13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಜಾಹೀರಾತು ಬಿಡುಗಡೆಯಾಗಿದೆ. ಜಾಹೀರಾತಿನಲ್ಲಿ ಎಂ.ಎಸ್.ಧೋನಿ ಈ ಬಾರಿಯ ಐಪಿಎಲ್ ಆಡ್ತಾರೋ ಇಲ್ವೋ ಅನ್ನೋ ಪ್ರಶ್ನೆ ಹಾಕಲಾಗಿತ್ತು. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಿರುಗೇಟು ನೀಡಿದೆ.
ಚೆನ್ನೈ(ಫೆ.23): 2020ರ ಐಪಿಎಲ್ ಟೂರ್ನಿ ಚಟುವಟಿಕೆ ಆರಂಭಗೊಂಡಿದೆ. 13ನೇ ಆವೃತ್ತಿ ಐಪಿಎಲ್ ಟೂರ್ನಿ ಜಾಹೀರಾತು ಬಿಡುಗಡೆಯಾಗಿದೆ. ಜಾಹೀರಾತಿನ ಆರಂಭದಲ್ಲೇ ಎಂ.ಎಸ್.ಧೋನಿ ಈ ಭಾರಿಯ ಐಪಿಎಲ್ ಆಡ್ತಾರಾ ಅನ್ನೋ ಪ್ರಶ್ನೆ ಹಾಕಲಾಗಿತ್ತು. ಇದಕ್ಕೆ ಚೆನ್ನೈ ಫೋಟೋ ಶೇರ್ ಮಾಡೋ ಮೂಲಕ ತಿರುಗೇಟು ನೀಡಿದೆ.
ಇದನ್ನೂ ಓದಿ: ಶುರುವಾಯ್ತು IPL 2020 ಜ್ವರ, ಮೊದಲ ಜಾಹೀರಾತು ಸೂಪರ್ ಹಿಟ್!
undefined
ಎಂ.ಎಸ್.ಧೋನಿ, ಐಪಿಎಲ್ ನೂತನ ಜಾಹೀರಾತು ವೀಕ್ಷಿಸುತ್ತಿರುವ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಈ ಮೂಲಕ ಧೋನಿ 13ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ ಅನ್ನೋ ಪರೋಕ್ಷ ಸೂಚನೆಯನ್ನು ನೀಡಿದೆ.
ಇದನ್ನೂ ಓದಿ: IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!
2019ರ ವಿಶ್ವಕಪ್ ಟೂರ್ನಿ ಬಳಿಕ ಎಂ.ಎಸ್.ಧೋನಿ ಟೀಂ ಇಂಡಿಯಾ ಹಾಗೂ ದೇಸಿ ಟೂರ್ನಿಗಳಲ್ಲಿ ಕಾಣಿಸಿಕೊಂಡಿಲ್ಲ. ಧೋನಿ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಅಭಿಮಾನಿಗಳ ಕುತೂಹಲ ಐಪಿಎಲ್ ಟೂರ್ನಿಯತ್ತ ನೆಟ್ಟಿದೆ.