 09:26 PM IST
ಕೆಲ್ಸ, ಹುಡುಗಿಗಾಗಿ ಬೇಡಲ್ಲ, RCB ಕಪ್ ಗೆಲ್ಲಲಿ ಎಂದು  ತಾಯಿ ಚಾಮುಂಡಿ ಪೂಜೆ!

ಸಾರಾಂಶ

ಕಳೆದ 12 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ಕೂರಗು ಇದೆ. ಆದರೆ ಈ ಬಾರಿ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಅಭಿಮಾನಿಗಳ ವಿಶೇಶ ಪ್ರಾರ್ಥನೆ ಇದೀಗ ವೈರಲ್ ಆಗಿದೆ.

ಮೈಸೂರು(ಮಾ.09): ಮಾರಿ ಕಣ್ಣು, ನಾಯಿ ಕಣ್ಣು, ನರಿ ಕಣ್ಣು ಯಾವುದೇ ಕಣ್ಣಿದ್ದರೂ ಆರ್‌ಸಿಬಿ ತಾಗದಿರಲಿ. ಆರ್‌ಸಿಬಿಗೆ ಜೈ, ತಾಯಿ ಚಾಮುಂಡಿ ಅಮ್ಮ ನಮಗೆ ಕೊಡಬೇಡ ಕೈ ಎಂದು ರಾಯಲ್ ಚಾಲೆಂಜರ್ಸ್ ಮೈಸೂರು ಅಭಿಮಾನಿಗಳು  ಚಾಮುಂಡಿ ಅಮ್ಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

IPL 2020: ಆರ್‌ಸಿಬಿ ತಂಡದ ಸಹಾಯಕ ಸಿಬ್ಬಂದಿಯ ಸಂಪೂರ್ಣ ಲಿಸ್ಟ್!

RCB ಅಭಿಮಾನಿಗಳ ಗುಂಪು ಚಾಮಂಡಿ ಅಮ್ಮ ದೇವಸ್ಥಾನಕ್ಕೆ ತೆರಳಿ ಆರ್‌ಸಿಬಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ನಾನು ಕೆಲಸ್ಸಾಗಿ ಬೇಡಲ್ಲ, ಹಳೇ ಹುಡುಗಿ ವಾಪಸ್ ಬರಲಿ ಎಂದು ಕೇಳಿಕೊಳ್ಳಲ್ಲ. ಆದರೆ ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಬೇಡುತ್ತಿದ್ದೇನೆ. ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಹಾಗೆ ಮಾಡು ಎಂದು ಅಭಿಮಾನಿಗಳ ಗುಂಪು ಪಾರ್ಥನೆ ಸಲ್ಲಿಸಿದೆ.

 

ಮತ್ತೊಮ್ಮೆ ಅಭಿಮಾನಿಗಳ ಹೃದಯಗೆದ್ದ RCB..!

ಮಾಡಿಲ್ಲ ತಪ್ಪು ಈ ಸಲ ಬರ್ಬೇಕು ಕಪ್, ಜೈ ಆರ್‌ಸಿಬಿ ಎಂದು ಅಭಿಮಾನಿಗಳ ಗುಂಪು ತಂಡದ ಧ್ವಜಕ್ಕೆ ಆರತಿ ಎತ್ತಿ ಕಾಯಿ ಒಡೆದಿದ್ದಾರೆ. ಈಗಾಗಲೇ ಅಭಿಮಾನಿಗಳು ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇತ್ತ ಬಲಿಷ್ಠ ತಂಡ ಕಟ್ಟಿರುವ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. 

ಮಾರ್ಚ್ 29 ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಆದರೆ ಕೊರೋನಾ ವೈರಸ್ ಭೀತಿ ಐಪಿಎಲ್‌ಗೂ ಕಾಡುತ್ತಿದೆ. ಆದರೆ ವೇಳಾಪಟ್ಟಿ ಪ್ರಕಾರ ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. 

News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!