IPL 2020 ಟೂರ್ನಿ ತಯಾರಿ ಅಂತಿಮ ಹಂತದಲ್ಲಿದೆ. ಅತೀ ದೊಡ್ಡ ಕ್ರಿಕೆಟ್ ಲೀಗ್ ಟೂರ್ನಿಗೆ 8 ಫ್ರಾಂಚೈಸಿಗಳು ಸಜ್ಜಾಗಿದೆ. ಇದರ ಬೆನ್ನಲ್ಲೇ 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಜಾಹೀರಾತು ಬಿಡುಗಡೆಯಾಗಿದೆ. 8 ಫ್ರಾಂಚೈಸಿ ಕಾಲೆಳೆದಿರುವ ನೂತನ ಜಾಹೀರಾತು ಕ್ಷಣಾರ್ಧದಲ್ಲೇ ಸೂಪರ್ ಹಿಟ್ ಆಗಿದೆ.
ಮುಂಬೈ(ಫೆ.23): ಭಾರತದಲ್ಲಿ ಅತೀ ದೊಡ್ಡ ಕ್ರಿಕೆಟ್ ಹಬ್ಬ ಐಪಿಎಲ್ ಜ್ವರ ಆವರಿಸುತ್ತಿದೆ. ಬಿಸಿಸಿಐ ತಯಾರಿ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೇ 2020ರ ಸಾಲಿನ ಮೊದಲ ಜಾಹೀರಾತು ಬಿಡುಗಡೆಯಾಗಿದೆ. ಐಪಿಎಲ್ ಅಭಿಯಾನದ ಮೊದಲ ಟೀಸರ್ ಸೂಪರ್ ಹಿಟ್ ಆಗಿದೆ.
ಇದನ್ನೂ ಓದಿ: IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!
undefined
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಈ ಬಾರಿ ಆಡುತ್ತಾರೋ ಅಥವಾ ವಿಶ್ರಾಂತಿ ಪಡೆಯುತ್ತಾರ ಅನ್ನೋ ಪ್ರಶ್ನೆ, ರಾಯಲ್ ಚಾಲೆಂಜರ್ಸ್ ತಂಡ 13ನೇ ಆವೃತ್ತಿಯಲ್ಲಾದರೂ ಕಪ್ ಗೆಲ್ಲುತ್ತಾ ಅನ್ನೋ ಚಾಲೆಂಜ್, ಈ ಜಾಹೀರಾತಿನ ಹೈಲೈಟ್ಸ್.
The stage is set 🏟️ and the banter is 🔛
Ahead of the 2020, keep the banter coming and get set for March 29, jab on 📺📺 and Hotstar! 😎😎
The IPL Carnival begins soon 💪💪 pic.twitter.com/DXCrNDX722
ಇದನ್ನೂ ಓದಿ: ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!
8 ಫ್ರಾಂಚೈಸಿಗಳ ಕಾಲೆಳೆದಿರುವ ನೂತನ ಜಾಹೀರಾತನ್ನು ಐಪಿಎಲ್ ಆಧೀಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಬಿಸಿಸಿಐ ಪೋಸ್ಟ್ ಮಾಡಿದೆ ಕೆಲವೇ ನಿಮಿಷಗಳಲ್ಲಿ ಜಾಹೀರಾತಿಗೆ ಲಕ್ಷಕ್ಕೂ ಅಧಿಕನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.