ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಐಪಿ​ಎಲ್‌?

By Suvarna News  |  First Published Jun 16, 2020, 5:10 PM IST

ಈ ವರ್ಷ ಐಪಿಎಲ್ ನಡೆಸಲು ಶತಾಯಗತಾಯ ಪ್ರಯತ್ನದಲ್ಲಿರುವ ಬಿಸಿಸಿಐ ಈ ಕುರಿತಂತೆ ಹೊಸದೊಂದು ಪ್ಲಾನ್ ರೂಪಿಸಿದೆ. ಹೀಗಾದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಬಹುತೇಕ ಟೂರ್ನಿಗಳು ನಡೆಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವ​ದೆ​ಹ​ಲಿ(ಜೂ.16): ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿ​ಸಿ​ಸಿಐ) ಈ ವರ್ಷ ಐಪಿ​ಎಲ್‌ ಟೂರ್ನಿ​ಯನ್ನು ನಡೆ​ಸಿಯೇ ತೀರಲು ನಿರ್ಧ​ರಿ​ಸಿದೆ. ಇದೇ ಸೆಪ್ಟೆಂಬರ್‌ 26ರಿಂದ ನವೆಂಬರ್ 08ರ ವರೆಗೂ ಟೂರ್ನಿ ನಡೆ​ಸಲು ತಾತ್ಕಾ​ಲಿಕ ವೇಳಾ​ಪ​ಟ್ಟಿ​ಯನ್ನು ಸಿದ್ಧ​ಪ​ಡಿ​ಸ​ಲಾ​ಗಿದೆ ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರದಿ ಮಾಡಿದೆ. 

ಈ ಅವ​ಧಿ​ಯಲ್ಲಿ ದಿನಕ್ಕೆ 2 ಪಂದ್ಯಗಳಂತೆ 60 ಪಂದ್ಯ​ಗ​ಳನ್ನು ನಡೆ​ಸಲು ಚಿಂತನೆ ನಡೆ​ಸ​ಲಾ​ಗಿದೆ ಎನ್ನ​ಲಾ​ಗಿದೆ. ಸೆಪ್ಟೆಂಬರ್‌ ವೇಳೆಗೆ ದೇಶ​ದಲ್ಲಿ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರ​ದಿ​ದ್ದರೆ ಟೂರ್ನಿ​ಯನ್ನು ಸ್ಥಳಾಂತ​ರ​ಗೊ​ಳಿ​ಸಲು ಸಹ ಸಿದ್ಧತೆ ಆರಂಭಿ​ಸ​ಲಾ​ಗಿದೆ ಎನ್ನ​ಲಾ​ಗಿದೆ. ಈ ಬಾರಿ ಪ್ಲೇ-ಆಫ್‌ ಮಾದರಿ ಬದ​ಲಿಗೆ ಅಗ್ರ 4 ತಂಡ​ಗ​ಳು ಸೆಮಿ​ಫೈ​ನಲ್‌ ಪ್ರವೇ​ಶಿ​ಸ​ಲಿವೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

Latest Videos

undefined

ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾನ್ಸೂನ್ ಮುಗಿಯಲಿರುವುದರಿಂದ ಹೆಚ್ಚಿನ ಪಂದ್ಯಾವಳಿಗಳನ್ನು ದಕ್ಷಿಣ ಭಾರತದಲ್ಲಿ ಆಯೋಜಿಸಲು ಬಿಸಿಸಿಐ ಚಿಂತನೆ ಮಾಡಿದೆ ಎನ್ನಲಾಗಿದೆ. ಹೀಗಾದಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಅರ್ಧ ಭಾಗದ ಐಪಿಎಲ್ ನಡೆಯುವ ಸಾಧ್ಯತೆಯಿದೆ. ಇನ್ನು ಮುಂಬೈನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ವಾಂಖೆಡೆ ಮೈದಾನದಲ್ಲಿ ಟೂರ್ನಿ ಆಯೋಜನೆ ಕಷ್ಟಸಾಧ್ಯ ಎನಿಸಿದೆ. 

ಕೇವಲ 7 ನಿಮಿಷದಲ್ಲಿ ಭಾರ​ತದ ಕೋಚ್‌ ಆಗಿದ್ದ ಕರ್ಸ್ಟನ್‌

ಕೆಲವು ದಿನಗಳ ಹಿಂದಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಖಾಲಿ ಮೈದಾನದಲ್ಲಾದರೂ ಸರಿ, ಐಪಿಎಲ್ ಈ ವರ್ಷ ನಡಿಸಿಯೇ ಸಿದ್ದ ಎಂದು ಹೇಳಿದ್ದರು. ಇದರ ಜೊತೆಗೆ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸಿದ್ದವಾಗಿರುವಂತೆ ಇ-ಮೇಲ್ ಕಳಿಸಿದ್ದರು. ಒಂದು ವೇಳೆ ಈ ವರ್ಷ ಟಿ20 ವಿಶ್ವಕಪ್ ನಡೆಯದೇ ಹೋದರೆ ಐಪಿಎಲ್ ಟೂರ್ನಿ ಆಯೋಜಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಸಿಸಿಐ. 

click me!