ಆರ್‌ಸಿಬಿ ಗೆಲುವಿಗೆ ಅಭಿಮಾನಿಗಳ ಅಭಿಮಾನ ವೈರಲ್..!

By Suvarna News  |  First Published Nov 2, 2020, 4:03 PM IST

ಇಂಡಿಯನ್ ಪ್ರೀಮಿಯನ್ ಲೀಗ್ 2020ರ ಲೀಗ್ ಹಂತದ ಕೊನೆ ಪಂದ್ಯ ಆಡಲು ಸಜ್ಜಾಗಿರುವ ಆರ್‌ಸಿಬಿ ತಂಡದ ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.


ರಾಯಚೂರು, (ನ.02): ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಅಂತಿಮ ಘಟಕ್ಕೆ ಬಂದಿದೆ. ಅದರಲ್ಲೂ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್‌ಗೆ ಎಂಟ್ರಿ ಕೊಡಬೇಕಿದ್ದರೆ ಇಂದು (ಸೋಮವಾರ) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲಲೇಬೇಕಿದೆ.

 ಮತ್ತೊಂದೆಡೆ ಆರ್‌ಸಿಬಿ ಗೆಲ್ಲಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಹೌದು...ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಂಡದ ಗೆಲುವಿಗಾಗಿ ರುದ್ರಾಭಿಷೇಕ ಮಾಡಿಸುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. 

Tap to resize

Latest Videos

undefined

IPL 2020: ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಫೈಟ್

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ  ರುದ್ರಾಭಿಷೇಕ ಮಾಡಿಸಿ ಗಮನಸೆಳೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. 

RCB ಸಂಭಾವ್ಯ ತಂಡ: ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಪಡೆಯಲ್ಲಿ 2 ಬದಲಾವಣೆ?

ಇಂದಿನ ಪಂದ್ಯ ಡೆಲ್ಲಿ ಹಾಗೂ ಕೊಹ್ಲಿ ಬಳಗಕ್ಕೆ ಮಹತ್ವದಾಗಿದ್ದು, ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಆ ತಂಡ ಪ್ಲೇ ಆಫ್‌ನಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಸೆಣಸಲಿದೆ.

ಒಟ್ಟಿನಲ್ಲಿ ತೀವ್ರ ಕುತೂಹಲ ಕೆರಳಿಸಿರು ಇವತ್ತಿನ ಮ್ಯಾಚ್ , ಅಭಿಮಾನಿಗಳ ಪೂಜೆ ಪುನಸ್ಕಾರ, ಹಾರೈಕೆಯಿಂದ ಆರ್‌ಸಿಬಿ ಗೆಲ್ಲುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

click me!