ಟೂರ್ನಿಯಿಂದ ಹೊರಬಿತ್ತು ರಾಜಸ್ಥಾನ, ಕೆಕೆಆರ್‌ಗೆ ಪ್ಲೇ ಆಫ್ ಆಸೆ ಜೀವಂತ!

By Suvarna News  |  First Published Nov 1, 2020, 11:19 PM IST

ಪ್ಲೇ ಆಫ್ ಸ್ಥಾನಕ್ಕೇರಲು ಕಠಿಣ ಹೋರಾಟ, ಒಂದೊಂದೆ ತಂಡಗಳು ಟೂರ್ನಿಯಿಂದ ಹೊರಬೀಳುತ್ತಿದೆ. ಇದೀಗ ಸಿಎಸ್‌ಕೆ, ಪಂಜಾಬ್ ಬಳಿಕ ರಾಜಸ್ಥಾನ ರಾಯಲ್ಸ್ ಹೊರಬಿದ್ದಿದೆ. ಇತ್ತ ಕೆಕೆಆರ್ ಅದೃಷ್ಟ ಖುಲಾಯಿಸಿದೆ.


ದುಬೈ(ನ.01): 13ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ರಾಜಸ್ಥಾನ ರಾಯಲ್ಸ್ ಹೊರಬಿದ್ದಿದೆ. ಕೆಕೆಆರ್ ವಿರುದ್ಧ ಮುಗ್ಗರಿಸೋ ಮೂಲಕ ರಾಜಸ್ಥಾನ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಇತ್ತ 60 ರನ್ ಗೆಲುವು ದಾಖಲಿಸಿದ ಕೆಕೆಆರ್ ಪ್ಲೇ ಆಫ್ ಅವಕಾಶ ಜೀವಂತವಾಗಿದೆ.  ಆದರೆ ಇತರ ತಂಡದ ನೆಟ್‌ರನ್ ಮೇಲೆ ಕೆಕೆಆರ್ ಪ್ಲೇ ಆಫ್ ಅವಲಂಬಿತವಾಗಿದೆ.

ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ 192 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ರಾಬಿನ್ ಉತ್ತಪ್ಪ 6 ರನ್ ಸಿಡಿಸಿ ಔಟಾದರು. ಬೆನ್ ಸ್ಟೋಕ್ಸ್ 18 ರನ್ ಸಿಡಿಸಿ ನಿರ್ಗಮಿಸಿದರು. 27 ರನ್‌ಗೆ ರಾಜಸ್ಥಾನ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Latest Videos

undefined

ನಾಯಕ ಸ್ಟೀವ್ ಸ್ಮಿತ್ ಕೇವಲ 4 ರನ್ ಸಿಡಿಸಿ ಔಟಾದರು. ಸಂಜು ಸಾಮ್ಸನ್ ಅಬ್ಬರಿಸಲಿಲ್ಲ. ಸ್ಯಾಮ್ಸನ್ 1 ರನ್ ಸಿಡಿಸಿ ಔಟಾದರು. ಜೋಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಸರೆಯಾದರು. ಆದರೆ ರಿಯಾನ್ ಪರಾಗ್ ಶೂನ್ಯ ಸುತ್ತಿದರು. ಬಟ್ಲರ್ ಹಾಗೂ ರಾಹುಲ್ ಟಿವಾಟಿಯಾ ಜೊತೆಯಾಟ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿಸಿತು.

ಜೋಸ್ ಬಟ್ಲರ್ 35 ರನ್ ಸಿಡಿಸಿ ಔಟಾದರು. ಇತ್ತ ರಾಹುಲ್ ಟಿವಾಟಿಯಾ ಬ್ಯಾಟಿಂಗ್ ಮುಂದುವರಿಸಿದರು. ಟಿವಾಟಿಯಾ 31 ರನ್ ಸಿಡಿಸಿ ನಿರ್ಗಮಿಸಿದರು. ಅಷ್ಟರಲ್ಲೇ ರಾಜಸ್ಥಾನ ರಾಯಲ್ಸ್ ಮತ್ತೆ ಸೋಲಿನ ಸುಳಿಗೆ ಸಿಲುಕಿತು. 

ಶ್ರೇಯಸ್ ಗೋಪಾಲ್ ಅಜೇಯ ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 131 ರನ್ ರನ್‌ ಸಿಡಿಸಿ ಸೋಲಿಗೆ ಶರಣಾಯಿತು. ಇಷ್ಟೇ ಅಲ್ಲ 13ನೇ ಆವೃತ್ತಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿತು. ಇತ್ತ ಕೆಕೆಆರ್ 60 ರನ್ ಗೆಲುವು ಸಾಧಿಸಿ, ಅಂಕಪಟ್ಟಿಲ್ಲಿ 4ನೇ ಸ್ಥಾನಕ್ಕೇರಿದೆ. ಇಷ್ಟೇ ಅಲ್ಲ  ಪ್ಲೇ ಆಫ್ ಅವಕಾಶ ಜೀವಂತವಾಗಿದೆ. 
 

click me!