
ಕೋಲ್ಕತಾ(ಡಿ.19): ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ 8 ಫ್ರಾಂಚೈಸಿಗಳು ಖರೀದಿಗೆ ಪೈಪೋಟಿ ನಡೆಸುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ಆಟಗಾರರ ಖರೀದಿಯಲ್ಲಿ ಎಚ್ಚರಿಕೆ ವಹಿಸಿದೆ. ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್‌ಗೆ 5.25 ಕೋಟಿ ರೂಪಾಯಿ ಖರೀದಿಸಿದೆ. ವಿಶ್ವದ ಅತ್ಯುತ್ತಮ ನಾಯಕನ್ನು ಖರೀದಿಸಿದ ಕೆಕೆಆರ್, ಇದೀಗ 2020ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ಆಟಗಾರನ ಹೆಸರನ್ನು ಬಹಿರಂಗ ಪಡಿಸಿದೆ.
Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?
15.5 ಕೋಟಿ ರೂಪಾಯಿ ನೀಡಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಖರೀದಿಸಿದ ಕೆಕೆಆರ್ ಇದೀಗ ಇಯಾನ್ ಮಾರ್ಗನ್ ಖರೀದಿ ಮಾಡಿದೆ. ಖರೀದಿ ಬಳಿಕ ಮಾತನಾಡಿದ ಕೆಕೆಆರ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಂ ಮುಂದಿನ ಆವೃತ್ತಿಯಲ್ಲಿ ದಿನೇಶ್ ಕಾರ್ತಿಕ್ ತಂಡವನ್ನು ಮುನ್ನಡೆಸಲಿದ್ದಾರೆ. ಇಯಾನ್ ಮಾರ್ಗನ್ ಶ್ರೇಷ್ಠ ನಾಯಕ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಈಗಾಗಲೇ ಕಾರ್ತಿಕ್ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದಾರೆ ಎಂದು ಮೆಕಲಂ ಹೇಳಿದ್ದಾರೆ.
ಕೆಕೆಆರ್ ತನ್ನ ಟ್ವಿಟರ್ ಖಾತೆಯಲ್ಲೂ ದಿನೇಶ್ ಕಾರ್ತಿಕ್ ತಂಡದ ನಾಯಕ ಎಂದು ಸ್ಪಷ್ಟಪಡಿಸಿದೆ. ಗೌತಮ್ ಗಂಭೀರ್ ನಿರ್ಗಮನದ ಬಳಿಕ ಕೆಕೆಆರ್ ನಾಯಕತ್ವದ ಜವಾಬ್ದಾರಿ ದಿನೇಶ್ ಕಾರ್ತಿಕ್ ಹೆಗಲೇರಿದೆ. ಆದರೆ ಕಾರ್ತಿಕ್ ನಾಯಕತ್ವದಲ್ಲಿ ಕೆಕೆಆರ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.