ಧೋನಿ to ಉನಾದ್ಕಟ್: ಪ್ರತಿ IPL ಆವೃತ್ತಿಯ ದುಬಾರಿ ಆಟಗಾರರ ಲಿಸ್ಟ್!

By Suvarna NewsFirst Published Dec 17, 2019, 9:03 PM IST
Highlights

ಐಪಿಎಲ್ ಟೂರ್ನಿ ಕಳೆದ 12 ಆವೃತ್ತಿಗಳಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಯಾರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲಾಗಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕೋಲ್ಕತಾ(ಡಿ.17): ಐಪಿಎಲ್ ಹರಾಜಿಗೆ 8 ಫ್ರಾಂಚೈಸಿಗಳು ಸದ್ದಿಲ್ಲದೆ ಪ್ಲಾನ್ ರೆಡಿ ಮಾಡುತ್ತಿವೆ. ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಈ ಬಾರಿ ಯಾರು ಗರಿಷ್ಠ ಮೊತ್ತಕ್ಕೆ ಸೇಲ್ ಆಗಲಿದ್ದಾರೆ ಅನ್ನೋದನ್ನು ಎಲ್ಲರೂ ಎದುರನೋಡುತ್ತಿದ್ದಾರೆ.  ಕಳೆದ 12 ಆವೃತ್ತಿಗಳಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾಗೋ ಮೂಲಕ ಹಲವು ಕ್ರಿಕೆಟಿಗರು ವಿಶ್ವದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಯಾರಿಗೆ ಸಿಗಲಿದೆ ಐಪಿಎಲ್‌ ಜಾಕ್‌ಪಾಟ್‌?.

2008 ರ ಚೊಚ್ಚಲ ಆವೃತ್ತಿ ಐಪಿಎಲ್ ಟೂರ್ನಿಯಿಂದ 2019ರ ವರೆಗಿನ ಟೂರ್ನಿಗಳಲ್ಲಿ ಗರಿಷ್ಠ ಮೊತ್ತಕ್ಕೆ ಹಲವು ಕ್ರಿಕೆಟಿಗರು ಸೇಲಾಗಿದ್ದಾರೆ. ಅತೀ ಹೆಚ್ಚು ಮೊತ್ತಕ್ಕೆ ಸೇಲಾದ ಆಟಗಾರರ ಪೈಕಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಕೆಲವರು ಅಚ್ಚರಿ ಮೊತ್ತಕ್ಕೂ ಬಿಡ್ ಆಗಿದ್ದಾರೆ. ಪ್ರತಿ ಹರಾಜಿನಲ್ಲಿ ದುಬಾರಿ  ಹಣೆ ಪಟ್ಟಿ ಹೊತ್ತ ಆಟಗಾರರ ಲಿಸ್ಟ್ ಇಲ್ಲಿದೆ.

ಆವೃತ್ತಿ: 2008
ಕ್ರಿಕೆಟಿಗ: ಎಂ.ಎಸ್.ಧೋನಿ
ಬೆಲೆ: 9.5 ಕೋಟಿ
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಆವೃತ್ತಿ:  2009
ಕ್ರಿಕೆಟಿಗ: ಕೆವಿನ್ ಪೀಟರ್ಸನ್, ಆಂಡ್ಯ್ರೂ ಫ್ಲಿಂಟಾಫ್
ಬೆಲೆ: 9.8 ಕೋಟಿ
ಖರೀದಿಸಿದ ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂಲು, ಚೆನ್ನೈ ಸೂಪರ್ ಕಿಂಗ್ಸ್

ಆವೃತ್ತಿ: 2010
ಕ್ರಿಕೆಟಿಗ: ಕೀರನ್ ಪೊಲಾರ್ಡ್
ಬೆಲೆ: 3.5 ಕೋಟಿ
ಖರೀದಿಸಿದ ತಂಡ: ಮುಂಬೈ ಇಂಡಿಯನ್ಸ್,

ಆವೃತ್ತಿ: 2011
ಕ್ರಿಕೆಟಿಗ: ಗೌತಮ್ ಗಂಭೀರ್
ಬೆಲೆ: 11.04
ಖರೀದಿಸಿದ ತಂಡ: ಕೋಲ್ಕತಾ ನೈಟ್ ರೈಡರ್ಸ್ 

ಆವೃತ್ತಿ: 2012
ಕ್ರಿಕೆಟಿಗ: ರವೀಂದ್ರ ಜಡೇಜಾ
ಬೆಲೆ: 12 ಕೋಟಿ
ಖರೀದಿಸಿದ ತಂಡ: ಚೆನ್ನೈ ಸೂಪರ್ ಕಿಂಗ್ಸ್

ಆವೃತ್ತಿ: 2013
ಕ್ರಿಕೆಟಿಗ: ಗ್ಲೆನ್  ಮ್ಯಾಕ್ಸ್‌ವೆಲ್
ಬೆಲೆ: 5.3 ಕೋಟಿ 
ಖರೀದಿಸಿದ ತಂಡ: ಮುಂಬೈ ಇಂಡಿಯನ್ಸ್

ಆವೃತ್ತಿ: 2014
ಕ್ರಿಕೆಟಿಗ: ಯುವರಾಜ್ ಸಿಂಗ್
ಬೆಲೆ: 14 ಕೋಟಿ
ಖರೀದಿಸಿದ ತಂಡ:ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆವೃತ್ತಿ: 2015
ಕ್ರಿಕೆಟಿಗ: ಯುವರಾಜ್ ಸಿಂಗ್ 
ಬೆಲೆ: 16 ಕೋಟಿ
ಖರೀದಿಸಿದ ತಂಡ: ಡೆಲ್ಲಿ ಡೇರ್‌ಡೆವಿಲ್ಸ್

ಆವೃತ್ತಿ: 2016
ಕ್ರಿಕೆಟಿಗ:  ಶೇನ್ ವ್ಯಾಟ್ಸನ್
ಬೆಲೆ:  9.5 ಕೋಟಿ
ಖರೀದಿಸಿದ ತಂಡ:  ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆವೃತ್ತಿ: 2017
ಕ್ರಿಕೆಟಿಗ: ಬೆನ್ ಸ್ಟೋಕ್ಸ್
ಬೆಲೆ:  14.5 ಕೋಟಿ
ಖರೀದಿಸಿದ ತಂಡ:  ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್

ಆವೃತ್ತಿ: 2018
ಕ್ರಿಕೆಟಿಗ: ಬೆನ್ ಸ್ಟೋಕ್ಸ್
ಬೆಲೆ: 12.5 ಕೋಟಿ
ಖರೀದಿಸಿದ ತಂಡ:  ರಾಜಸ್ಥಾನ ರಾಯಲ್ಸ್

ಆವೃತ್ತಿ: 2019
ಕ್ರಿಕೆಟಿಗ: ಜಯದೇವ ಉನಾದ್ಕಟ್, ವರುಣ್ ಚಕ್ರವರ್ತಿ
ಬೆಲೆ:  8.4 ಕೋಟಿ
ಖರೀದಿಸಿದ ತಂಡ:  ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್

 

click me!